ಕೋಲಾರ

ಮೂಲ ಸೌಲಭ್ಯ ಕಲ್ಪಿಸಲು ಶಾಸಕರಿಗೆ ಗ್ರಾಮಸ್ಥರ ಮನವಿ

Published On :

ಚಿಂತಾಮಣಿ: ಚಿಕ್ಕಕಟ್ಟಿಗೇನಹಳ್ಳಿ ಹಾಗೂ ವೆಂಕಟರೆಡ್ಡಿ ಪಾಳ್ಯ ಗ್ರಾಮಸ್ಥರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ರಾಜಣ್ಣ  ಮನವಿ ಪತ್ರವನ್ನು ನೀಡಿದರು.
ಚಿಲಕಲನೇರ್ಪು ಹೋಬಳಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದಾಗ ಚಿಕ್ಕಕಟ್ಟಿಗೇನಹಳ್ಳಿ ಕ್ರಾಸ್‌ನಿಂದ ಗ್ರಾಮದವರೆಗೂ ರಸ್ತೆ ಹಳ್ಳ ಗುಂಡಿಗಳಿಂದ ಕೂಡಿದ್ದು, ಓಡಾಡುವುದಕ್ಕೆ ತುಂಬಾ ತೊಂದರೆಯಾಗಿರುವುದರಿಂದ ಈ ಮಾರ್ಗವಾಗಿ ಬಸ್ಸುಗಳು ಗ್ರಾಮಕ್ಕೆ ಬರದೆ ಇರುವುದರಿಂದ ವೃದ್ಧರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆಯೆಂದು ಗ್ರಾಮಸ್ಥರು ಶಾಸಕ ರಾಜಣ್ಣನವರಿಗೆ ಮನವಿ ಮಾಡಿದರು.
ನಂತರ ವೆಂಕಟರೆಡ್ಡಿ ಪಾಳ್ಯದ ಗ್ರಾಮಸ್ಥರಿಗೆ ಚರಂಡಿ, ರಸ್ತೆ ಇಲ್ಲದೆ ಮಳೆ ನೀರು ಮನೆಗಳಿಗೆ ನುಗ್ಗುತ್ತಿರುವುದಾಗಿ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದಾಗ ತಕ್ಷಣ ಶಾಸಕ ರಾಜಣ್ಣ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಗಳಲ್ಲಿನ ಸಮಸ್ಯೆ ಆಲಿಸಿದರು. ಸ್ಥಳದಿಂದಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಶಾಸಕರ ಅನುದಾನದಲ್ಲಿ 3 ಲಕ್ಷ ರು. ವೆಚ್ಚದಲ್ಲಿ ಶೀಘ್ರವೇ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ ಆಶ್ವಾಸನೆ ನೀಡಿದರು.


ಸಿ. ಹೆಚ್. ಮುರಿಗೇಂದ್ರಪ್ಪ ಗೆಲುವಿಗೆ ಮನವಿ


ಚಿಂತಾಮಣಿ: ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಸಿ. ಹೆಚ್. ಮುರಿಗೇಂದ್ರಪ್ಪ ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆಮಾಡಬೇಕೆಂದು ರಾಯಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಕೆ.ರಾಮಕೃಷ್ಣ ಅವರು ಮನವಿ ಮಾಡಿದರು. ಕಾಂಗ್ರೇಸ್ ನಿರ್ಧಾರಕ್ಕೆ ಬದ್ಧರಾಗಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಸಂಸದ ಕೆ. ಹೆಚ್. ಮುನಿಯಪ್ಪಅವರ ಮಾರ್ಗದರ್ಶನದಲ್ಲಿ ಮತ ಕೇಳುತ್ತಿದ್ದು, ಮತದಾರರು ಈ ಬಾರಿ ಬದಲಾವಣೆಗಾಗಿ ಮುರಿಗೇಂದ್ರಪ್ಪ ಅವರನ್ನು ಆಯ್ಕೆ ಮಾಡಬೇಕು ಎಂದರು. ಅಭ್ಯರ್ಥಿ ಮುರಿಗೇಂದ್ರಪ್ಪ ಮಾತನಾಡಿ, ಕಾಂಗ್ರೆಸ್ ನಿರ್ಧಾರದಂತೆ ಸ್ಪರ್ಧಿಸಿದ್ದು, ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಬೆಂಬಲ ಪಡೆದು ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದು, ರಾಮಕೃಷ್ಣ ನೇತೃತ್ವದಲ್ಲಿ ಪ್ರಚಾರ ನಡೆಸುತ್ತಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.