ಕೋಲಾರ

ಬಾಗೇಪಲ್ಲಿ ಬಂದ್ ಯಶಸ್ವಿ

Published On :

ಬಾಗೇಪಲ್ಲಿ: ಬಯಲುಸೀಮೆ ಜಿಲ್ಲೆಗಳಿಗೆ ಡಾ.ಜಿ.ಎಸ್.ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಶಾಶ್ವತ ನೀರಾವರಿ ಹೋರಾಟ ಜಿಲ್ಲಾ ಸಮಿತಿ ಕರೆ ನೀಡಿದ್ದ ಜಿಲ್ಲಾ ಬಂದ್ ಪ್ರಯುಕ್ತ ಬಾಗೇಪಲ್ಲಿ ತಾಲೂಕಿನಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡು ರಸ್ತೆಗಳೆಲ್ಲೇ ಬಿಕೋ ಎನ್ನುತ್ತಿದ್ದವು.
ಪಟ್ಟಣದ ಡಾ.ಎಚ್.ಎನ್. ವೃತ್ತ, ಎಸ್‌ಬಿಎಂ ವೃತ್ತ, ಸರ್ಕಾರಿ ಬಸ್ ನಿಲ್ದಾಣ ಸೇರಿದಂತೆ ವಿವಿಧ ವೃತ್ತಗಳಲ್ಲಿ ಬೆಳಿಗ್ಗೆ 6 ಗಂಟೆಗೆ ಜಮಾಯಿಸಿದ ಡಿಎಸ್‌ಎಸ್, ರೈತ ಸಂಘ, ಕನ್ನಡ ಪರ ಸಂಘಟನೆಗಳು, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಕಾರ್ಯಕರ್ತರು ರಸ್ತೆ ಮಧ್ಯೆದಲ್ಲಿ ಕಲ್ಲುಗಳನ್ನು ಹಾಕಿದರು. ಇದರಿಂದ ಚಿಂತಾಮಣಿ, ಚೇಳೂರು ಕಡೆಯಿಂದ ಸಂಚರಿಸುವ ವಾಹನಗಳು ನ್ಯಾಷನಲ್ ಕಾಲೇಜಿನ ಮುಂದೆ ಹಾಗೂ ಆಂಧ್ರಪ್ರದೇಶದ ಕದಿರಿ, ಗೂಳೂರು, ಬಿಳ್ಳೂರು ಕಡೆಗಳಿಂದ ಬಂದ ವಾಹನಗಳು ಪಾತಬಾಗೇಪಲ್ಲಿ ಕ್ರಾಸ್ ಬಳಿ ಹಾಗೂ ಬೆಂಗಳೂರು-ಹೈದರಾಬಾದ್ ಕಡೆಗಳಿಂದ ಬಂದ ವಾಹನಗಳನ್ನು ಟಿ.ಬಿ. ಕ್ರಾಸ್‌ನಲ್ಲಿ ನಿಲ್ಲಿಸಿದ್ದ ಪರಿಣಾಮ ಪ್ರಯಾಣಿಕರು ಲಗ್ಗೇಜು, ಬ್ಯಾಗುಗಳನ್ನು ಹೊತ್ತು ಪಟ್ಟಣಕ್ಕೆ 1-3 ಕಿ.ಮೀ ನಷ್ಟು ದೂರ ನಡೆಯಬೇಕಾಯಿತು. ಪಟ್ಟಣದ ಪ್ರಮುಖ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಘೋಷಣೆಗಳನ್ನು ಹಾಕುತ್ತಾ ಮೆರವಣಿಯಲ್ಲಿ ಸಾಗಿದ ವಿವಿಧ ರಾಜಕೀಯ ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಕಾರ್ಯಕರ್ತರು ಬಸ್ ನಿಲ್ದಾಣದ ಮುಂಭಾಗದಲ್ಲಿ ಜಮಾಯಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.
ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಜಿ.ಎಸ್. ಚೌಡರೆಡ್ಡಿ, ಗೂಳೂರು ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಮಲ್ಲಿಕಾರ್ಜುನರೆಡ್ಡಿ, ಜೆಡಿಎಸ್ ಮುಖಂಡರಾದ ಸಿ.ಡಿ. ಗಂಗುಲಪ್ಪ, ಮಹಮದ್ ಎಸ್ ನೂರುಲ್ಲಾ, ಬಿ.ವಿ. ವೆಂಕಟರವಣ, ಗೋಪಿ, ಚಂದ್ರಶೇಖರ್, ನಿರ್ಮಲ, ಬಿಟಿಸಿ ಸೀನಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.