ಕೋಲಾರ

ಉಚಿತ ಸಾಮೂಹಿಕ ವಿವಾಹ

Published On :

ಚಿಂತಾಮಣಿ: ತಳಗವಾರ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯ ಮುಂಭಾಗದಲ್ಲಿ 101 ಜೋಡಿ ಉಚಿತ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗಿದೆ. ತಾಲೂಕಿನ ತಳಗವಾರ ಗ್ರಾಮದಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಬೆಂಗಳೂರು ರಸ್ತೆ ಬಳಿ ಇರುವ ದೇವಸ್ಥಾನದ ಮುಂಭಾಗದಲ್ಲಿ ಉಚಿತ ಸಾಮೂಹಿಕ ವಿವಾಹ 101 ಜೋಡಿ ಮದುವೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಶುಭ ಕಾರ್ಯಕ್ಕೆ ವಧುವಿಗೆ ಮಾಂಗಲ್ಯ, ಕಾಲುಂಗುರ, ವಸ್ತ್ರಗಳನ್ನು ಮತ್ತು ವರನಿಗೆ ವಸ್ತ್ರ, ಕಾಲು ಮಿಂಚು 2 ಕಡೆ ಬರುವ ಅತಿಥಿಗಳಿಗೆ ಉಚಿತ ಊಟದ ವ್ಯವಸ್ಥೆಯನ್ನು ಆಯೋಜಿಸಲಾಗಿದೆಯೆಂದು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ವ್ಯವಸ್ಥಾಪಕರಾದ ಬಿ.ಸುಬ್ಬರಾಯಪ್ಪ(ಮೊ:740713473) ಸಂಪರ್ಕಿಸಿ.
ಪೊಲೀಸರ ಸೌಹಾರ್ದ ಸಭೆ
ಶಿಡ್ಲಘಟ್ಟ: ಪೋಲಿಸ್ ಇಲಾಖೆಯೊಂದಿಗೆ ಉತ್ತಮ ಸಂಬಂಧ ಹೊಂದಿಕೊಂಡು ಮಾಹಿತಿಗಳನ್ನು ನೀಡಿ ಸಹಕಾರ ನೀಡಿದಾಗ ಕಾನೂನು ಸುವ್ಯವಸ್ಥೆ ಕಾಪಾಡಲು ಉಪಯೋಗವಾಗುತ್ತದೆ ಎಂದು ಪೋಲಿಸ್ ಇಲಾಖೆಯ ಜಫೇದಾರ್ ಅಶ್ವತ್ಥನಾರಾಯಣ ಹೇಳಿದರು. ಪಟ್ಟಣದ 11 ನೇ ವಾರ್ಡ್‌ನಲ್ಲಿರುವ ಜನತೆಯೊಂದಿಗೆ ಸೌಹಾರ್ದತಾ ಸಭೆಯನ್ನು ನಡೆಸಿದ ಅವರು, ಯಾವುದೇ ವಿಚಾರಗಳಿಗೆ ವಿನಾಕಾರಣ ಜಗಳ ಮಾಡಿಕೊಂಡು ಠಾಣೆಗೆ ಬರುವ ಬದಲಿಗೆ ಸ್ಥಳೀಯವಾಗಿ ಮಾತುಕತೆಗಳ ಮುಖಾಂತರ ಸಮಸ್ಯೆ ಪರಿಹಾರ ಮಾಡಿಕೊಳ್ಳುವುದು ಉತ್ತಮ ಎಂದು ಅವರು ತಿಳಿಸಿದರು. ಸ್ಥಳೀಯ ಮುಖಂಡರಾದ ಮಂಜುನಾಥ್, ನಾಗರಾಜ್, ಗೋಪಾಲಪ್ಪ, ವೆಂಕಟೇಶಪ್ಪ, ನಾರಾಯಣಸ್ವಾಮಿ, ಮುಂತಾದವರು ಹಾಜರಿದ್ದರು.
ನವ ವಿಗ್ರಹಗಳ ಭಗ್ನ ಕಿಡಿಗೇಡಿಗಳ ಕೃತ್ಯ?
