ಒತ್ತುವರಿ: ಪಿಎಲ್ಡಿ ಬ್ಯಾಂಕಿಗೆ ಪುರಸಭೆ ನೋಟಿಸ್
ಶಿಡ್ಲಘಟ್ಟ: ಪುರಸಭೆಗೆ ಸೇರಿದ ಚರಂಡಿಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಸ್ಥಗಿತಗೊಳಿಸದಿದ್ದರೆ ಸಿವಿಲ್ ಮೊಕದ್ದಮೆ ಹೂಡಲಾಗುತ್ತದೆ ಎಂದು ಪುರಸಭಾ ಮುಖ್ಯಾಧಿಕಾರಿ ಎಸ್.ಎ.ರಾಮ ಪ್ರಕಾಶ್ ಅವರು ಪಿಎಲ್ಡಿ ಬ್ಯಾಂಕಿನ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಯ ರಸ್ತೆಯಲ್ಲಿರುವ ಪಿಎಲ್ಡಿ ಬ್ಯಾಂಕಿನ ಕಟ್ಟಡದ ಪಕ್ಕದಲ್ಲೆ ಇರುವ ಚರಂಡಿಯು ಪುರಸಭೆಯ ಕಂದಾಯ ನಿರೀಕ್ಷಕರು ಹಾಗೂ ಕಂದಾಯ ಅಧಿಕಾರಿಗಳು ಸಲ್ಲಿಸಿರುವ ನೀಲ ನಕ್ಷೆಯಂತೆ ಈ ಜಾಗವು ಪುರಸಭಾ ಚರಂಡಿ ಎಂದು ದೃಢಪಟ್ಟಿದೆ. ಶಿಡ್ಲಘಟ್ಟ ಪುರಸಭೆಯ ವ್ಯಾಪ್ತಿಯು ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬರುವುದಿಲ್ಲ. ಯಾವುದೇ ಹಳೆಯ ಕಟ್ಟಡದ ಮೇಲೆ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡುವಾಗ ಹಾಲಿ ಕಟ್ಟಡ ಆಸ್ತಿ ಭಾರ ಹೊಸಕಟ್ಟಡ ಭಾರವನ್ನು ಹೊರಬಲ್ಲದೆ ಎಂಬ ಅಂಶವನ್ನು ಪರಿಶೀಲಿಸಲು ಸ್ಟ್ರೆಕ್ಚರಲ್ ಎಂಜಿನಿಯರ್ರಿಂದ ಪ್ರಮಾಣ ಪತ್ರ ಪಡೆಯತಕ್ಕದ್ದು. ಮೌಖಿಕವಾಗಿ ನೀಡಿರುವ ಸಮಜಾಯಿಷಿ ಒಪ್ಪತಕ್ಕದಲ್ಲ.
ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಪಡೆದಿರುವ ನಿರಾಪೇಕ್ಷಣಾ ಪತ್ರವು ಷರತ್ತು ಬದ್ಧಪರವಾನಗಿಯಾಗಿದ್ದು, ನಿಮ್ಮ ಕಟ್ಟಡ ನಿರ್ಮಿಸುವ ಕಾಲಕ್ಕೆ ರೇಲ್ವೆ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆದು ನಿರ್ಮಿಸಬೇಕೆಂದು ಷರತ್ತು ಇದ್ದರೂ ಈ ರೀತಿ ನಿರಾಕ್ಷೇಪಣಾ ಪತ್ರ ಪಡೆದಿರುವುದು ಕಂಡುಬಂದಿಲ್ಲ. ಆದ್ದರಿಂದ ನೀವು ಪಡೆದಿರುವ ಪರವಾನಗಿ ಅಸಿಂಧುವಾಗಿರುತ್ತದೆ. ನಿಮ್ಮ ಸಂಸ್ಥೆಯು ಸಾರ್ವಜನಿಕ ಸಂಸ್ಥೆಯಾದ ಕಾರಣ ಸಂಸ್ಥೆಯ ಚಟುವಟಿಕೆಗಳ ಹಿತದೃಷ್ಟಿಯಿಂದ ಪುರಸಭೆಯ ಚರಂಡಿಯ ಮೇಲೆ ನಿರ್ಮಿಸಿರುವ ಆರ್.ಸಿ.ಸಿ.ಪಿಲ್ಲರ್ಗಳನ್ನು ಸ್ವಂತ ವೆಚ್ಚದಲ್ಲಿ ತೆರವುಗೊಳಿಸಿ ಬೇಕೆಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

