ಕನ್ನಡ ಸಾಹಿತ್ಯಕ್ಕೆ ಸೂಫಿ ಸಂತರ ಕೊಡುಗೆ ಅಪಾರ: ಮಾಲತೇಶ್
ಕೆಜಿಎಫ್: ಕನ್ನಡ ಸಾರಸ್ವತ ಲೋಕಕ್ಕೆ ಇಸ್ಲಾಂ ಸೂಫಿ ಸಂತರ ಕೊಡುಗೆ ಅಪಾರವಾದದ್ದು ಈ ಸಂತರ ದೈವ ಕೇಂದ್ರೀಯವಲ್ಲ ಬದಲಾಗಿ ಆತ್ಮಜ್ಞಾನ, ಆತ್ಮಾನುಭವ ಅಂತರ್ ಮುಖಿ ತಿಳುವಳಿಕೆ ಲೋಪನ ಉಳ್ಳವರಾಗಿದ್ದರು ಎಂದು ಉಪನ್ಯಾಸಕ ಮಾಲತೇಶ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ದಿ.ನೂರೂನ್ನಿಸಾ ಸ್ಮರಣಾರ್ಥ ದತ್ತಿ ಉಪನ್ಯಾಸದಲ್ಲಿ ಮಾತನಾಡಿ, ಶಿಷುನಾಳ ಷರೀಪ್ ಉತ್ತರ ಕರ್ನಾಟಕದಲ್ಲಿ ಬಡಕುಟುಂಬದಲ್ಲಿ ಜನಿಸಿದರೂ ಆಧ್ಯಾತ್ಮಕ ಸಾಂಸ್ಕೃತಿ ಶ್ರೀಮಂತಿಕೆ ಅವರ ಮನದಲ್ಲಿ ತುಂಬಿತ್ತು. ಭಗವದ್ಗೀತೆ, ವೇದ ಪುರಾಣ ಶಾಸ್ತ್ರದ ಅರಿವನ್ನು ಪಡೆದವರು ಎಂದರು.
ಸಂಸಾರದಲ್ಲಿ ಇದ್ದರೂ ಹೆಣ್ಣು ಹೊನ್ನು ಮಣ್ಣು ಮೋಹಕ್ಕೆ ಒಳಗಾಗದೆ ಬಾಳಿದವರು ತಮ್ಮ ಆಧ್ಯಾತ್ಮಗೀತೆಗಳ ಮೂಲಕ ಮನೆ ಮಾತಾಗಿ ಎಲ್ಲರಿಗೂ ಮೋಕ್ಷ ಮಾರ್ಗ ತೋರುತ್ತಿದ್ದರು. ಶ್ರಾವಣ ಮಾಸದಲ್ಲಿ ಇಂದಿಗೂ ಗುರು ಹಾಗೂ ಶಿಷ್ಯರ ಸಮಾಧಿ ಬಳಿ ಜನ ಜಾತ್ರೆ ನಡೆಯುತ್ತಿದ್ದು ರಾಷ್ಟ್ರೀಯ ಭಾವೈಕ್ಯತೆಗೆ ಸಂತರು ಸ್ಮರಣಾರ್ಥ ಅದ್ಭುತ ಕೊಡುಗೆ ನೀಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೀರವೆಂಕಟಪ್ಪ, ದೇಶಪಾಂಡೆ, ಸದಾಶಿವರೆಡ್ಡಿ, ಶಿಕ್ಷಕಿ ಜಯಲಕ್ಷ್ಮೀ ಸೇರಿದಂತೆ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

