ಶಾಲೆಗೆ ಜಿಲ್ಲಾ ಮಟ್ಟದ ಪ್ರಶಸ್ತಿ
ಬಂಗಾರಪೇಟೆ: ತಾಲೂಕಿನ ಶ್ರೀರಂಗ ಬಂಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2013-14ನೇ ಸಾಲಿನ ಹಸಿರು ಶಾಲೆ ಎಂದು ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಶಾಲೆಯೂ ತಾಲೂಕಿನ ಗಡಿ ಭಾಗದಲ್ಲಿದ್ದು ಜಿಲ್ಲೆಯಾದ್ಯಂತ ಬರಗಾಲದಿಂದ ತತ್ತರಿಸುತ್ತಿದ್ದು. ನೀರಿಗಾಗಿ ಹಾಹಾಕಾರ ಉಂಟಾಗಿರುವ ಈ ಸಂದರ್ಭದಲ್ಲಿಯೂ ಶಾಲೆ ಆವರಣದಲ್ಲಿ ಸುಂದರ ಸುಸಜ್ಜಿತ ತೋಟ ಮಾಡುವ ಮೂಲಕ ಜಿಲ್ಲೆಗೆ ಹೆಸರು ತಂದಿದ್ದಾರೆ. ಮುಖ್ಯ ಶಿಕ್ಷಕ ಎಸ್. ಜಯರಾಮ್ ಅವರು ಸುಮಾರು ಐದು ವರ್ಷಗಳಿಂದ ಸತತವಾಗಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು. ಕೈತೋಟ ಹಾಗೂ ಸುಂದರ ವನ ನಿರ್ಮಾಣ ಮಾಡುವ ಮೂಲಕ ಶಾಲೆಯಲ್ಲಿ ಹಣ್ಣು ತರಕಾರಿ ಹೂ. ಹಸಿರು ತೋಟ ಸೃಷ್ಟಿಸಿದ್ದಾರೆ. ಶಾಲೆಯ ಪೂರ್ಣ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ.
ಬಾಳೆ, ತೆಂಗು, ವೀಳ್ಯೆ ಬಳ್ಳಿಗಳಿಂದ ಬಳಕುತ್ತಿರುವ ಬಂಗಾರದ ತೋಟ, ಈ ಕಾರ್ಯದಲ್ಲಿ ಶಿಕ್ಷಕರ ಶ್ರಮ, ಭೂತಾಯಿಯ ಆಶ್ರಯದೊಂದಿಗೆ ಅರಳಿ ನಿಂತಿರುವ ಹಸಿರು ವನ. ಮಕ್ಕಳ ಹಸಿವನ್ನು ನೀಗಿಸುವಂತೆ ತನ್ನ ಎಲ್ಲಾ ಫಲವನ್ನು ನೀಡುತ್ತಿರುವ ಬಾಳೆಯ ವನ, ಇವೆಲ್ಲಕ್ಕೂ ಕಿರೀಟವೆಂಬಂತೆ ಮಂಭಾಗಿಲಿನಿಂದ ಶಾಲೆ ಹೆಬ್ಬಾಗಿಲು ತನಕ ಅರಳಿ ನಿಂತಿರುವ ಹಸಿರು ಗಿಡಗಳು ನೋಡಲು ಎರಡು ಕಣ್ಣು ಸಾಲದು.
ಈ ಶಾಲೆಯ ಅಭಿವೃದ್ಧಿಗೆ ಶಿಕ್ಷಕರಾದ ಮಂಜುನಾಥ್, ಎಸ್ಡಿಎಂಸಿ ಅಧ್ಯಕ್ಷ ಹಾಗೂ ಸದಸ್ಯರು ಸಹಕಾರ ನೀಡಿದ್ದಾರೆ ಎಂದು ಮುಖ್ಯ ಶಿಕ್ಷಕ ಜಯರಾಮ್ ತಿಳಿಸಿದ್ದಾರೆ. ಕೋಲಾರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಹಸಿರು ಶಾಲೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶ್ರೀರಂಗಬಂಡಹಳ್ಳಿ ಶಾಲೆ ಗಡಿ ಭಾಗವಾದ ತೆಮಿಳು ನಾಡು ಮತ್ತು ಆಂಧ್ರಪ್ರದೇಶದ ಗಡಿ ಭಾಗದಲ್ಲಿದ್ದು ಈ ಶಾಲೆಗೆ 2013-14 ನೇ ಸಾಲಿನ ಜಿಲ್ಲಾ ಮಟ್ಟದ ಹಸಿರು ಶಾಲೆ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ. ಜಯರಾಜ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

