ಕೋಲಾರ

ಟೇಕಲ್‌ನಲ್ಲಿ ಮರಳು ದಂಧೆ

Published On :

ಟೇಕಲ್: ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ಬಂದರೂ ಕೋಲಾರ ಜಿಲ್ಲೆಗೆ ಮಾತ್ರ ಅದು ಅನ್ವಯಿಸಿದಂತಿಲ್ಲ. ಕಾರಣವಿಷ್ಟೆ, ಜಿಲ್ಲೆಯಿಂದ ಸುಮಾರು 20 ಕಿಮೀ ದೂರದ ಮಾಲೂರು ತಾಲೂಕಿನಲ್ಲಿ ಇರುವ ಬಹುತೇಕ ಕೆರೆಗಳಲ್ಲಿ ರಾಜಾ-ರೋಷವಾಗಿ ಎಗ್ಗಿಲ್ಲದೆ ಅಕ್ರಮ ಮರಳು ದಂಧೆ ಸಾಗುತ್ತಿರುವುದು ಸ್ಪಷ್ಟ ನಿದರ್ಶನವಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಯಾವುದೇ ನದಿ ನಾಲೆಗಳಿಲ್ಲದೆ ನೈಸರ್ಗಿಕ ಮರಳಿನ ಲಭ್ಯತೆ ತೀರಾ ಕಡಿಮೆ. ಅದರಲ್ಲೂ ಅಂತರ್ಜಲ ಮಟ್ಟ ತೀವ್ರ ಕುಸಿದಿರುವ ಹಿನ್ನಲೆಯಲ್ಲಿ ಮರಳು ಗಣಿಗಾರಿಕೆ ನಿಷೇಧಿಸಲಾಗಿದೆ. ಈ ಮಧ್ಯೆ ಟೇಕಲ್‌ನ ಅಮಾನಿ ಅರಸಿಕೆರೆ, ಸೀತಹಳ್ಳಿ ಕೆರೆ, ಹಾಗೂ ಮಾಸ್ತಿಯ ಕೆಲವು ಭಾಗಗಳಲ್ಲಿ ಮರಳು ದಂಧೆ ನಡೆಯುತ್ತಿದ್ದು, ಹತ್ತಾರು ಕಡೆ ಜೆಸಿಬಿ, ಹಿಟಾಚಿಗಳಲ್ಲಿ ಆಳಕ್ಕೆ ಅಗೆದಿರುವ ಹಳ್ಳಗಳು ವಿಶಾಲವಾದ ಕೆರೆಯೊಳಗೆ ಬಾವಿಗಳು ಎಂಬಂತಾಗಿವೆ. ಅದರಲ್ಲೂ, ಕೆರೆಗಳಂತೂ ತಮ್ಮ ಮೂಲ ಸ್ವರೂಪವನ್ನೆ ಕಳೆದುಕೊಂಡಂತಾಗಿದೆ.
ಈ ಹಿನ್ನಲೆಯಲ್ಲಿ ದಿನನಿತ್ಯ ಬಂಗಾರಪೇಟೆ, ಮಾಲೂರು ಗಡಿಭಾಗದಲ್ಲಿರುವ ಮಾರ್ಕಂಡೇಯ ಅಣೆಕಟ್ಟಿನ ನೀರಿನಲ್ಲಿ ಮರಳು ಪಿಲ್ಟರ್ ದಂಧೆ ನಡೆಯುತ್ತಿದ್ದು, ದಿನವಹಿ ಹತ್ತಾರು ಟ್ರ್ಯಾಕ್ಟರ್ ಹಾಗೂ ಲಾರಿಗಳಲ್ಲಿ ಮರಳನ್ನು ಕೊಂಡೊಯ್ಯುತ್ತಿದ್ದು, ಅದು ಮುಂಜಾನೆಯೇ ಸುಮಾರು 3 ಗಂಟೆಯಿಂದ ಕೆಲವು ಕೆರೆಗಳಲ್ಲಿ ತಮ್ಮ ಅಕ್ರಮ ದಂಧೆ ಪ್ರಾರಂಭ ಮಾಡಿ ಯಾವುದೇ ಚೆಕ್‌ಪೋಸ್ಟ್ ಇಲ್ಲದೆ ರಾಜಾ-ರೋಷವಾಗಿ ಮರಳು ನಿಷೇಧವಿದ್ದರೂ ಆ ಲಾರಿಗಳು ಮುಂಜಾನೆ 4 ಗಂಟೆಯಿಂದ ಟೇಕಲ್ ಮತ್ತು ಮಾಸ್ತಿ ಪೊಲೀಸ್ ಠಾಣೆಯ ಮುಂದೆಯೇ ಸಾಗಿ ಹೋಗುತ್ತದೆ.
ಜಿಲ್ಲಾಧಿಕಾರಿ ಡಿ.ಕೆ. ರವಿಯವರು ಖುದ್ದು ಆಸಕ್ತಿ ವಹಿಸಿ ಅಕ್ರಮ ಮರಳು ಪಿಲ್ಟರ್ ದಂಧೆ ಮಟ್ಟಹಾಕಲು ಅಗತ್ಯ ಕ್ರಮ ಕೈಗೊಂಡಿದ್ದರು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಹಕಾರವು ಸಿಕ್ಕಿತ್ತು. ಅದು ಒಂದೇ ತಿಂಗಳು ಕಳೆದ ಎರಡು ತಿಂಗಳಿನಿಂದ ಮತ್ತೆ ಮರಳು ದಂಧೆ ಪ್ರಾರಂಭಗೊಂಡಿದೆ. ಇಷ್ಟಾದರೂ ತಾಲ್ಲೂಕು ತಹಶೀಲ್ದಾರ್, ಸಣ್ಣ ನೀರಾವರಿ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಇತ್ತ ಗಮನಹರಿಸುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.