'ಸಮಾಜ ತಿದ್ದುವ ಸಾಹಿತ್ಯ ಅಗತ್ಯ'
ಮಾಲೂರು: ಸಾಹಿತ್ಯದಲ್ಲಿ ಶೃಂಗಾರಕ್ಕೆ ಒತ್ತು ನೀಡುವ ಬದಲು ಸಮಾಜ ತಿದ್ದುವ ಸಾಹಿತ್ಯ ರಚನೆಯಲ್ಲಿ ಸಾಹಿತಿಗಳು ತೊಡಗಬೇಕು ಎಂದು ಬಾಪೂಜಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ವಿ. ಹನುಮಂತಯ್ಯ ಕರೆ ನೀಡಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಗಾಯಕ ಗುಲ್ಚಾರ್ ಆಯೋಜಿಸಿದ್ದ ಕವಿ ಕಾವ್ಯ ಗಾಯನ ನಮ್ಮ ಕವಿ ನಮ್ಮ ಹಾಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯದಲ್ಲಿ ಶೃಂಗಾರ ಇರಬೇಕು ಆದರೆ ಸಾಹಿತಿಗಳು ತಮ್ಮ ರಚನೆಯಲ್ಲಿ ಹೆಚ್ಚು ಸಮಾಜದ ಒಳತಿಗಾಗಿ ಇರಬೇಕು. ಈ ನಿಟ್ಟಿನಲ್ಲಿ ದ.ರಾ. ಬೇಂದ್ರೆ, ಕುವೆಂಪು ರವರ ಸಾಹಿತ್ಯ ಆಧ್ಯಯನ ಮಾಡಬೇಕು ಎಂದರು. ಸಂಘಟಿಕ ಗಾಯಕ ಗುಲ್ಚಾರ್ ಮಾತನಾಡಿ, ಸ್ಥಳೀಯ ಸಾಹಿತಿ, ರಚನೆಕಾರರ ಪ್ರತಿಭೆಯನ್ನು ಹೂರ ತರುವ ಪ್ರಯತ್ನ ಮಾಡಲಾಗುತ್ತಿದ್ದು, ಎಲ್ಲ ಕಲಾ ಪ್ರೋತ್ಸಾಹಕರ ಸಹಕಾರ ಅತ್ಯಗತ್ಯವಾಗಿ ಬೇಕಾಗಿದೆ ಎಂದರು. ಇದೇ ಸಂಧರ್ಭದಲ್ಲಿ ಸಂಗೀತ ವಿದ್ವಾನ್ ಹಂಸಧ್ವನಿ ಶ್ರೀನಿವಾಸ್ರನ್ನು ಸನ್ಮಾನಿಸಲಾಯಿತು. ಸ್ಥಳೀಯ ಪ್ರತಿಭೆಗಳ ರಚನೆಯನ್ನು ರಾಗ ಸಂಯೋಜನೆ ಮಾಡಿ ಹಾಡಲಾಯಿತು. ಕಾರ್ಯಕ್ರಮ ಪ್ರಾರಂಭಕ್ಕೂ ಮುಂಚೆ ಇತ್ತೀಚೆಗೆ ನಿಧನರಾದ ತೆಲಗು ಮೇರು ನಟ ಎ. ನಾಗೇಶ್ವರರಾವ್ ಹಾಗೂ ಗಾಯಕ ಯಶವಂತ ಹಳಿಬಂಡಿ ರವರ ಗೌರವಾರ್ಥ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಾಹಿತಿ ವೇಣುಗೋಪಾಲ್ವಹ್ನಿ, ಕಸಾಪ ಜಿಲ್ಲಾ ಗೌರವಾಧ್ಯಕ್ಷ ಎ. ಅಶ್ವಥ್ ರೆಡ್ಡಿ, ಚೈತನ್ಯ ಕಲಾ ನಿಕೇತನ ಅಧ್ಯಕ್ಷ ಜ.ಮು. ಚಂದ್ರ, ಸಂಗೀತ ಶಿಕ್ಷಕ ಪ್ರಸನ್ನ, ವಿದ್ವಾನ್ ನಟರಾಜ್, ಮಂಜುನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

