ಕೋಲಾರ

ಅಪಘಾತದಲ್ಲಿ ಮಡಿದವರಿಗೆ ಪರಿಹಾರ

Published On :

ಕೋಲಾರ/ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನ ನೆಲವಂಕಿ ಹೋಬಳಿಯ ಕಶೆಟ್ಟಿಹಳ್ಳಿಯಲ್ಲಿ ಕಳೆದ ಮಂಗಳವಾರ ರಾತ್ರಿ ಗಂಗಾಮಾಂಭ ದೇವರ ವಿಗ್ರಹದ ಮೆರವಣಿಗೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಕ್ಯಾಂಟರ್ ಹರಿದು ಮೃತಪಟ್ಟ ಕುಟುಂಬಗಳಿಗೆ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ತಲಾ ರು. 1 ಲಕ್ಷ ಚೆಕ್‌ಗಳನ್ನು ನೊಂದ ಕುಟುಂಬಗಳ ಸದಸ್ಯರಿಗೆ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ವಿತರಿಸಿದರು.  
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇವರ ಉತ್ಸವದಲ್ಲಿ ಭಾಗವಹಿಸಿದ್ದ ಜನರ ಮೇಲೆ ಕ್ಯಾಂಟರ್ ಹರಿದು ದೊಡ್ಡ ದುರಂತ ಸಂಭವಿಸಿತ್ತು. ಮೃತಪಟ್ಟ ಪ್ರಭಾಕರ್ ರೆಡ್ಡಿ, ಶ್ರೀರಾಮಪ್ಪ, ಶ್ರೀನಾಥ್, ಮಂಜುನಾಥ ರೆಡ್ಡಿ, ಕಿಶೋರ್ ಹಾಗೂ ನರಸಿಂಹಪ್ಪ ಕುಟುಂಬಗಳಿಗೆ ಜಿಲ್ಲಾಧಿಕಾರಿಗಳ ವರದಿಯಂತೆ ಮುಖ್ಯಮಂತ್ರಿಗಳ ನಿಧಿಯಿಂದ ತಲಾ ಒಂದು ಲಕ್ಷ ರು. ಪರಿಹಾರ ದೊರೆತಿದೆ. ಇದಕ್ಕೆ ಶಾಸಕ ರಮೇಶ್ ಕುಮಾರ್ ಮುತುವರ್ಜಿಯಿಂದ ಕೆಲಸ ಮಾಡಿದ್ದೇ ಕಾರಣ ಎಂದರು. ನೊಂದ ಕುಟುಂಬಗಳಿಗೆ ಸಿಕ್ಕಿರುವ ಪರಿಹಾರವನ್ನು ಮೃತ ಹೊಂದಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗಿಸಿಕೊಂಡು ಅವರು ಭವಿಷ್ಯದಲ್ಲಿ ನೆಮ್ಮದಿ ಜೀವನ ಕಾಣಲಿ ಎಂದು ಆಶಿಸಿದರು
ಮಾನವಿಯತೆ: ರಾತ್ರಿ ದುರಂತದಲ್ಲಿ ಗಾಯಗೊಂಡವರಿಗೆ ಪೊಲೀಸರು ನೆರವು ನೀಡಿರುವುದರ ಜೊತೆಗೆ ಕಶೆಟ್ಟಿಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ, ಸಾಹಿತಿ  ಸ. ರಘುನಾಥ್ ಮಾನವಿಯತೆ ಮೆರೆದಿದ್ದಾರೆ. ಶಾಲೆಯಲ್ಲಿ ಇದ್ದ ಔಷಧ ಬಳಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆಂದು ಮೆಚ್ಚುಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ವಿದ್ಯಾವತಿ, ತಾ.ಪಂ. ಸದಸ್ಯ ಕೆ.ಕೆ ಮಂಜುನಾಥ್ ರೆಡ್ಡಿ, ಎಪಿಎಂಸಿ ನಿರ್ದೇಶಕ ಜಯರಾಮ ರೆಡ್ಡಿ, ಗ್ರಾ.ಪಂ ಸದಸ್ಯ ಅಶ್ವತ್ಥ ರೆಡ್ಡಿ, ಮಾಜಿ ಸದಸ್ಯ ಸುಬ್ಬಾರೆಡ್ಡಿ, ಕೆ.ಪಿ. ಅಪ್ಪಿರೆಡ್ಡಿ, ಅಶ್ವಥಮ್ಮ, ಮಧು, ಶ್ರೀರಾಮರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.