ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
ಕೋಲಾರ: ಪೋಷಕರ ಮತ್ತು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಬಾಲ್ಡ್ವಿನ್ ಮತ್ತು ರವಿ
ಶಿಕ್ಷಣ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ದಲಿತ ಸೇವಾ ಸಂಘ ಹಾಗೂ ಕರ್ನಾಟಕ ದಲಿತ ಪ್ರಜಾ ಸೇನೆ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬಾಲ್ಡ್ವಿನ್ ಮತ್ತು ರವಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ತಮ್ಮ ಶಾಲೆಗೆ ದಾಖಲಾಗಲು ಮಾಡಿಕೊಂಡಿರುವ 280 ಮಕ್ಕಳ ಪೈಕಿ ಕೆಲವು ಮಕ್ಕಳನ್ನು ಪೋಷಕರ ಒಪ್ಪಿಗೆ ಮೇರೆಗೆ, ಬೆಂಗಳೂರಿನ ಬಾಲ್ಡ್ವಿನ್ ಶಾಲೆಗೆ ಪ್ರತಿನಿತ್ಯ ಬಸ್ನಲ್ಲಿ ಕರೆದೊಯ್ದು ಪಾಠಮಾಡಿ ನಿತ್ಯ ಕರೆದುಕೊಂಡು ವಾಪಸ್ ಬರುವುದು, ಉಳಿದ ಮಕ್ಕಳಿಗೆ ಅನುಮತಿ ಪಡೆದು ಶಾಲೆಯನ್ನು ಆರಂಭಿಸದ ರವಿ ಎಜುಕೇಷನ್ ಟ್ರಸ್ಟ್ ಕಟ್ಟಡದಲ್ಲಿ ಬಾಲ್ಡ್ವಿನ್ ಶಿಕ್ಷಕರಿಂದಲೇ ವಿದ್ಯಾಭ್ಯಾಸ ಕೊಡಿಸುವ ಪರ್ಯಾಯ ಮಾರ್ಗಗಳು ಪೋಷಕರನ್ನು ಆತಂಕಕ್ಕೀಡು ಮಾಡಿದೆ. ಗೌರಿಪೇಟೆಯ 2ನೇ ರಸ್ತೆಯಲ್ಲಿರುವ ರವಿ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲಿ ಈಗಾಗಲೇ ಪಿಯುಸಿ, ಪದವಿ, ಬಿ.ಎಡ್ ತರಗತಿಗಳು ನಡೆಯುತ್ತಿದ್ದು, ಆ ಕಟ್ಟಡದ ನೆಲ ಮಹಡಿಯಲ್ಲಿ ಬಾವಿಯಿದ್ದು, ತಡೆಗೋಡೆಗಳಿಲ್ಲದೆ ಪ್ರಾಣಾಂತಕವಾಗಿದ್ದು, ಈಗ ನಡೆಯುತ್ತಿರುವ ತರಗತಿಗಳಿಗೆ ಕೊಠಡಿಗಳಿಲ್ಲದೆ. ವಿದ್ಯಾರ್ಥಿಗಳು ನಲುಗುತ್ತಿದ್ದು, ಆ ಕಟ್ಟಡದಲ್ಲಿ ಸರಿಯಾದ ಮೂಲಸೌಕರ್ಯಗಳಿರುವುದಿಲ್ಲ ಹಾಗೂ ಕ್ರೀಡಾಂಗಣವಿಲ್ಲ. ಮತ್ತೊಮ್ಮೆ ಪೋಷಕರನ್ನು ವಂಚಿಸುತ್ತಿದ್ದಾರೆ.
ಮೂಲ ಸೌಕರ್ಯಗಳಿರುವುದಿಲ್ಲ ಹಾಗೂ ಇಂತಹ ಹಲವಾರು ಇಲ್ಲಗಳ ನಡುವೆ ಇರುವಂತಹ ಕಟ್ಟಡದಲ್ಲಿ ಶಾಲೆ ನಡೆಸುವ ನಿರ್ಧಾರ ತೆಗೆದು ಕೊಂಡಿರುವುದು ಪೋಷಕರನ್ನು ಆತಂಕಕ್ಕೀಡು ಮಾಡಿದ್ದು, ಅದೇ ರವಿ ಶಿಕ್ಷಣ ಸಂಸ್ಥೆಯ ಪಕ್ಕದಲ್ಲೇ ಸುಮಾರು ವರ್ಷಗಳಿಂದ ವೆಂಕಟೇಶ್ವರ ವಿದ್ಯಾಸಂಸ್ಥೆ ಯುವರು ಶಾಲೆ ನಡೆಸಿಕೊಂಡು ಬರುತ್ತಿದ್ದು, ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ 2 ಕಿ.ಮೀ. ಅಂತರವಿರಬೇಕೆಂಬ ನಿಯಮವನ್ನು ಗಾಳಿಗೆ ತೂರಲಾಗಿದೆ.
ಬಾಲ್ಡ್ವಿನ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ಶಾಲೆ ನಡೆಸಲು ಅನುಮತಿ ಪಡೆದು ಸಂಯೋಜನೆಯನ್ನು ನವೀಕರಿಸದೇ ಇರುವ ರವಿ ಶಿಕ್ಷಣ ಸಂಸ್ಥೆಯವರ ವಿರುದ್ಧ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಕೋಲಾರದಲ್ಲೇ ಇರುವ ಐ.ಸಿ, ಎಸ್.ಸಿ ಪಠ್ಯಕ್ರಮ ಬೋಧಿಸುತ್ತಿರುವ ಶಾಲೆಗಳಲ್ಲಿ ದಾಖಲು ಮಾಡಿಸಿ, ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸೇವಾ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ. ಅನಂತ ಕೀರ್ತಿ ಹಾಗೂ ದಲಿತ ಪ್ರಜಾ ಸೇನೆಯ ಜಿಲ್ಲಾಧ್ಯಕ್ಷ ಗಾಂಧಿನಗರ ಜಿ. ಗೊರೆಸ್ವಾಮಿ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

