ಅವ್ಯವಸ್ಥೆಗಳ ಆಗರ ಈ ಆಸ್ಪತ್ರೆ
ಬಂಗಾರಪೇಟೆ: ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಗಾಗಿ ಮೀಸಲಿಟ್ಟಿರುವ ವಸತಿ ಗೃಹಗಳು ಬಳಕೆ ಮಾಡದೆ ನಿರ್ಲಕ್ಷ್ಯಕ್ಕೆ ತುತ್ತಾಗಿರುವುದರಿಂದ ಲಕ್ಷಾಂತರ ರೂಗಳ ಗೃಹಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಇಲ್ಲಿನ ಸರ್ಕಾರಿ ಆಸ್ಪತ್ರೆಯನ್ನು 30ಹಾಸಿಗೆಯಿಂದ 100ಹಾಸಿಗೆ ಆಸ್ಪತ್ರೆಯಾಗಿ ಮೇಲ್ದೆರ್ಜೆಗೆರಿಸಿ ವರ್ಷಗಳೇ ಕಳೆದಿವೆ. ಪಟ್ಟಣದ ರೋಗಿಗಳನ್ನು ತಪಾಸಣೆ ಮಾಡಲು ಆಸ್ಪತ್ರೆಗೆ ತಕ್ಕಂತೆ ವೈದ್ಯರ ಕೊರತೆಯಿದ್ದರೆ, ಇನ್ನು ಗ್ರಾಮಾಂತರ ಪ್ರದೇಶಗಳಿಂದ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಬಡ ರೋಗಿಗಳು ಬರುವರು. ಆದರೆ ಅವರನ್ನು ನೋಡುವವರೆ ಇಲ್ಲ.
ಧರ್ಮಾಸ್ಪತ್ರೆಯಲ್ಲಿ ಎಲ್ಲವೂ ಅಧರ್ಮವಾಗಿದೆ. ಸರ್ಕಾರ ವೈದ್ಯರು ಕೇಂದ್ರ ಸ್ಥಳದಲ್ಲೇ ಇದ್ದು ಬರುವ ರೋಗಿಗಳನ್ನು ತಪಾಸಣೆ ಮಾಡಬೇಕೆಂದು ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ವಸತಿ ಗೃಹಗಳನ್ನು ನಿರ್ಮಿಸಿದೆ. ಆದರೆ, ವೈದ್ಯರು ಮಾತ್ರ ಈ ಗೃಹಗಳನ್ನು ಬಳಸುತ್ತಿಲ್ಲ. ಹಾಗಾಗಿ, ಬಾಗಿಲು, ಕಿಟಕಿ ಸೇರಿದಂತೆ ಇತರೆ ವಸ್ತುಗಳು ಕಳ್ಳರ ಪಾಲಾಗಿವೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ಎಗ್ಗಿಲದೇ ನಡೆಯುತ್ತವೆ.
ಇಲ್ಲಿನ ವೈದ್ಯರು ಬೆಂಗಳೂರಿನಿಂದ ಬಂದು ಹೋಗುತ್ತಾರೆ. ಯಾರೂ ವಸತಿಗೃಹಗಳನ್ನು ಬಳಸುವುದಿಲ್ಲ. ಅಪಘಾತ ಪ್ರಕರಣಗಳು ಬಂದರೂ ನೇರವಾಗಿ ಕೋಲಾರಕ್ಕೆ ರವಾನಿಸುವರೇ ವಿನಾ ಪ್ರಾಥಮಿಕ ಚಿಕಿತ್ಸೆ ಸಹ ಕೊಡುವುದಿಲ್ಲ. ಅಷ್ಟರ ಮಟ್ಟಿಗೆ ಆಸ್ಪತ್ರೆ ಹದಗಟ್ಟಿದೆ.
ಜಿಪಂ,ತಾಪಂನಿಂದ ಹಿಡಿದು ಎಲ್ಲಾ ಜನಪ್ರತಿನಿಧಿಗಳು ಆಯ್ಕೆಯಾದ ಮೊದಲು ಈ ಆಸ್ಪತ್ರೆಗೆ ಭೇಟಿ ನೀಡಿ ಏನೋ ಬದಲಾವಣೆ ತರುವುದಾಗಿ ಭರವಸೆ ನೀಡುವರು. ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

