ಎರಡೂ ಹುದ್ದೆಗಳನ್ನು ಗೋವಿಂದಪ್ಪನವರೇ ನಿರ್ವಹಿಸುತ್ತಿದ್ದಾರೆ: ಸ್ಪಷ್ಟನೆ
ಬಂಗಾರಪೇಟೆ: ಪಟ್ಟಣದ ಶ್ರೀಧರ್ಮರಾಯಸ್ವಾಮಿ ದೇವಾಲಯದ ಹಾಗೂ ವಹ್ನಿಕುಲಸ್ಥರ ಸಮಾಜ ಗೌಡರನ್ನಾಗಿ ಹಾಗೂ ಯಜಮಾನರನ್ನಾಗಿ ಗೋವಿಂದರಾಜು ಮತ್ತು ತಿಮ್ಮರಾಯಪ್ಪರನ್ನು ಆಯ್ಕೆ ಮಾಡಿಲ್ಲ. ಎರಡೂ ಹುದ್ದೆಗಳನ್ನು ಗೋವಿಂದಪ್ಪನವರೇ ನಿರ್ವಹಿಸುತ್ತಿದ್ದಾರೆಂದು ತಾಲೂಕು ವಹ್ನಿಕುಲ ಸಮಾಜದ ಉಪಾಧ್ಯಕ್ಷ ಕಾರಹಳ್ಳಿ ಚಿನ್ನಿವೆಂಕಟೇಶ್ ಸೇರಿದಂತೆ ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಕೆಲವರು ಸಂಘದಿಂದ ಬಹಿಷ್ಕಾರಕ್ಕೊಳಗಾದವರು ಸಂಘದ ಹೆಸರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕಳೆದ 6ವರ್ಷಗಳಿಂದ ಸಮಾಜಕ್ಕೆ ಗೌಡರು ಮತ್ತು ಯಜಮಾನರು ಇಲ್ಲದೆ ಇದ್ದು ಆ ಸ್ಥಾನಗಳಿಗೆ ಗೋವಿಂದರಾಜು ಮತ್ತು ತಿಮ್ಮರಾಯಪ್ಪರನ್ನು ನೇಮಕ ಮಾಡಲಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡಿ ಸಮಾಜದ ಜನರನ್ನು ದಾರಿತಪ್ಪಿಸಿದ್ದಾರೆ. ಕಳೆದ 6ವರ್ಷಗಳಿಂದ ವಹ್ನಿಕುಲಸ್ಥರಿಗೆ ಗೌಡರು ಹಾಗೂ ಯಜಮಾನರಾಗಿ ಗೋವಿಂದಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಆರು ವರ್ಷಗಳ ಹಿಂದೆ ತಿಮ್ಮರಾಯಪ್ಪರನ್ನು ಯಜಮಾನರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಅವರು ಧರ್ಮರಾಯಸ್ವಾಮಿ ದೇವಾಲಯದ ಗೋಪುರ ನಿರ್ಮಾಣ ಕಾರ್ಯದಲ್ಲಿ ವಂತಿಕೆ ವಸೂಲಿಯಲ್ಲಿ ಅಕ್ರಮ ಎಸಗಿದ್ದರಿಂದ ಅವರನ್ನು ಯಜಮಾನ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿತ್ತು. ಧರ್ಮರಾಯಸ್ವಾಮಿ ದೇವಾಲಯ ಸಮಿತಿ ಅಸ್ತಿತ್ವದಲ್ಲಿದ್ದು ಗೌಡರು ಹಾಗೂ ಯಜಮಾನರಾಗಿ ಗೋವಿಂದಪ್ಪ ಉತ್ತಮ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು ಅವರ ಅವಧಿಯಲ್ಲಿ ದೇವಾಲಯ ಸಾಕಷ್ಟು ಅಭಿವೃದ್ದಿಗೊಂಡು ಶಾಶ್ವತ ಆದಾಯ ಮೂಲಕ ಸೃಷ್ಟಿಸಿದ್ದಾರೆ ಎಂದರು.
