ಪರಿಸರ ನಮ್ಮ ಪ್ರಾಣ
ಟೇಕಲ್: ಸಸಿಗಳಿಗೆ ನೀರು ಹಾಕುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಬಹಳ ಸರಳ ರೀತಿಯಿಂದ ಟೇಕಲ್ ದೊಡ್ಡನಾಯಕನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮುಖ್ಯ ಶಿಕ್ಷಕ ಎಂ. ವೆಂಕಟೇಶ್ ಅವರು, ಪರಿಸರ ನಮ್ಮ ಪ್ರಾಣವೆಂದು ತಿಳಿಯಬೇಕು. ಮನೆಗೊಂದು ವನ ಜನಕ್ಕೊಂದು ಸಸಿ ಬೆಳೆಸಿ ಎಂದು ಘೋಷಿಸಿದರು. ಕವಿ ಹಾಗೂ ಶಿಕ್ಷಕರಾದ ಜಿ.ಟಿ. ರಾಮಚಂದ್ರಪ್ಪ ಮಾತನಾಡಿದರು. ಶಿಕ್ಷಕರಾದ ರವಿಶಂಕರ್ ಪಾಟೀಲ್, ಅಮರಾವತಿ, ಕಾರ್ತಿಕ್, ಹೇಮಾ, ಸುಮಶ್ರೀ ಮತ್ತು ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಒಂದೊಂದು ಸಸಿ ನೆಟ್ಟರು.
ಪರಿಸರ ಸಂರಕ್ಷಿಸಲು ಕರೆ
ಗುಡಿಬಂಡೆ: ಪಟ್ಟಣದಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆಡಳಿತ, ಅರಣ್ಯ ಇಲಾಖೆ, ನವ ಕರ್ನಾಟಕ ಪರಿಸರ ಸಂರಕ್ಷಣಾ ವೇದಿಕೆ ಸಹಯೋಗದಲ್ಲಿ ಮಿನಿ ವಿಧಾನಸೌಧ ಆವರಣದಲ್ಲಿ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಮಾತನಾಡಿದ ತಹಸೀಲ್ದಾರ್ ಶೈಲಜಾ, ಇತ್ತಿಚಿಗೆ ಪ್ರಾಣಿಗಳು ಕಾಡನ್ನು ಬಿಟ್ಟು ನೀರು ಮತ್ತು ಆಹಾರ ಹುಡುಕುತ್ತಾ ಪಟ್ಟಣಗಳಿಗೆ ಬರುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಕಾರಣ ಕಾಡಿನ ನಾಶ ಎಂದರು. ಸಿಪಿಐ ಶಿವಕುಮಾರ್ ಮಾತನಾಡಿದರು. ಮೋಹನ್ ಚಂದ್ರ, ಪಿ.ವಿ.ಲಕ್ಷ್ಮೀನಾರಾಯಣಪ್ಪ, ಮಂಜುನಾಥ್, ಶ್ರೀರಾಮರೆಡ್ಡಿ, ರಾಜಣ್ಣ ಸೇರಿ ಅನೇಕರಿದ್ದರು.
ಪರಿಸರ ರಕ್ಷಣೆಗೆ ನದಿ ಜೋಡಣೆ ಅಗತ್ಯ
ಗೌರಿಬಿದನೂರು: ದೇಶದಲ್ಲಿ ಪರಿಸರ ರಕ್ಷಣೆಗಾಗಿ ನದಿಗಳ ಜೋಡಣೆ ಮಾಡಬೇಕಾಗಿದೆ. ಇದರಿಂದ ಜಲ ಸಂಪತ್ತು ಹೆಚ್ಚಾಗಿ ಮರ ಗಿಡಗಳು ಬೆಳೆಯಲು ಸಾಧ್ಯ ಎಂದು ಪರಿಸರವಾದಿ ಚೌಡಪ್ಪ ತಿಳಿಸಿದರು. ಇಲ್ಲಿನ ತಾಲೂಕು ಕಚೇರಿ ಆವರಣಲ್ಲಿ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿವೃತ್ತ ಉಪಾಧ್ಯಾಯ ಶ್ರೀನಿವಾಸ್, ಸ್ವಾಮಿ ಭಗವಾನ್ ದಾಸ್ ಮಾತನಾಡಿದರು. ವಿಶ್ರಾಂತ ಸಾಕ್ಷರತಾ ಅಧಿಕಾರಿ ದಸ್ತಗೀರ್ ಬಾಬು ಪರಿಸರ ರಕ್ಷಣಾ ಗೀತೆ ಹಾಡಿದರು. ತಿಮ್ಮಯ್ಯ, ವೆಂಕಟಾಚಲಪತಿ, ಸಂಜೀವರೆಡ್ಡಿ, ರಾಮಯ್ಯ, ಅಶ್ವತ್ಥಪ್ಪ, ಕೃಷ್ಣಯ್ಯ ಶೆಟ್ಟಿ, ಹೊಸೂರು ವೆಂಕಟರಾವ್, ಲೇಪಾಕ್ಷಿ ಸಂತೋಷರಾವ್ ಮುಂತಾದವರು ಹಾಜರಿದ್ದರು.
ಪ್ರಕೃತಿ ಆರಾಧನೆ ನಮ್ಮ ಕರ್ತವ್ಯ
ಗೌರಿಬಿದನೂರು: ಸೃಷ್ಟಿಗೆ ಮೂಲ ಪ್ರಕೃತಿ. ಈ ನಿಟ್ಟಿನಲ್ಲಿ ಪ್ರಕೃತಿಯನ್ನು ಆರಾಧನೆ ಮಾನವನ ಆದ್ಯಕರ್ತವ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕೆ.ರವಿಕಾಂತ್ ಅಭಿಪ್ರಾಯಪಟ್ಟರು. ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ಅರಣ್ಯ ಇಲಾಖೆ, ಬೆಸ್ಕಾಂ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು. ಗಿಡಮರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಪರಿಸರ ನಾಶಪಡಿಸುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದರು.ಹಿರಿಯ ವಕೀಲ ಕೆ.ಲಕ್ಷ್ಮೀನಾರಾಯಣ, ವಿಜಯರಾಘವೇಂದ್ರ ಮಾತನಾಡಿದರು. ನ್ಯಾಯಾಲಯ ಸಿಬ್ಬಂದಿ ಶ್ರೀಧರ್, ಶಿಲ್ಪ, ರಹಮುತ್ತುಲ್ಲಾ, ನಾಗರಾಜು ಸೇರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

