ಶ್ರೀನಿವಾಸಪುರ ತಾಲೂಕು ಆಡಳಿತ ವಿರುದ್ಧ ದಲಿತ ಮುಖಂಡರ ಆರೋಪ
ಕೋಲಾರ/ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ದಲಿತರಿಗೆ ರಕ್ಷಣೆ ನೀಡುವುದರಲ್ಲಿ ಸಂಪೂರ್ಣ ವಿಫಲ ಆಗಿದೆ ಎಂದು ದಲಿತ ಸಂಘರ್ಷ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಆರೋಪಿಸಿದ್ದಾರೆ. ಸಂಘಟನೆಗಳ ಪದಾಧಿಕಾರಿಗಳು ಸರ್ಕಾರಿ ನೌಕರರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ಆರು ತಿಂಗಳಿಂದ ತಾಲೂಕಿನ ರಾಯಲ್ಪಾಡು, ಗೌನಿಪಲ್ಲಿ, ಹಾಗೂ ಪಟ್ಟಣದಲ್ಲಿರುವ ಪೊಲೀಸ್ ಠಾಣೆಗಳಲ್ಲಿ ದಲಿತರು ನೀಡಿದ ಭೂ ವಿವಾದದ ದೂರುಗಳು ಸೇರಿದಂತೆ ಮೇಲ್ವರ್ಗದವರಿಂದ ನಡೆದ ದೌರ್ಜನ್ಯ, ದಬ್ಬಾಳಿಕೆಗೆ ಸಂಬಂಧಪಟ್ಟ ದೂರುಗಳನ್ನು ನಿರ್ಲಕ್ಷಿಸಿ ಮೇಲ್ವರ್ಗದವರಿಗೆ ರಕ್ಷಣೆ ನೀಡುತ್ತಿದ್ದಾರೆಂದು ತಿಳಿಸಿದರು. ಗೌನಿಪಲ್ಲಿ ಠಾಣೆಯ ವ್ಯಾಪ್ತಿಗೆ ಸೇರುವ ಗುಂದೇಡು ಸರ್ವೇ ನಂ 42 ರಲ್ಲಿ 1.30 ಗುಂಟೆ ಜಮೀನು ದಲಿತ ಜಿ.ಆರ್. ನಾಗರಾಜ್ ಅವರಿಗೆ ಇದ್ದರೆ ಅವರಿಗೆ ರಕ್ಷಣೆ ಕೊಡಿ ಎಂದು ತಹಸೀಲ್ದಾರ್ ಪತ್ರ ಮುಖೇನ ಪೊಲೀಸರಿಗೆ ತಿಳಿಸಿದ್ದರು. ಅದನ್ನು ಪರಿಗಣಿಸದೆ ಅದೇ ಗ್ರಾಮದ ಜಯರಾಮರೆಡ್ಡಿಗೆ ರಕ್ಷಣೆ ನೀಡುತ್ತಿದ್ದಾರೆಂದು ದೂರಿದರು. ಇಮರಕುಂಟೆ ಮಜರ ಈಚಲಕುಂಟೆ ಗ್ರಾಮದಲ್ಲಿ ಸರ್ವೇ ನಂ 15 ರ 4ಎಕರೆ ಜಮೀನಿನಲ್ಲಿ ಬೆಳೆದ ಮಾವಿನ ಫಸಲು ದಲಿತ ಕುಟುಂಬದ ಸೀತಮ್ಮ ರವರಿಗೆ ಸೇರಬೇಕಾಗಿದ್ದು ಈ ಫಸಲನ್ನು ಚಾಂಪಲ್ಲಿ ಶಂಕರ್ ರೆಡ್ಡಿ ಅವರ ಹತ್ತಿರ ಜಮೀನಿಗೆ ಸಂಬಂಧಿಸಿದ ಯಾವ ದಾಖಲೆಗಳು ಇಲ್ಲದಿದ್ದರೂ ಅವರ ಪರ ಪೊಲೀಸರು ನಿಲ್ಲುತ್ತಿದ್ದಾರೆ ಎಂದರು. ಈಚಲಕುಂಟೆ ಅಬ್ದುಲ್ ಖಾದರ್, ನಾರಮಾಕಲಪಲ್ಲಿ ವಾಲೆಪ್ಪ ಇವರಿಗೂ ಇಂತಹ ಅನ್ಯಾಯ ಆಗಿದೆ ಎಂದು ವಿವರಿಸಿದರು. ದಲಿತ ಸಂಘಟನೆಯ ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕ ಲಕ್ಷ್ಮೀನಾರಾಯಣ, ತಾಲೂಕು ಮುಖಂಡರಾದ ವರ್ತನಹಳ್ಳಿ ವೆಂಕಟೇಶ್ ಚಲ್ದಿಗಾನಹಳ್ಳಿ ವೀರಪ್ಪ. ವಾಲೆಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

