ಮಂಜೂರಾಗಿರುವ ರೇಲ್ವೆ ಯೋಜನೆಗಳಿಗೆ ಅನುದಾನ ನಿರೀಕ್ಷೆ
ಕೋಲಾರ: ಈ ಹಿಂದಿನ ಯುಪಿಎ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಮಂಜೂರು ಆಗಿರುವ ರೇಲ್ವೆ ಯೋಜನೆಗಳಿಗೆ ರಾಜ್ಯದವರೇ ಆದ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರು ಅನುದಾನ ಪ್ರಕಟಿಸುವ ನಿರೀಕ್ಷೆಯಿದೆ.
ಯುಪಿಎ ಸರ್ಕಾರದಲ್ಲಿ ರೇಲ್ವೆ ರಾಜ್ಯ ಸಚಿವರಾಗಿದ್ದ ಹಾಲಿ ಸಂಸದ ಕೆ.ಎಚ್. ಮುನಿಯಪ್ಪನವರು ಜಿಲ್ಲೆಗೆ ಮಂಜೂರು ಮಾಡಿಸಿರುವ ರೇಲ್ವೆ ಕೋಚ್ ಘಟಕ ನಿರ್ಮಾಣಕ್ಕೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಶ್ರೀನಿವಾಸಪುರ-ಮುಳಬಾಗಿಲು ಮಾರ್ಗದಲ್ಲಿ ಸುಮಾರು 1100 ಎಕರೆ ಪ್ರದೇಶದಲ್ಲಿ ರು. 1450 ಕೋಟಿ ವೆಚ್ಚದಲ್ಲಿ ರೇಲ್ವೆ ಕೋಚ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ರಾಜ್ಯ ಸರ್ಕಾರ ಉಚಿತವಾಗಿ ಭೂಮಿಯನ್ನು ರೇಲ್ವೆ ಇಲಾಖೆಗೆ ನೀಡುವುದಕ್ಕೆ ಈಗಾಗಲೇ ಒಡಂಬಡಿಕೆ ಮಾಡಿಕೊಂಡಿದೆ. ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟಣೆಯ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸದರಿ ಯೋಜನೆಗೆ ಭೂಸ್ವಾದೀನ ಪ್ರಕ್ರಿಯೆ ಇನ್ನು ಪ್ರಾರಂಭವಾಗಿಲ್ಲ. ಶಂಕುಸ್ಥಾಪನೆ ನಡೆದ ಜಾಗದಲ್ಲಿ ಯೋಜನೆ ಅನುಷ್ಠಾನಕ್ಕೆ ಬರುವ ಯಾವುದೇ ಭರವಸೆ, ಪ್ರಕ್ರಿಯೆ ಕಾಣುತ್ತಿಲ್ಲ. ರೇಲ್ವೆ ಕೋಚ್ ಕಾರ್ಖಾನೆಯ ಪ್ರಾರಂಭಕ್ಕೆ ಬೇಕಾದ ಅನುದಾನವನ್ನು ರೇಲ್ವೆ ಸಚಿವ ಸದಾನಂದಗೌಡರು ಮಂಗಳವಾರ ಮಂಡಿಸಲಿರುವ ಬಜೆಟ್ನಲ್ಲಿ ಪ್ರಕಟಿಸಿದಲ್ಲಿ ಮಾತ್ರ ಯೋಜನೆಗೆ ಚಾಲನೆ ಸಿಗುವ ಆಶಾಭಾವನೆ ಹೊಂದಬಹುದಾಗಿದೆ.
