ಕೋಲಾರ

ಆಳ ಉಳುಮೆ, ಸದೃಢ ಬದು ನಿರ್ಮಿಸಿ

Published On :

ಮಾಲೂರು: ಮುಂಗಾರು ವಿಳಂಬವಾಗಿರುವುದರಿಂದ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಕುಂಠಿತವಾಗಿದ್ದು, ರೈತರು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಜಿ.ಆರ್. ಭವ್ಯಾರಾಣಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ತಮ್ಮ ಜಮೀನಿನಲ್ಲಿ ಇಳಿಜಾರಿಗೆ ಅಡ್ಡಲಾಗಿ ಆಳ ಉಳುಮೆ ಹಾಗೂ ಸದೃಢ ಬದುಗಳನ್ನು ನಿರ್ಮಾಣ ಮಾಡಿ ಮಳೆ ನೀರನ್ನು ಜಮೀನಲ್ಲಿ ಇಂಗುವಂತೆ ಮಾಡಬೇಕು. ನಲೆಗಡಲೆ ಹಾಗೂ ತೊಗರಿ ಬಿತ್ತನೆಯನ್ನು ಜು.15ರವರೆಗೆ ಬಿತ್ತನೆ ಮಾಡಲು ಅವಕಾಶವಿದ್ದು, ಮಳೆ ಪ್ರಮಾಣವನ್ನು ಆಧರಿಸಿ ಬಿತ್ತನೆ ಮಾಡಬೇಕು. ಹೆಚ್ಚಿನ ವಿವರಗಳಿಗೆ ಕೃಷಿ ಇಲಾಖೆ ಸಂಪರ್ಕಿಸುವಂತೆ ಮನವಿ ಮಾಡಿದರು.
ತಾಲೂಕಿನಲ್ಲಿ ವಾರ್ಷಿಕ ಸರಾಸರಿ ಮಳೆ 722.7 ಮಿ.ಮೀ. ಆಗಿದ್ದು, 517 ಮಿ.ಮೀ. ಮಳೆಯಾಗಿದೆ. ಈ ಅವಧಿಗೆ ಆಗಬೇಕಾಗಿದ್ದ ವಾಡಿಕೆ ಮಳೆ 189 ಮಿ.ಮೀ.ಗೆ ಬದಲಾಗಿ 159 ಮಿ.ಮೀ. ಆಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ರೈತರಿಗಾಗಿ ಇಲಾಖೆಯು ಕೆಲವು ಮುಂಜಾಗ್ರತೆ ಕ್ರಮಗಳನ್ನು ಸೂಚಿಸಿದ್ದು, ರೈತರು ತಪ್ಪದೆ ಪಾಲಿಸಬೇಕು ಎಂದರು.
100 ಹೆಕ್ಟೇರ್ ಸಾವಯವ ಕೃಷಿ: ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಲು ತಾಲೂಕಿನ 100 ಹೆಕ್ಟೇರ್ ಪ್ರದೇಶವನ್ನು ಆಯ್ಕೆ ಮಾಡಿ ಸರ್ಕಾರೇತರ ಸಂಸ್ಥೆಗಳ ಮುಖಾಂತರ ಸಾವಯವ ಕೃಷಿ ಪದ್ಧತಿ ಅಳವಡಿಸಲಾಗುತ್ತದೆ. ತಾಲೂಕಿನ ರೈತರು ಯೋಜನೆಯ ಸದುಪಯೋಗ ಪಡಿಸಿಕೂಳ್ಳುವ ಜತೆಗೆ ಕಾಂಪೋಸ್ಟ್ ಘಟಕ, ಎರೆಹುಳು ಘಟಕ, ಬಯೋಡೈಜೆಸ್ಚರ್ ಘಟಕಗಳ ನಿರ್ಮಾಣಕ್ಕೆ ನೀಡಲಾಗುವ ಸಹಾಯ ಧನದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ತಾಲೂಕಿನಲ್ಲಿರುವ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ, ದ್ವಿದಳ ಧಾನ್ಯ, ಬತ್ತ, ನೆಲಗಡಲೆ ಬಿತ್ತನೆ ಬೀಜಗಳು ದಾಸ್ತಾನಿದ್ದು, ರಸಗೊಬ್ಬರದ ಬಗ್ಗೆ ಆತಂಕ ಬೇಡ ಎಂದು ಭವ್ಯರಾಣಿ ಹೇಳಿದರು. ಕೃಷಿ ಅಧಿಕಾರಿ ಮುನಿರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.