ಕೋಲಾರ

ಉತ್ತಮ ಕೃತಿಗಳ ರಚನೆಯಿಂದ ಸಾಹಿತ್ಯ ಲೋಕ ಶ್ರೀಮಂತಗೊಳಿಸಬಹುದು

Published On :

ಕನ್ನಡಪ್ರಭ ವಾರ್ತೆ, ಕೋಲಾರ, ಮಾ.1
ಉತ್ತಮ ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಬೇಕು ಮತ್ತು ದ.ರಾ. ಬೇಂದ್ರೆಯಂತಹ ಖ್ಯಾತ ಕವಿಗಳಂತೆ ಉಸ್ಕೃಷ್ಟ ಮಟ್ಟಕ್ಕೆ ಬೆಳೆದು ಜಿಲ್ಲೆಗೆ ಕೀರ್ತಿ ತರಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕನ್ನಡ ವಿಷಯ ಪರಿವೀಕ್ಷಕ ಸಿ.ಆರ್. ಅಶೋಕ್ ತಿಳಿಸಿದರು.
ತಾಲೂಕಿನ ಪಟ್ನ ಪ್ರೌಢಶಾಲೆಯಲ್ಲಿ, ಕೋಲಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪಟ್ನ ಪ್ರೌಢಶಾಲೆಯ ಸಹಯೋಗದಲ್ಲಿ ನಡೆದ ಬೇಂದ್ರೆ ನುಡಿ ನಮನ ಮತ್ತು ಶಿಕ್ಷಕ ಹಾಗೂ ಲೇಖಕ ಬಸವರಾಜಜ್ಮಾಗೇರಿ ಸ್ವರಚಿತ ಚೈತ್ರ ಸಂಭ್ರಮ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೋಲಾರ ತಾಲೂಕ ಕಸಾಪ ಅಧ್ಯಕ್ಷ ಬೇಂದ್ರಯವರ ಸಾಹಿತ್ಯ ಕೃಷಿಯನ್ನು ಸಾರಸ್ವತ ಲೋಕಕ್ಕೆ ಅವರು ಕೊಟ್ಟ ಕೊಡುಗೆಯನ್ನು ಮೆಲುಕು ಹಾಕಿ ವಿದ್ಯಾರ್ಥಿಗಳೂ ಸಣ್ಣ ಸಣ್ಣ ಚುಟುಕುಗಳನ್ನು ಬರೆಯುವ ಮೂಲಕ ಬಸವರಾಜ್ ರಂತೆ ಉದಯೋನ್ಮುಖ ಲೇಖಕರಾಗಿ ಹೊರಹೊಮ್ಮಬೇಕೆಂದು ಆಶಿಸಿದರು.
ತಾಲೂಕು ಕಸಾಪ ಗೌರವ ಕಾರ್ಯದರ್ಶಿ ರಾಮಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಕಸಾಪವು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಷಾಭಿಮಾನ ಹೆಚ್ಚಿಸುತ್ತಿದೆ ಎಂದರು. ವಕೀಲ ಮಾಗೇರಿ ನಾರಾಯಣಸ್ವಾಮಿ, ಶಿಕ್ಷಕ ಮಾಗೇರಿ ಶ್ರೀನಿವಾಸ್,  ಲೇಖಕ ಬಸವರಾಜ್ ಮ್ಯಾಗೇರಿ, ಕಸಾಪ ತಾಲೂಕ ಅಧ್ಯಕ್ಷ ನಾರಾಯಣಪ್ಪ ಇದ್ದರು.
ಸಹಶಿಕ್ಷಕ ವೈ. ರಘುನಾಥೆ ಬೇಂದ್ರೆಯವರ ಕಾವ್ಯಗಳನ್ನು ಗಾಯನ ಮಾಡಿದರು. ಎನ್. ಪುಷ್ಪ ಸ್ವಾಗತಿಸಿ, ಕೆ. ಮೀನಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.