ಇದೇ ರೀತಿ ಕೋಲಾರ-ವೈಟ್ಫೀಲ್ಡ್ ರೈಲು ಮಾರ್ಗ, ಮುಳಬಾಗಿಲು-ಕೋಲಾರ, ಶ್ರೀನಿವಾಸಪುರ-ಮದನಪಲ್ಲಿ ರೈಲು ಮಾರ್ಗಕ್ಕೆ ಹಿಂದೆಯೇ ಮಂಜೂರಾತಿ ಸಿಕ್ಕಿದೆ. ಅನುದಾನವಿಲ್ಲದೆ ಯೋಜನೆ ನೆನಗುದಿಗೆ ಬಿದ್ದಿರುವುದರಿಂದ ಸದಾನಂದಗೌಡರು ಕೃಪೆ ತೋರಿದರೆ ರೈತರು ಬೆಳೆಯುವ ತರಕಾರಿ, ಹಣ್ಣು, ಹೂವು ಇತ್ಯಾದಿ ಪದಾರ್ಥಗಳನ್ನು ಬೇರೆಡೆಗೆ ಸಾಗಾಣೆ ಮಾಡುವುದಕ್ಕೆ ಅನುಕೂಲವಾಗುತ್ತದೆ. ರೇಲ್ವೆ ಕೋಚ್ ಕಾರ್ಖಾನೆಯ ಸ್ಥಾಪನೆಯಿಂದ ಕನಿಷ್ಠ 3ರಿಂದ 5 ಸಾವಿರ ಜನರಿಗೆ ಉದ್ಯೋಗ ಸಿಗುವುದರಿಂದರಿಂದ ಸಚಿವರು ಜಿಲ್ಲೆಯ ಜನತೆಯ ಸಮಸ್ಯೆ ಅರಿತು ಬಜೆಟ್ನಲ್ಲಿ ಅನುದಾನ ಪ್ರಕಟಿಸುವರೆಂಬ ನಿರೀಕ್ಷೆ ಇದೆ. ಸದರಿ ಯೋಜನೆಯಿಂದ ಜಿಲ್ಲೆಯು ಆರ್ಥಿಕವಾಗಿ ಸದೃಢವಾಗುವುದರಲ್ಲಿ ಸಂಶಯವಿಲ್ಲ.
ಆಧುನಿಕತೆಯಲ್ಲಿ ಸಂಬಂಧ ಹಾನಿ
ಗೌರಿಬಿದನೂರು: ಆಧುನಿಕತೆಯ ಹೆಸರಿನಲ್ಲಿ ಮಾನವಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಆಧ್ಯಾತ್ಮಿಕ ಪ್ರವಚನಕಾರ ಶ್ರೀರಂಗಪಟ್ಟಣದ ಡಾ.ವಿ. ಭಾನುಪ್ರಕಾಶ ಶರ್ಮಾ ಖೇಧ ವ್ಯಕ್ತ ಪಡಿಸಿದರು. ಆಷಾಢ ಶುಕ್ರವಾರ ತಾಲೂಕಿನ ದೊಡ್ಡಮಲ್ಲೇಕೆರೆ ಗ್ರಾಮದ ಶ್ರೀ ಕ್ಷೇತ್ರ ಮುತ್ಯಾಲಮ್ಮ, ಮಹೇಶ್ವರಮ್ಮ ದೇವಾಲಯದ ಆವರಣದಲ್ಲಿ ನಡೆದ ಶ್ರೀ ಲಲಿತಾ ಸಹಸ್ರನಾಮ ಪಾರಾಯಣದಲ್ಲಿ ಆಶೀರ್ವಚನ ನೀಡಿ, ಲಲಿತಾ ಸಹಸ್ರನಾಮ ಪಾರಾಯಣದಿಂದ ಮಾನಸಿಕ ಶಾಂತಿ ಉಂಟಾಗುತ್ತದೆ. ಆದಿಶಂಕರರು ಲಲಿತಾ ಸಹಸ್ರನಾಮ ಪಾರಾಯಣ ಮಾಡಲು ಕಾರಣಗಳನ್ನು ಪಾರಾಯಣ ಮಹತ್ವ ತಿಳಿಸಿದರು. ಗೌರಿಬಿದನೂರಿನ ಬ್ರಾಹ್ಮಣ ವಾಣಿ ಮಹಿಳಾ ಮಂಡಲಿ, ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಲಿ, ಆರ್ಯ ವೈಶ್ಯ ಮಹಿಳಾಮಂಡಲಿ, ಸೌಂದರ್ಯ ಲಹರಿ ಸಂಚಾಲನಾ ಸಮಿತಿ, ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

