ಜೈಲಿಗೆ ಹೋಗಲು 'ಶಾಶ್ವತ' ಸಿದ್ಧ
ಶಿಡ್ಲಘಟ್ಟ: ಶಾಶ್ವತ ನೀರಾವರಿ ಹೋರಾಟಕ್ಕಾಗಿ ಜೈಲಿಗೆ ಹೋಗಲು ಸಿದ್ಧ, ಪ್ರಾಣ ಕೂಡಾ ಬಿಟ್ಟೆವು. ಆದರೆ ನೀರನ್ನು ಬಿಡೆವು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ತಿಳಿಸಿದರು.
ತಾಲೂಕಿನ ಬೆಳ್ಳೂಟಿಯಲ್ಲಿರುವ ಗುಟ್ಟಾಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಜಲ ಜಾಗೃತಿ - ಜನ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಬಯಲು ಸೀಮೆ ಪ್ರದೇಶವಾದ ಚಿಕ್ಕಬಳ್ಳಾಪುರ ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಹೋರಾಟಕ್ಕಿಳಿದು ಜೈಲಿಗೆ ಹೋಗಲು ಸಿದ್ಧರಾಗಿರುವವರು ಪಟ್ಟಿಯನ್ನು ನನಗೆ ಕೊಡಿ. ನಾನು ನೀರು ಬರುವ ತನಕ ಹೋರಾಟ ನಿಲ್ಲಿಸುವುದಿಲ್ಲ. ಇದೇ ಕೊನೆಯ ಹೋರಾಟವಾಗಬೇಕು. ನಮಗೆ ನೀರು ಸಿಗಬೇಕು ಎಂದರು. ರಾಜ್ಯದ ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ಪತ್ರ ಬರೆದು ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ನೀಡಿದ ಗಡುವು ಮುಗಿಯುವಷ್ಟರಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತರಾಗಬೇಕು. ಇಲ್ಲದಿದ್ದಲ್ಲಿ ಹೋರಾಟ ಶತಃಸಿದ್ಧ ಎಂದರು.
ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎತ್ತಿನ ಹೊಳೆ ಯೋಜನೆಯಿಂದ ಈ ಭಾಗಕ್ಕೆ ಎಳಷ್ಟೂ ಪ್ರಯೋಜನವಿಲ್ಲ. ಏನಿದ್ದರೂಶಾಶ್ವತ ನೀರಾವರಿ ಯೋಜನೆಯೆ ಬೇಕು ಎಂದು ಆಗ್ರಹಿಸಿದರು.
ಹಸಿರು ಸೇನೆ, ರೈತ ಸಂಘದ ಭಕ್ತರಹಳ್ಳಿ ಬೈರೆಗೌಡ, ರೈತ ಮುಖಂಡರಾದ ಯಲುವಲ ಹಳ್ಳಿ ಸೊಣ್ಣೇಗೌಡ, ಕಾ. ಲಕ್ಷಯ್ಯ, ಮಂಚನಬೆಲೆ ಶ್ರೀನಿವಾಸ್, ಮಹಿಳಾ ಹೋರಾಟಗಾರರಾದ ಸುಷ್ಮಾ ಶ್ರೀನಿವಾಸ್, ಅಬ್ಲೂಡು ಭಾರತಿ, ಮಳ್ಳೂರು ಹರೀಶ್, ಎಷ್.ಗೋಪಾಲಗೌಡ, ಚಲಪತಿ, ನಾರಾಯಣಸ್ವಾಮಿ ಹಾಗೂ ಎಲ್ಲ ಜಿಲ್ಲೆಯ ಎಲ್ಲ ರೈತ ಮುಖಂಡರು ಹಾಜರಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

