ಅಕ್ರಮ ಮರಳು, ಕಡಿವಾಣ ಸಾಧ್ಯವೇ?
ಬಂಗಾರಪೇಟೆ: ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ತಾಲೂಕು ಆಡಳಿಡ ಮೌನಕ್ಕೆ ಶರಣಾಗಿರುವುದರಿಂದ ಒಂದು ಕಡೆ ರಸ್ತೆಗಳು ಹಾಗೂ ಮತ್ತೊಂದು ಕಡೆ ಅಂತರ್ಜಲ ಹಾಳಾಗುವಂತಾಗಿದೆ.
ತಾಲೂಕಿನ ಕಾಮಸಮುದ್ರ ಹಾಗೂ ಬೂದಿಕೋಟೆ ಹೋಬಳಿಗಳಲ್ಲಿ ಪ್ರತಿದಿನ 40ಕ್ಕೂ ಹೆಚ್ಚು ಲಾರಿಗಳಲ್ಲಿ ಮರಳು ಸಾಗಾಣಿಕೆಯಾಗುತ್ತಿದೆ. ಯಾವುದೇ ಅಡೆತಡೆಯಿಲ್ಲದೆ ಕೆರೆಗಳಲ್ಲಿ ಹಾಗೂ ರೈತರ ಜಮೀನುಗಳಲ್ಲಿ ಈ ದಂಧೆ ಸಾಗಿದೆ. ತಿಂಗಳಿಗೆ 4 ಕೋಟಿ ವಹಿವಾಟು ನಡೆಯುತ್ತಿದೆ. ಪೊಲೀಸರು ಮರಳು ಲಾರಿಗಳನ್ನು ಹಿಡಿದು ತಹಸೀಲ್ದಾರ್‌ಗೆ ಒಪ್ಪಿಸಿದರೆ ಅವರು ಇನ್ನು ಎರಡು ತಿಂಗಳಲ್ಲಿ ನಿವೃತ್ತಿಯಾಗುವುದರಿಂದ ಲಾರಿಗಳನ್ನು ಮುಟ್ಟುಗೋಳು ಹಾಕಿಕೊಳ್ಳದೆ ಬಿಡುತ್ತಿದ್ದು, ಸರ್ಕಾರ ಮರಳು ಮಾಫಿಯಗೆ ಕಡಿವಾಣ ಹಾಕಬೇಕೆಂಬ ಉದ್ದೇಶಕ್ಕೆ ಹೊಳೆಯಲ್ಲಿ ಹುಣಸೇ ಹಣ್ಣು ಹಿಂಡಿದಂತಾಗಿದೆ.
ಅಕ್ರಮ ಮರಳು ಗಣಿಗಾರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ತಹಸೀಲ್ದಾರ್ ಉಷಾ ನೇತೃತ್ವದಲ್ಲಿ ಟಾಸ್ಕ್‌ಪೋರ್ಸ್ ರಚಿಸಲಾಗಿದೆ. ಆದರೆ ಈ ಸಮಿತಿ ನಿಷ್ಕ್ರಿಯವಾಗಿದೆ. ಮರಳು ಲಾರಿಗಳನ್ನು ಹಿಡಿದರು ಪ್ರಕರಣ ಹೂಡದೆ ಬಿಡುತ್ತಿರುವುದರಿಂದ ಅವ್ಯಾಹತವಾಗಿ ಮರಳು ಲೂಟಿಯಾಗುತ್ತಿದೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಟ್ರ್ಯಾಕ್ಟರ್‌ಗಳಲ್ಲಿ ಮರಳು ಸಾಗಿಸಿವವರನ್ನು ತಡೆಯಬೇಡಿ ಲಾರಿಗಳನ್ನು ಮಾತ್ರ ಹಿಡಿಯಿರಿ ಎಂದು ತಹಸೀಲ್ದಾರ್‌ಗೆ ಸೂಚಿಸಿದ್ದರೂ ಮರಳು ಟ್ರ್ಯಾಕ್ಟರ್‌ಗಳನ್ನೂ ತಡೆದು ರೈತರನ್ನು ಶೋಷಣೆ ಮಾಡುತ್ತಿದ್ದಾರೆಂದು ಮುನಿಯಪ್ಪ ಆರೋಪಿಸಿದ್ದಾರೆ.
ಕಾಮಸಮುದ್ರ ಹಾಗೂ ಬೂದಿಕೋಟೆ ಹೋಬಳಿಗಳಲ್ಲಿ ಸಮೃದ್ಧವಾಗಿ ಮರಳು ಸಿಗುವುದರಿಂದ ಮಾಫಿಯಾದವರು ರೈತರಿಗೆ ಹಣದ ಆಸೆ ತೋರಿಸಿ ಅವರ ಜಮೀನುಗಳನ್ನು ಭೋಗ್ಯಕ್ಕೆ ಬರೆಸಿಕೊಂಡು ಈ ದಂಧೆ ನಡೆಸುತ್ತಿದ್ದಾರೆ. ಈಗಾಗಲೇ ಕೆರೆಗಳಲ್ಲಿ ಮರಳು ಖಾಲಿಯಾಗಿರುವುದರಿಂದ ಮಾಫಿಯಾದವರ ಕಣ್ಣು ರೈತರ ಜಮೀನುಗಳ ಮೇಲೆ ಬಿದ್ದಿವೆ. ಇದರಿಂದ ಗ್ರಾಮೀಣ ಭಾಗದ ರಸ್ತೆಗಳಲ್ಲಿ ದಿನಂಪ್ರತಿ ಹತ್ತಾರು ಲಾರಿಗಳು ಸಂಚರಿಸುವುದರಿಂದ ರಸ್ತೆಗಳು ಹಾಳಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

