ಮಾಲೂರು ತಾಪಂಗೆ ಅಧ್ಯಕ್ಷೆ, ಉಪಾಧ್ಯಕ್ಷೆ ಆಯ್ಕೆ
ಮಾಲೂರು: ಇಲ್ಲಿನ ತಾಲೂಕು ಪಂಚಾಯಿತಿಯ 3ನೇ ಅವಧಿಯ ಆಡಳಿತಕ್ಕಾಗಿ ಶುಕ್ರವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ನ ನಾಗವೇಣಿ ಚಂದ್ರು ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷೆಯಾಗಿ ಬಿಜೆಪಿಯ ಮಂಜುಳಾ ವೆಂಕಟೇಶ್ ಚುನಾಯಿತರಾದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎಸ್ಟಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ನಾಗವೇಣಿ ಚಂದ್ರ ಒಬ್ಬರೇ ಸ್ಪರ್ದಿಸಿದ್ದರು. ಹಾಗಾಗಿ, ನಾಗವೇಣಿ ಚಂದ್ರ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎ.ಸಿ.ಮಂಜುನಾಥ್ ಘೋಷಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಕೃಷ್ಣಯ್ಯ ಶೆಟ್ಟಿ ಬಣದ ಎಸ್.ವಿ.ಲೋಕೇಶ್ ಹಾಗೂ ಬಿಜೆಪಿಯ ಮಂಜುಳಾ ವೆಂಕಟೇಶ್ ಹಾಗೂ ಜೆಡಿಎಸ್ನ ಮೂರ್ತಿ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್ನ ಮೂರ್ತಿ ಅವರು ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದರಿಂದ ಕಣದಲ್ಲಿ ಬಿಜೆಪಿಯ ಮಂಜುಳಾ ಹಾಗೂ ಕಾಂಗ್ರೆಸ್ ಲೋಕೇಶ್ ಮಾತ್ರ ಉಳಿದಿದ್ದರು. ಚುನಾವಣೆಯಲ್ಲಿ ಒಂದು ಮತದ ಅಂತರದಿಂದ ಮಂಜುಳಾ ಗೆಲವಿನ ನಗೆ ಬೀರಿದರು. ಕೃಷ್ಣಯ್ಯ ಶೆಟ್ಟಿ ಬಣದಲ್ಲಿ ಗುರ್ತಿಸಿಕೊಂಡಿದ್ದ ಮಾಜಿ ಉಪಾಧ್ಯಕ್ಷೆ ರಾಜಮ್ಮ ಗೈರು ಹಾಜರಾಗಿದ್ದರು. ತಾಪಂನ 18 ಸದಸ್ಯರ ಪೈಕಿ 15 ಸದಸ್ಯರು ಬಿಜೆಪಿಯವರು. ಆದರೆ, ಕೃಷ್ಣಯ್ಯ ಶೆಟ್ಟಿ ಕಾಂಗ್ರೆಸ್ ಸೇರಿದ್ದರಿಂದ ತಾಪಂನ 9 ಸದಸ್ಯರ ಶೆಟ್ಟಿ ಜತೆ ಗುರುತಿಸಿಕೊಂಡಿದ್ದರು. 6 ಸದಸ್ಯರು ಮಾತ್ರ ಬಿಜೆಪಿಯಲ್ಲಿದ್ದಾರೆ. ಹತ್ತು ತಿಂಗಳ ನಂತರದ ಅವಧಿಗೆ ಜೆಡಿಎಸ್ಗೆ ಉಪಾಧ್ಯಕ್ಷೆ ನೀಡುವ ಒಪ್ಪಂದದ ಹಿನ್ನೆಲೆಯಲ್ಲಿ ಜೆಡಿಎಸ್ ನ ಬೆಂಬಲ ಪಡೆಯಲಾಯಿತು ಎಂದು ಬಿಜೆಪಿಯ ರಾಜಪ್ಪ ತಿಳಿಸಿದ್ದಾರೆ. ಚುನಾವಣಾಧಿಕಾರಿ ಮಂಜುನಾಥ್, ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ, ವ್ಯವಸ್ಥಾಪಕಿ ಭಾನುಮತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

