ಕೋಲಾರ

ಪ್ರತಿ ಗ್ರಾಮದಲ್ಲಿ ಸ್ಮಶಾನಕ್ಕೆ ಭೂಮಿ ಮೀಸಲು

Published On :

ಮಾಲೂರು: ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಸ್ಮಶಾನಕ್ಕಾಗಿ 1 ರಿಂದ 2 ಎಕರೆ ಮೀಸಲಿಡಲು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ವಿಧಾನ ಸಭೆ ಅಧಿವೇಶನದಲ್ಲಿ ತಿಳಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ಆದೇಶ ರಾಜ್ಯ ಸರ್ಕಾರದಿಂದ ಹೊರಬರಲಿದೆ ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ಇಲ್ಲಿನ ಕೋಲಾರ ರಸ್ತೆಯಲ್ಲಿರುವ ಡಾ.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಬುಧವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ-ಪಂಗಡ ಜನಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಪರಿಶೀಲನಾ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಜಮೀನುಗಳ ಬೆಲೆ ದುಬಾರಿಯಾಗಿರುವುದರಿಂದ ಪಟ್ಟಣದ ಆಶ್ರಯ ಯೋಜನೆಯಲ್ಲಿ ಪಲಾನುಭವಿಗಳಿಗೆ ನಿವೇಶನ ಹಂಚಲು ಸೀತಾನಾಯಕನಹಳ್ಳಿ ಬಳಿ 14 ಎಕರೆ ಜಮೀನನ್ನು ಗುರ್ತಿಸಲಾಗಿದೆ. ಈ ಕೊಡಲೇ ಆಶ್ರಯ ಸಮಿತಿ ರಚಿಸಿ ನಿವೇಶನ ಹಂಚುವ ಪ್ರಕ್ರೀಯೆ ಪ್ರಾರಂಭಿಸಿ ಎಂದು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಬೆಂಗಳೂರು ರಸ್ತೆಯ ಹಾರೂಹಳ್ಳಿ ಕ್ರಾಸ್ ನಿಂದ ರೈಲ್ವೇ ಸೇತುವೆ ವರೆಗಿನ ರಸ್ತೆಗೆ 2012 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಇಡಬೇಕೆಂಬ ನಿರ್ಣಯ ಪುರಸಭೆ ತೆಗೆದುಕೊಂಡಿದ್ದರೂ ಇದುವರೆಗೂ ಹೆಸರಿಡದೆ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಲಾಗುತ್ತಿದೆ ಎಂದ ದಲಿತ ಮುಖಂಡ ವೆಂಕಟೇಶ್ ಅವರ ದೂರಿಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರೇಣುಕಾ ಹಾಗೂ ತಹಸೀಲ್ದಾರ್ ಶಿವುಕುಮಾರ್ ಅವರು, ಈ ಹಿಂದಿನ ಅಧಿಕಾರಿಗಳ ನಿರ್ಲಕ್ಷದಿಂದ ತಡವಾಗಿದ್ದು, ಈ ತಿಂಗಳ 18 ರಂದು ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ಅಟ್ರಾಸಿಟಿ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಜತೆ ಪ್ರಸ್ತಾಪಿಸಿ ಒಪ್ಪಿಗೆ ಪಡೆಯುವುದಾಗಿ ತಿಳಿಸಿದರು.
ಅಟ್ರಾಸಿಟಿ ಕೇಸ್ ದಾಖಲಾದಾಗ ಕೌಂಟರ್ ಕೇಸ್ ಅನ್ನು ಪೊಲೀಸರು ದಾಖಲಿಸಿಕೊಂಡು ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ ಎಂಬ ದಲಿತ ಮುಖಂಡರ ಆರೋಪಗಳನ್ನು ತಳ್ಳಿ ಹಾಕಿದ ಇನ್ಸ್ ಪೆಕ್ಟರ್ ಶಿವುಕುಮಾರ್ ಅವರು, ಯಾರೇ ದೂರು ನೀಡಿದರೂ ತೆಗೆದುಕೊಳ್ಳಬೇಕಾಗಿದ್ದು, ತನಿಖೆ ನಂತರ ನಿಜಾಂಶ ಹೊರಬರುವುದರಿಂದ ಈ ಬಗ್ಗೆ ದಲಿತರಿಗೆ ಅಂತಕ ಬೇಡ ಎಂದರು.
ಆರ್‌ಟಿಇನಲ್ಲಿ ದಲಿತ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂಬ ದಲಿತ ಮುಖಂಡ ರಾಮಚಂದ್ರ ಅವರ ಆರೋಪವನ್ನು ತಳ್ಳಿಹಾಕಿದ ಬಿಇಒ ಸುಬ್ರಮಣಿ, ಆರ್‌ಟಿಇ ಪ್ರಕಾರ ತಾಲೂಕಿನಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾಗಿರುವ 128 ಸೀಟ್‌ಗಳಿಗಿಂತ ಹೆಚ್ಚುವರಿಯಾಗಿ 132 ದಲಿತರ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಾಗಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.
ತಾ.ಪಂ.ಅಧ್ಯಕ್ಷೆ ನಾಗವೇಣಿ, ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ, ಜಿ.ಪಂ.ಸದಸ್ಯೆ ಯಶೋದಮ್ಮ, ಯಲ್ಲಮ್ಮ, ತಾಪಂ ಸದಸ್ಯ ಕೃಷ್ಣಪ್ಪ, ಲೋಕೇಶ್, ಪುರಸಭೆ ಸದಸ್ಯ ಮುರಳೀಧರ್, ಎಸ್‌ಐ ದಯಾನಂದ್, ಬೆಸ್ಕಾ ವಾಸುದೇವ್, ಎಇಇ ಬದ್ರಿನಾಥ್, ಡಾ.ಸತೀಶ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ.ಅನುರಾಧ, ತೋಟಾಗಾರಿಕೆ ಇಲಾಖಾಧಿಕಾರಿ ಆನಂದ್, ಕೃಷಿ ನಿರ್ದೇಶಕಿ ಭವ್ಯರಾಣಿ ಸೇರಿದಂತೆ ಇತೆರೆ ಸರ್ಕಾರಿ ಅಧಿಕಾರಿಗಳು,ದಲಿತ ಸಂಘಟನೆಗಳ ಮುಖಂಡರುಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.