ಟೇಕಲ್ ಜಲ್ಲಿಗೆ ಎಲ್ಲೆಲ್ಲೂ ಬೇಡಿಕೆ
ಟೇಕಲ್: ಟೇಕಲ್ನ ಜಲ್ಲಿ 4 ರಾಜ್ಯಗಳಲ್ಲಿ ಬೇಡಿಕೆ ಇದ್ದು ಪ್ರತಿದಿನ ಜಲ್ಲಿ ಹೊತ್ತ ಗೂಡ್ಸ್ ರೈಲು ಟೇಕಲ್ ನಿಲ್ದಾಣದಿಂದ ಇತರೆ ಪ್ರದೇಶಗಳಿಗೆ ರವಾನಿಸುತ್ತದೆ.
ರಾಜ್ಯದ ಜೊತೆಗೆ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ರಾಜ್ಯಗಳ ಕೇಂದ್ರ ಸರ್ಕಾರದ ಅಡಿಯಲ್ಲಿ ರೇಲ್ವೆ ಕಾಮಗಾರಿಗಳಿಗೆ ಈ ಜಲ್ಲಿ ಬೇಕಾಗುತ್ತದೆ. ಕರ್ನಾಟಕದ ನೈರುತ್ಯ ರೈಲ್ವೆ ಕಾಮಗಾರಿ ಹಾಗೂ ಆಂಧ್ರದ ಕುಪ್ಪಂ, ತಿರುಪತಿ, ವಿಜಯವಾಡ, ವಿಶಾಖಪಟ್ನಂ, ತಮಿಳುನಾಡಿನ ರಾಜಧಾನಿ ಚೆನೈ, ಜೋಲಾರ್ ಪೇಟೆ, ಅರಕೋಣಂ ಮುಂತಾದ ಪ್ರದೇಶಗಳಿಗೆ ಹಾಗೂ ಮಹಾರಾಷ್ಟ್ರದ ಗಡಿಯವರೆಗೂ ಟೇಕಲ್ ಜಲ್ಲಿ ವ್ಯಾಪಿಸಿದೆ.
ಟೇಕಲ್ ರೈಲು ನಿಲ್ದಾಣದಿಂದ ಪ್ರತಿವಾರ 4 ರಿಂದ 5 ಬಾರಿ ಸುಮಾರು 10 ರಿಂದ 15 ಗೂಡ್ಸ್ ಭೋಗಿಗಳಲ್ಲಿ ಜಲ್ಲಿ ತುಂಬಿ ಹೊರಡುತ್ತದೆ. ಇದು ರೇಲ್ವೆ ಸೇತುವೆ, ರೇಲ್ವೆ ನಿಲ್ದಾಣ ನಿರ್ಮಾಣಗಳಿಗೆ ಹಾಗೂ ರೇಲ್ವೆ ಹಳಿಗಳ ಅಕ್ಕಪಕ್ಕ ಹಾಕಲು ಬಳಸಲಾಗುತ್ತದೆ. ಈ ಜಲ್ಲಿಯನ್ನು ರೈಲು ನಿಲ್ದಾಣದ ಗೂಡ್ಸ್ ಶೆಡ್ಗೆ ರವಾನಿಸಲು ಕ್ರಷರ್ ಉದ್ಯಮಿ ರಂಗಪ್ಪ ಗುತ್ತಿಗೆ ಪಡೆದಿದ್ದಾರೆ.
ಟೇಕಲ್ ಸುತ್ತಮುತ್ತ ಇರುವ 25ಕ್ಕೂ ಹೆಚ್ಚು ಜಲ್ಲಿ ಕ್ರಷರ್ಗಳಿಂದ ಹಾಗೂ ಬಂಡೆ, ಕ್ವಾರೆಗಳಿಂದ ಬರುವ ಜಲ್ಲಿ, ಕಲ್ಲು ಚಪ್ಪಡಿಗಳನ್ನು ನೂರಕ್ಕೂ ಹೆಚ್ಚು ಟಿಪ್ಪರ್ ಲಾರಿಗಳಲ್ಲಿ ತುಂಬಿ ಬೆಂಗಳೂರು ನಗರ, ಗ್ರಾಮಾಂತರ, ತಮಿಳುನಾಡು, ಆಂಧ್ರದ ಕೆಲವು ಭಾಗಗಳಿಗೆ ರವಾನಿಸಲಾಗುತ್ತದೆ. ಹಿಂದೆ ಟೇಕಲ್ ಬಂಡೆಗಳ ನಾಡಾಗಿ ಇಂದು ಜಲ್ಲಿ ಕಲ್ಲುಗಳ ಬೀಡಾಗಿ ಇಲ್ಲಿನ ಜಲ್ಲಿ ಶ್ರೇಷ್ಠ ಗುಣಮಟ್ಟದ್ದಾಗಿದ್ದು ರಾಜ್ಯ ಹಾಗೂ ಇತರೆ ರಾಜ್ಯಗಳಲ್ಲಿಯೂ ಬೇಡಿಕೆ ಹೆಚ್ಚಿದೆ. ಜಿಲ್ಲೆಯಲ್ಲಿ ಹೈನೋದ್ಯಮ, ಕೃಷಿಯಂತೆಯೆ ಜಲ್ಲಿ ಕಲ್ಲು ಒಂದು ಗಣಿ ಕಾರ್ಮಿಕರ ಉದ್ದಿಮೆಯಾಗಿ ಜನತೆಗೆ ಜೀವನಾಡಿಯಾಗಿದೆ.
ಟೇಕಲ್ ಲಕ್ಷ್ಮೀಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