ಮಾಲೂರು: ಇಲ್ಲಿನ ಕೋಲಾರ ರಸ್ತೆಯಲ್ಲಿರುವ ಶುದ್ಧ ಗುಂಟೆ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿದ್ದ ನವಗ್ರಹಗಳ ಕೋಣೆಗೆ ನುಗ್ಗಿದ ದುಷ್ಕರ್ಮಿಗಳು ನವಗ್ರಹಗಳ ವಿಗ್ರಹಗಳನ್ನು ಕದ್ದೂಯುವ ವಿಫಲ ಯತ್ನ ನಡಸಿರುವ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಯಾವಾಗಲೂ ತೆರೆದೆ ಇರುವ ನವಗ್ರಹ ವಿಗ್ರಹಗಳ ಕೋಣೆಯಲ್ಲಿ ಕಿತ್ತಿರುವ ನವಗ್ರಹಗಳನ್ನು ತೆಗೆದುಕೊಂಡು ಹೋಗದೆ ಅಲ್ಲೇ ಬಿಟ್ಟಿರುವುದನ್ನು ಗಮನಿಸಿದರೆ ಯಾರೂ ಕಿಡಿಗೇಡಿಗಳ ಕೆಲಸ ವಿರಬೇಕು ಎಂದು ಅಂದಾಜಿಸಲಾಗಿದೆ ಎಂದು ಭಾನುವಾರ ದೇವಾಲಯ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿವೇಕಾನಂದ ಶಾಲೆಯ ವ್ಯವಸ್ಥಾಪಕ ಶೈಲಜ್ ಕುಮಾರ್ ತಿಳಿಸಿದ್ದಾರೆ. ಭಗ್ನ ವಾಗಿರುವ ನವಗ್ರಹಗಳನ್ನು ಶೀಘ್ರವಾಗಿ ಪುನಾ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಇನ್ಸ್‌ಪೆಕ್ಟರ್ ಶಿವುಕುಮಾರ್, ಎಸ್‌ಐ ದಯಾನಂದ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಕಲಚೇತನರಿಗೆ ಸಹಾಯ ಶ್ಲಾಘನೀಯ
ಗೌರಿಬಿದನೂರು: ವಿಕಲಚೇತನರಿಗೆ ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾಗಳು ಉತ್ತಮ ರೀತಿಯಲ್ಲಿ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ಹಾಗೂ ಪ್ರಶಂಸನೀಯ ಎಂದು ಉಪಸಭಾಪತಿ ಎನ್. ಎಚ್. ಶಿವಶಂಕರರೆಡ್ಡಿ ಅಭಿಪ್ರಾಯ ಪಟ್ಟರು. ಪಟ್ಟಣದ ಕೋಟೆ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ ಹಾಗೂ ಗ್ರಾಮೀಣ ಅಭ್ಯುದ್ಯಯ ಸೇವಾ ಸಂಸ್ಥೆ ವತಿಯಿಂದ ಸಮುದಾಯ ಆಧಾರಿತ ಪುನಃಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಕೇಶವರೆಡ್ಡಿ ಮಾತನಾಡಿದರು.  ಕಾರ್ಯನಿರ್ವಹಣಾಧಿಕಾರಿ ಕೆ.ವಿ.ರೆಡ್ಡಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ, ತಾಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀದೇವಮ್ಮ, ಪುರಸಭಾ ಸದಸ್ಯ ಬಾಲಾಜಿ, ತಾಪಂ  ಮಾಜಿ ಉಪಾಧ್ಯಕ್ಷ ಅನಿತಾ ಗಂಗಾಧರ್, ಜಿಪಂ ಸದಸ್ಯರಾದ ಚಿನ್ನಪ್ಪಯ್ಯ ಹಾಜರಿದ್ದರು. ವಿಶೇಷವಾಗಿ ತಾಪಂ ವತಿಯಿಂದ ಮಳೆಯಿಂದ ಹಾನಿಯಾದ ಮನೆಗಳಿಗೆ ಚಾವಣಿ ಹೊದಿಕೆ ವಿತರಿಸಿದರು. ಮತ್ತು ಅಂದ ವ್ಯಕ್ತಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.