ಕೋಲಾರ

ಸೊಳ್ಳೆ ತಾಣವಾಗಿರುವ ರಾಜಾ ಕಾಲುವೆ

Published On :

ಕೋಲಾರ/ಶ್ರೀನಿವಾಸಪುರ: ಶ್ರೀನಿವಾಸಪುರದಲ್ಲಿ ರಾಜಾ ಕಾಲುವೆಗಳನ್ನು ಸ್ವಚ್ಛಗೊಳಿಸಲು ಪುರಸಭೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ನಾಗರಿಕರು ಸೊಳ್ಳೆಗಳ ಹಾವಳಿಗೆ ಸಿಕ್ಕಿ ನಲುಗುತ್ತಿದ್ದಾರೆ.
 ಮಾವಿನ ತವರೂರು ಶ್ರೀನಿವಾಸಪುರ ಪಟ್ಟಣದಲ್ಲಿ ಮಾವಿನ ಸುಗ್ಗಿ ಸೇರಿದಂತೆ ಯಾವಾಗಲೂ ತ್ಯಾಜ್ಯ ಮತ್ತು ಬೃಹದಾಕಾರದ ಅನುಪಯುಕ್ತ ಗಿಡಗಳಿಂದ ತುಂಬಿರುವ ರಾಜಾ ಕಾಲುವೆಗಳು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿರುವುದರಿಂದ ಸುತ್ತ ಮುತ್ತಲ ಜನತೆಯ ನೆಮ್ಮದಿಗೆ ಭಂಗ ಉಂಟಾಗಿದೆ.
ನಾಗರಿಕರಿಗೆ ಕಿರಿಕಿರಿ: ಪಟ್ಟಣದ ಮಧ್ಯ ಭಾಗದಲ್ಲಿ ಕೊಳ್ಳೂರು ರಸ್ತೆಯಿಂದ ಅಮಾನಿಕೆರೆಯವರೆಗೂ ಇರುವ ರಾಜ ಕಾಲುವೆ ಪಟ್ಟಣದ ನಿವಾಸಿಗಳಿಗೆ ಕಿರಿ ಕಿರಿ ಉಂಟುಮಾಡುತ್ತಿದೆ. ಈ ಕಾಲುವೆ ಪ್ರಥಮ ದರ್ಜೆ ಕಾಲೇಜಿನ ಕಾಂಪೌಂಡಿಗೆ ಹೊಂದಿಕೊಂಡಿದ್ದು ಸೊಳ್ಳೆಗಳು ಹಾಗೂ ದುರ್ವಾಸನೆಯಿಂದಾಗಿ ವಿದ್ಯಾರ್ಥಿಗಳು ಭೋದನಾ ಅವಧಿಯಲ್ಲಿ ಮೂಗು ಮುಚ್ಚಿಕೊಂಡು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
 ಆ ಕಾಲುವೆಯ ಸುತ್ತ ಮುತ್ತಲ ನಿವಾಸಿಗಳು ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿದ್ದದರೂ ರಾಜಾ ಕಾಲುವೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಸಣ್ಣ ನೀರಾವರಿ ಇಲಾಖೆಗೆ ದೂರಿ ನೀಡಿ ಎಂದು ಅಧಿಕಾರಿಗಳು ಪುಕ್ಕಟೆ ಸಲಹೆ ನೀಡುತ್ತಾರೆಯೇ ಹೊರತು ಪಟ್ಟಣದ ವ್ಯಾಪ್ತಿಯಲ್ಲಿನ ರಾಜಾ ಕಾಲುವೆಗಳಲ್ಲಿ ಸೊಳ್ಳೆಗಳ ಕಾಟ ನಿಯಂತ್ರಣಕ್ಕೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲವೆಂದು ನಾಗರಿಕರು ದೂರಿದ್ದಾರೆ.
ಸೌಕರ್ಯ ಕಲ್ಪಿಸಿಲ್ಲ: ಸಂತೆ ಮೈದಾನದ ನಿವಾಸಿಗಳ ಪರಿಸ್ಥಿತಿ ಇನ್ನೂ ಶೋಚನೀಯ. ಸಂತೆ ಮೈದಾನದಲ್ಲಿ ಕೊಳಚೆ ನಿರ್ಮೂಲನೆ ಮಂಡಳಿಯಿಂದ ಗುಚ್ಚ ಮನೆಗಳನ್ನು ನಿರ್ಮಿಸಿಕೊಟ್ಟಿದ್ದರೂ ಇವರೆಗೆ ಯಾವುದೇ ಮೂಲಭೂತ ಸೌಕರ್ಯಗಳು ಒದಗಿಸಿಲ್ಲ. ಮಳೆ ಬಂದರೆ ಎಲ್ಲಾ ಮನೆಗಳು ಜಲಾವೃತಗೊಳ್ಳುತ್ತವೆ. ಈ ಭಾಗದ ನಿವಾಸಿಗಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ.
 ರೇಷ್ಮೇ ಗೂಡು ಮಾರುಕಟ್ಟೆ ಮತ್ತು ಸಂತೆ ಮೈದಾನದ ಮಧ್ಯ ಭಾಗದಲ್ಲಿರುವ ಈ ತ್ಯಾಜ್ಯ ತುಂಬಿರುವ ರಾಜಾ ಕಾಲುವೆ ಮಾರುಕಟ್ಟೆಗೆ ಬರುವ ಜನರಿಗೂ ಸೊಳ್ಳೆಯ ರುಚಿಯನ್ನು ತೋರಿಸುತ್ತಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಶಾಸಕರ ಮಾತಿಗೂ ಕಿಮ್ಮತ್ತಿಲ್ಲ: ಪಟ್ಟಣವನ್ನು ಸ್ವಚ್ಛವಾಗಿಡಲು ಪುರಸಭೆ ಮುಖ್ಯಾಧಿಕಾರಿಗಳು. ಅಧ್ಯಕ್ಷರು  ವಾರಕೊಮ್ಮೆ ಆದರೂ ನಗರ ಪ್ರದಕ್ಷಣೆ ಮಾಡಿ ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಪ್ರತಿ ಸಭೆಯಲ್ಲೂ ಸೂಚಿಸಿದರೂ ಅವರ ಮಾತಿಗೆ ಪುರಸಭೆ ಸಿಬ್ಬಂದಿ ಕವಡೇ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.
 ಮಳೆಗಾಲ ಆರಂಭವಾಗಿದ್ದು ಪುರಸಭೆಯವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಪುರಸಭೆ ಹೊಣೆಗಾರಿಕೆ ಆಗಬೇಕಾಗುತ್ತದೆ ಎಂದು ನಾಗರಿಕರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.