ಬರದ ನಾಡಿನಲ್ಲಿ ಕರುಣೆ ತೋರಿದ ಮಳೆರಾಯ, ಶೇಂಗಾ, ರಾಗಿ ಬಿತ್ತನೆ
ಬಂಗಾರಪೇಟೆ ತಾಲೂಕಲ್ಲಿ ಬಿತ್ತನೆ ಬಿರುಸು
ಟಿ ರಮೇಶ್
ಬಂಗಾರಪೇಟೆ: ಕೆಲ ವರ್ಷಗಳಿಂದ ಸತತವಾಗಿ ಬರಗಾಲಕ್ಕೆ ಸಿಲುಕಿದ್ದ ತಾಲೂಕಿನ ರೈತರು ಇತ್ತೀಚಿಗೆ ವರುಣ ದೇವರು ಕರುಣೆ ತೋರುತ್ತಿರುವುದರಿಂದ ಮತ್ತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು ಈಗಾಗಲೇ ಬಿತ್ತನೆ ಕಾರ್ಯವನ್ನು ಪೂರೈಸಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದಾರೆ.
ಕಳೆದ ಎಂಟು ವರ್ಷಗಳಿಂದ ತಾಲೂಕು ಬರಪೀಡಿತ ಪ್ರದೇಶ ಎಂದು ಸರ್ಕಾರ ಅಧಿಕೃತ ಮುದ್ರೆ ಹೊತ್ತಿದೆ ಅಷ್ಟೇ. ಆದರೆ ಬರಪೀಡಿತ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳು ಮಾತ್ರ ಕೈಗೊಂಡಿಲ್ಲ. ಮಳೆ ಇಲ್ಲದೆ ರೈತರು ತಾನೆ ಏನು ಮಾಡಲು ಸಾಧ್ಯ. ಕೃಷಿಯನ್ನು ಬಿಟ್ಟು ಪರ್ಯಾಯ ಮಾರ್ಗ ಹಿಡಿದಿದ್ದರು. ಕಳೆದ ಹತ್ತು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ರೈತರಲ್ಲಿ ಮತ್ತೆ ಕೃಷಿಯತ್ತ ಮುಖ ಮಾಡುವಂತೆ ಮಾಡಿದೆ.
ಶೇಂಗ ವಾಡಿಕೆ ಬೆಳೆ: ಈಗಾಗಲೇ ಕಾಮುಸಮುದ್ರ, ಬೂದಿಕೋಟೆ, ಬೇತಮಂಗಲ, ಕ್ಯಾಸಂಬಳ್ಳಿ, ಆರ್.ಪೇಟೆ ಹೋಬಳಿಗಳಲ್ಲಿ ರೈತರು ತಮ್ಮ ಭೂಮಿಯನ್ನು ಹದಗೊಳಿಸಿ ಬಿತ್ತನೆ ಕಾರ್ಯಮುಗಿಸಿದ್ದಾರೆ. ತಾಲೂಕಿನಲ್ಲಿ ಶೇಂಗ ಬೆಳೆ ಅಧಿಕವಾಗಿ ಬೆಳೆಯುವುದು ವಾಡಿಕೆ ಈಗಾಗಲೇ ಶೇಂಗ ಬೆಳೆ ಚಿಗುರೊಡೆದಿದೆ.
ಕಳೆದ ಬಾರಿ ಬರಗಾಲದಲ್ಲಿಯೂ ರೈತರು 16.700 ಹೆಕ್ಟೇರ್ ಪ್ರದೇಶದಲ್ಲಿ ಶೇ 70ರಷ್ಟು ಬಂಬರ್ ಬೆಳೆ ಮಾಡಿದ್ದು, ಈ ಬಾರಿ 23.600 ಹೆಕ್ಟೇರ್ ಪ್ರದೇಶದಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ತಾಲೂಕಿನಲ್ಲಿ ರೈತರು ಅಂತರ ಬೆಳೆಯಾಗಿ ಅವರೆ, ತೊಗರಿ, ಜೋಳ ಬೆಳೆಯುತ್ತಾರೆ. ಕಳೆದ ಬಾರಿ ರಸಗೊಬ್ಬರದ ಕೊರತೆಯಾಗಿತ್ತು. ಈ ಬಾರಿ ತೊಂದರೆ ಆಗಿಲ್ಲ.
ಪರ್ಯಾಯ ಬೆಳೆ: ಭತ್ತದ ಕಣಜ ಪ್ರದೇಶ ಎಂದೇ ಖ್ಯಾತಿ ಹೊಂದಿರುವ ಬೂದಿಕೋಟೆ ಹೋಬಳಿ ರೈತರು ಬರಗಾಲದಿಂದ ಬತ್ತ ಬೆಳೆಗೆ ತಿಲಾಂಜಲಿ ಹಾಡಿ ರಾಗಿ, ಶೇಂಗ ಬೆಳೆಯತ್ತವಾಲಿದ್ದಾರೆ. ಸತತವಾಗಿ ಬರ ತಾಲೂಕನ್ನು ಆವರಿಸಿದ್ದರಿಂದಾಗಿ ರೈತರು ತಮ್ಮ ಪ್ರೀತಿಯ ಜಾನುವಾರುಗಳನ್ನು ಮಾರಾಟ ಮಾಡಿ ಕೈ ತೊಳೆದುಕೊಂಡಿದ್ದರು. ಈಗ ಮಳೆರಾಯ ರೈತರಲ್ಲಿ ಆಶಾ ಭಾವಣೆ ಮೂಡಿಸಿರುವುದರಿಂದ ಭೂಮಿಯನ್ನು ಹದಗೊಳಿಸಲು ಟ್ರ್ಯಾಕ್ಟರ್ಗಳಿಗೆ ಭಾರಿ ಬೇಡಿಕೆ ಉಂಟಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

