ಕೋಲಾರ

ಮಕ್ಕಳ ಸ್ವಾವಲಂಬನೆಗೆ ವೃತ್ತಿ ಶಿಕ್ಷಣ: ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗೇಂದ್ರಪ್ರಸಾದ್

Published On :

ಕೋಲಾರ: ವೃತ್ತಿಯನ್ನು ಪ್ರವೃತ್ತಿಯಾಗಿಸಿ ಸ್ವಾವಲಂಬನೆಗೆ ದಾರಿ ತೋರಿಸುವ ಶಿಕ್ಷಣ ನೀಡುವ ಉದ್ದೇಶದಿಂದ ಸಿಸಿಇನಲ್ಲಿ ವೃತ್ತಿ ಹಾಗೂ ದೈಹಿಕ ಶಿಕ್ಷಣಕ್ಕೂ ಮಹತ್ವ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಎನ್. ನಾಗೇಂದ್ರಪ್ರಸಾದ್ ತಿಳಿಸಿದರು. ನಗರದ ಸುವರ್ಣ ಸೆಂಟ್ರಲ್ ಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಪ್ರೌಢಶಾಲಾ ವೃತ್ತಿ ಶಿಕ್ಷಕರಿಗಾಗಿ ಆಯೋಜಿಸಿದ್ದ ಸಮಗ್ರ ನಿರಂತರ ಮೌಲ್ಯಮಾಪನ(ಸಿಸಿಇ) ಕುರಿತು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ತರಬೇತಿ ನೀಡಿ ಅವರು ಮಾತನಾಡುತ್ತಿದ್ದರು. ಸಿಸಿಇ ಬಗ್ಗೆ ಉದಾಸೀನ ಬೇಡ, ಪ್ರತಿಯೊಬ್ಬರೂ ಇದನ್ನು ಅಳವಡಿಸಿಕೊಂಡು ಪ್ರತಿ ರೂಪಣಾತ್ಮಕ ಚಟುವಟಿಕೆಯನ್ನು ದಾಖಲೀಕರಣ ಮಾಡಬೇಕು, ಇಲಾಖೆ ಸೂಚಿಸಿರುವ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.ವೃತ್ತಿ ಶಿಕ್ಷಕರು ಸಿಸಿಇ ಅಡಿ ಕಲಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು, ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಮಾಪನಗಳ ಮೂಲಕ ಮಕ್ಕಳ ಸಮಗ್ರ ಮೌಲ್ಯಮಾಪನ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು. ರೇಷ್ಮ, ತೋಟಗಾರಿಕೆ, ಸಂಗೀತ, ಚಿತ್ರಕಲೆ, ಟೈಲರಿಂಗ್, ಕೃಷಿ ಸೇರಿದಂತೆ ವಿವಿಧ ವೃತ್ತಿಗಳ ಶಿಕ್ಷಕರು ಸಿಸಿಇ ಅಳವಡಿಕೆ ಮಾಡಿಕೊಳ್ಳುವಾಗ ಅನುಸರಿಸಬೇಕಾದ ನಿಯಮಗಳು, ರೂಪನಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಮಾಪನಕ್ಕೆ ನಿಗಧಿಗೊಳಿಸಿದ ಅಂಕಗಳ ವಿವರಗಳನ್ನು ನೀಡಿದರು. ವಿಷಯ ಪರಿವೀಕ್ಷಕ ಹೆಚ್. ವೆಂಕಟಸ್ವಾಮಿ, ರಾಜಣ್ಣ, ಮಲ್ಲಿಕಾರ್ಜುನಾಚಾರಿ ಹಾಗೂ ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕ ಶಿವಮಾದಯ್ಯ ಮಾಹಿತಿ ನೀಡಿದರು. ಶಿಕ್ಷಣ ತಜ್ಞ ಸಿ.ಬೈರಪ್ಪ, ಸುರೇಂದ್ರನಾಥ್, ಗೋಪಾಲಕೃಷ್ಣ, ಶಿಕ್ಷಕ ಸಿ.ಎಲ್.ಶ್ರೀನಿವಾಸಲು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.