ಮತದಾರರ ಕಿವಿಯ ಮೇಲೆ ಹೂ ಇಡುತ್ತಿರುವ ಮೊಯ್ಲಿ: ಬಿಜೆಪಿ ವಾಗ್ದಾಳಿ
ಸೂಲಿಬೆಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಬಯಲು ಸೀಮೆಗೆ ಎತ್ತಿನಹೊಳೆ ಯೋಜನೆ ತರುತ್ತೇನೆ ಎಂದು ಹೇಳಿ ಸಚಿವ ವೀರಪ್ಪ ಮೊಯ್ಲಿ ಮತದಾರರ ಕಿವಿಯಲ್ಲಿ ಹೂ ಇಡಲು ಹೊರಟಿದ್ದಾರೆ. ಈ ಬಾರಿ ಮತದಾರರು ಮೋಸ ಹೋಗದೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬದಲಾವಣೆಗೆ ಮುಂದಾಗಿದ್ದು, ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಯುವ ಜನ ಅಧ್ಯಕ್ಷ ಸತೀಶ್ ಗೌಡ ಹೇಳಿದ್ದಾರೆ.
ಸೂಲಿಬೆಲೆ ಗ್ರಾಪಂ.ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣಪ್ಪ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ ಜನಪರ ಕಾರ್ಯಗಳಿಗಿಂತ ಹಗರಣಗಳಿಂದ ಕುಖ್ಯಾತಿಯನ್ನು ಪಡೆದುಕೊಂಡಿದೆ. ಗ್ರಾಮಾಂತರ ಜಿಲ್ಲೆಯ ನೀರಿನ ಬವಣಿಯನ್ನು ನಿವಾರಿಸಲು ಎತ್ತಿನ ಹೊಳೆ ಯೋಜನೆ ತರುತ್ತೇನೆ ಎಂದು ಹೇಳಿದ ವೀರಪ್ಪ ಮೊಯ್ಲಿ ಸುಳ್ಳು ಹೇಳುತ್ತಾ ಅಧಿಕಾರ ಅನುಭವಿಸಿದರು. ಎತ್ತಿನ ಹೊಳೆ ಎನ್ನುವುದು ನೀರು ಹರಿಯು ಕಾಲುವೆ. ಈ ಹೊಳೆಯಲ್ಲಿ ರೈತರು ತಮ್ಮ ಎತ್ತುಗಳಿಗೆ (ರಾಸುಗಳಿಗೆ) ನೀರು ಕುಡಿಸುತ್ತಿದ್ದು ಕಾಲ ಕ್ರಮೇಣ ಇದು ಜನರ ಬಾಯಿಯಲ್ಲಿ ಎತ್ತಿನ ಹೊಳೆ ಎಂದು ಖ್ಯಾತಿ ಪಡೆಯಿತು ಎಂಬ ಪ್ರತೀತಿಯಿದೆ. ಈ ಹೊಳೆಯಿಂದ ಬಯಲು ಸೀಮೆಗೆ ಹೇಗೆ ನೀರು ತರುತ್ತಾರೋ ಎಂಬುದನ್ನು ಸರ್ಕಾರ ಜನರಿಗೆ ತಿಳಿಸದೇ ಮುಚ್ಚಿಡುತ್ತಿದೆ. ಸತ್ಯಾಂಶವನ್ನು ಜನರಿಗೆ ತಿಳಿಸುತ್ತಿಲ್ಲ. ಮತದ ಗಿಮಿಕ್ಗಾಗಿ ಮೊಯ್ಲಿ ಎತ್ತಿನ ಹೊಳೆ ಎಂದು ಸುಳ್ಳಹೇಳಿ ಮತ ಪಡೆಯುವ ಯತ್ನ ಈ ಬಾರಿ ಫಲಿಸುವುದಿಲ್ಲ. ಕಾಂಗ್ರೆಸ್ ಪಕ್ಷದಿಂದ ಉತ್ತಮ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಚ್ಚೇಗೌಡರನ್ನು ಗೆಲ್ಲಿಸಿ ಅಬಿವೃದ್ಧಿಗೆ ಕೈ ಜೋಡಿಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಹೊಸಕೋಟೆ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸಮೂರ್ತಿ, ಮುಂಬರುವ ಲೋಕಸಭಾ ಚುನಾವಣಿಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಮೋದಿಯನ್ನು ಪ್ರಧಾನಿ ಮಾಡಲು ಯುವಕರು ಹೆಚ್ಚಿನ ಒತ್ತು ನೀಡಬೇಕು ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಎ.ಜನಾರ್ದನ್ ರೆಡ್ಡಿ ಮಾತನಾಡಿ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಚ್ಚೇಗೌಡರನ್ನು ಗೆಲ್ಲಿಸಲು ಪ್ರತಿಯೊಬ್ಬರು ಪಣ ತೊಡಬೇಕು ಎಂದರು. ಯುವ ಮುಖಂಡ ಚಿಕ್ಕಅರಳಿಗೆರೆ ಜಗದೀಶ್, ಕಂಬಳೀಪುರ ಆನಂದ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