ರಾಜಕೀಯ ಮುಖಂಡರ ಪ್ರಭಾವ; ರಾತ್ರೋರಾತ್ರಿ ಮುಚ್ಚಿದ ಸೇದುಬಾವಿ
ಬಾಗೇಪಲ್ಲಿ: ಸರ್ಕಾರಿ ಕುಡಿಯುವ ನೀರಿನ ತೆರೆದ ಸೇದು ಬಾವಿಯನ್ನು ಪ್ರಭಾವಿ ರಾಜಕೀಯ ಮುಖಂಡರೊಬ್ಬರು ರಾತ್ರೋರಾತ್ರಿ ಜೆಸಿಬಿ ಯಂತ್ರದ ಮೂಲಕ ಮುಚ್ಚಿ ಹಾಕಿದ್ದು ಆ ಬಾವಿಯನ್ನು ಯತಾಸ್ಥಿತಿಗೆ ತಂದು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕಿನ ತಿಮ್ಮಂಪಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಚೌಡರೆಡ್ಡಿ, 150 ವರ್ಷಗಳಷ್ಟು ಹಳೆಯದಾದಂತಹ ಬಾವಿಯಲ್ಲಿ ಎಷ್ಷೇ ಬರಗಾಲ ಬಂದರೂ ನೀರು ಇರುತ್ತಿತ್ತು. ಇಂತಹ ಬಾವಿಯನ್ನು ಜಿ.ಪಂ. ಮಾಜಿ ಸದಸ್ಯ ಶ್ರೀರಾಮಪ್ಪ ತನ್ನ ರಾಜಕೀಯ ಪ್ರಭಾವ ಬಳಸಿಕೊಂಡು ರಾತ್ರೋರಾತ್ರಿ ಮುಚ್ಚಿಸಿದ್ದಾರೆ ಎಂದು ಆರೋಪಿಸಿದರು.
ಸುಮಾರು 1 ತಿಂಗಳ ಹಿಂದೆ ರಾತ್ರೋರಾತ್ರಿ ಈ ಬಾವಿಯನ್ನು ಮುಚ್ಚಿರುವುದರಿಂದ ತಿಮ್ಮಂಪಲ್ಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಗಂಗಿರೆಡ್ಡಿಪಲ್ಲಿ, ಮದಕವಾರಿಪಲ್ಲಿ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅನೇಕ ಗ್ರಾ.ಪಂ. ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ. ಈ ತೆರದ ಬಾವಿ ಸೇರಿದಂತೆ 1 ಎಕರೆ 26 ಗುಂಟೆ ಜಮೀನನ್ನು ವಸತಿ ಹೀನರಿಗೆ ನಿವೇಶನಗಳನ್ನು ಹಂಚಲು ಅಂದಿನ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿ ದಿ.22-10-1980 ರಂದು ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು ಇದರ ಮಾಲೀಕ ಚಿನ್ನಪ್ಪ ಅವರಿಗೆ ಪರಿಹಾರದ ಹಣ ವಿತರಿಸಲಾಗಿದೆ.ಆದರೆ ಪರಿಹಾರ ಪಡೆದಿರುವಂತಹ ಚಿನ್ನಪ್ಪ ಮೊಮ್ಮಗನಾದ ಶ್ರೀರಾಮಪ್ಪ ಈ ಸ್ಥಳ ನನಗೆ ಸೇರಿದ್ದೆಂದು ದೌರ್ಜನ್ಯದಿಂದ ಬಾವಿಯನ್ನು ಮುಚ್ಚಿಸಿದ್ದಾರೆ ಎಂದರು.
ಈ ಬಗ್ಗೆ ಕಾರ್ಯದರ್ಶಿಯನ್ನು ಕೇಳಿದರೆ ಈ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ, ಈ ಸಂಬಂಧ ನಮ್ಮ ಕಚೇರಿಯಲ್ಲಿ ದಾಖಲೆಗಳೇ ಇಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಇನ್ನು ಪಿಡಿಓ ಗ್ರಾಮಸ್ಥರು ನಡೆಸುವಂತಹ ಪ್ರತಿಭಟನೆಗೆ ಹೆದರಿ ಕಚೇರಿ ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗ್ರಾ.ಪಂ ಸದಸ್ಯರಾದ ರಾಮಕೃಷ್ಣಪ್ಪ, ಶ್ರೀನಿವಾಸ, ನಾರಾಯಣಪ್ಪ, ಗ್ರಾಮದ ಮುಖಂಡರಾದ ರಾಜಾರೆಡ್ಡಿ, ಬೈರರೆಡ್ಡಿ, ಬಿ.ಎನ್. ವೆಂಕಟರವಣಪ್ಪ, ರಾಮಾಂಜಿನಪ್ಪ, ಕರಿಕನ್ನ, ಎನ್ .ವೆಂಕಟರೆಡ್‌ಡಿ, ಈಶ್ವರಪ್ಪ, ಮಾರಪ್ಪ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

