ಕೋಲಾರ

'ಎಲ್ಲ ಕಾಲಕ್ಕೂ ಸಲ್ಲುವ ಕಲೆ ಜನಪದ'

Published On :

ಗುಡಿಬಂಡೆ: ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಲಕ್ಷ್ಮೀಆದಿನಾರಾಯಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ರಾಜ್ಯಮಟ್ಟದ ಜಾನಪದ ಕಲಾ ಮಹೋತ್ಸವ ಕಾರ್ಯಕ್ರಮ ನಡೆಯಿತು.
 ಈ ವೇಳೆ ಮಾತನಾಡಿದ ಬಾಗೇಪಲ್ಲಿ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ನಯಾಜ್ ಅಹಮದ್, ಯಾವುದೇ ದೇಶ, ಪ್ರದೇಶ, ಪರಿಸರದ ಹೆಗ್ಗುರುತು ಹಾಗೂ ಸಂಸ್ಕೃತಿ ಎಲ್ಲ ಕಾಲದಲ್ಲಿಯೂ ಕಾಣ ಸಿಗುವುದು ಜಾನಪದ ಕಲೆಯಿಂದ ಮಾತ್ರ ಎಂದದರು.
 ಪ್ರಾಚೀನ ಜಾನಪದ ಸಂಸ್ಕೃತಿಯ ತವರೂರಾದ ನಮ್ಮ ದೇಶದಲ್ಲಿ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಹೆಚ್ಚಬೇಕಾಗಿದೆ. ಆದರೆ ಇಂದಿನ ದಿನಗಳಲ್ಲಿ ಜಾನಪದ ಕಲೆಯ ಜೊತೆ ಕಲಬೆರೆಕೆ ಸಂಸ್ಕೃತಿ ಸೇರಿಹೋಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಲಾ ಶ್ರೀಮಂತಿಕೆ: ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷ ಸ.ನ.ನಾಗೇಂದ್ರ, ಗಡಿ ಭಾಗದಲ್ಲಿ ನೆಲೆಸಿರುವ ರಾಜ್ಯದ ಪುಟ್ಟ ತಾಲೂಕು ಎನಿಸಿರುವ ಗುಡಿಬಂಡೆ ಅಭಿವೃದ್ಧಿದೃಷ್ಟಿಯಿಂದ ಸ್ವಲ್ಪಮಟ್ಟಿಗೆ ಬಡತನ ಅನುಭವಿಸುತ್ತಿದ್ದರೂ, ಕಲೆ ಮತ್ತು ಕಲಾವಿದರ ನೆರವಿನಿಂದ ಆಗರ್ಭ ಶ್ರೀಮಂತಿಕೆಯನ್ನು ಹೊಂದಿದೆ ಎಂದರು.
ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ವಿಶ್ವನಾಥ್,  ಹಳ್ಳಿಗಾಡುಗಳಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿಕೊಳ್ಳಲು ಸರ್ಕಾರ ಮುಂದಾಗಬೇಕು ಎಂದರು.
ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ವಿವೇಕ ಜಾನಪದ ಕಲಾಪ್ರಶಸ್ತಿಯನ್ನು ಬೆಂಗಳೂರಿನ ಮುನಿರಾಜ್, ವಿವೇಕ ಸಂಗೀತ ಕಲಾರತ್ನ ಪ್ರಶಸ್ತಿಯನ್ನು ಚಿಕ್ಕಬಳ್ಳಾಪುರದ ತಾರಾ ರಾಜಗೋಪಾಲನ್, ವಿವೇಕ ಅಭಿನಯ ಕಲಾರತ್ನ ಪ್ರಶಸ್ತಿಯನ್ನು ಚೋಳಶೆಟ್ಟಿಹಳ್ಳಿ ಪ್ರಭಾಕರರಾವ್, ವಿವೇಕ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಕಸಾಪ ಅಧ್ಯಕ್ಷ ಸ.ನ.ನಾಗೇಂದ್ರ, ವಿವೇಕ ಯುವರತ್ನ ಪ್ರಶಸ್ತಿಯನ್ನು ಡಾ.ನಯಾಜ್ ಅಹ್ಮದ್, ವಿವೇಕ ಕಾನೂನು ಸೇವಾ  ರತ್ನ ಪ್ರಶಸ್ತಿಯನ್ನು ವಕೀಲ ಉನ್ನತಿ ವಿಶ್ವನಾಥ್ಗೆ ಪ್ರಧಾನ ಮಾಡಿ ಸನ್ಮಾನಿಸಲಾಯಿತು.
ಮೆರವಣಿಗೆ: ಸಮಾರಂಭಕ್ಕೂ ಮುನ್ನ ಯಲ್ಲೋಡು ಗ್ರಾಮದಲ್ಲಿ ರಾಜ್ಯದ ವಿವಿಧ  ಕಡೆಯಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳ ಕಲಾವಿದರು ವತಿಯಿಂದ ಬೃಹತ್ ಮೆರವಣಿಗೆ ನಡೆಯಿತು.  ವಿಶ್ವಸ್ವಯಂ ಸೇವಾ ಸಂಸ್ಥೆಯ ಸಿ.ಎ.ಚಲಪತಿ, ಭಾರತ್ ಅಕಾಡೆಮಿಯ ಗೋಪಿ, ರಾಜ್ಯ ಯುವಪ್ರಶಸ್ತಿ ವಿಜೇತ ಸೋ.ಸು.ನಾಗೇಂದ್ರನಾಥ್ ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.