ಕೋಲಾರ

ಇಂದು ನವಸಾಕ್ಷರರಿಗಾಗಿ ಪರೀಕ್ಷೆ

Published On :

ಕೋಲಾರ: ಲೋಕಶಿಕ್ಷಣ ಸಮಿತಿಯಿಂದ ನವ ಸಾಕ್ಷರರಿಗಾಗಿ ಜಿಲ್ಲಾದ್ಯಂತ 142 ಗ್ರಾಪಂಗಳ 284 ಗ್ರಾಮಗಳಲ್ಲಿ ಭಾನುವಾರ ನಡೆಯುತ್ತಿರುವ ಮೂಲ ಸಾಕ್ಷರತಾ ಪರೀಕ್ಷೆಗೆ 30 ಸಾವಿರ ಮಂದಿ ಕೂರುವ ನಿರೀಕ್ಷೆ ಹೊಂದಲಾಗಿದೆ ಎಂದು ಸಾಕ್ಷರತಾ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಡಿ.ಆರ್. ರಾಜಪ್ಪ ತಿಳಿಸಿದರು.
ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಗ್ರಾಪಂ ಲೋಕಶಿಕ್ಷಣ ಸಮಿತಿ ವತಿಯಿಂದ ಆಯೋಜಿಸಿದ್ದ ನವ ಸಾಕ್ಷರರನ್ನು ಪರೀಕ್ಷೆಗೆ ಕೂರುವಂತೆ ಪ್ರೇರೇಪಿಸುವ ಜಾಗೃತಿ ಜಾಥಾಗೆ ಚಾಲನೆ ನೀಡಿದ ಅವರು ಬೆಳಗ್ಗೆ 10 ರಿಂದ ಸಂಜೆ 5ರವರೆಗೂ ಮೂರು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಹಬ್ಬದ ವಾತಾವರಣ: ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಹಬ್ಬದ ವಾತಾವರಣದಲ್ಲಿ ನವ ಸಾಕ್ಷರರನ್ನು ಸ್ವಾಗತಿಸುವಂತೆ ಪರೀಕ್ಷೆಗೆ ಪೂರಕ ವಾತಾವರಣ ನಿರ್ಮಿಸಲು ಸೂಚಿಸಲಾಗಿದೆ. ಓದಿದವರೇ ಪರೀಕ್ಷೆ ಬರೆಯತ್ತಾರೆಂಬ ಆರೋಪಗಳು ಹಿಂದೆ ನಡೆದಿರುವ ಪರೀಕ್ಷೆಗಳಲ್ಲಿ ಕೇಳಿ ಬಂದಿದ್ದು, ಅಂತಹ ಯಾವುದೇ ಪ್ರಕರಣ ಪತ್ತೆಯಾಗದಂತೆ ಎಚ್ಚರವಹಿಸಲು ಜಿಪಂ ಸಿಇಒ ವಿನೋತ್ ಪ್ರಿಯಾ ಅವರು ಸೂಚಿಸಿದ್ದಾರೆಂದರು. ಸಾಕ್ಷರತಾ ಜಾಗೃತಿ ಜಾಥಾದಲ್ಲಿ ಸಾಕ್ಷರತಾ ತಾಲೂಕು ಸಂಯೋಜಕ ಶ್ರೀರಾಂ, ಅಶ್ವತ್ಥ್, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ಎಂ. ವೆಂಕಟರಮಣಪ್ಪ, ಸುನೀತಾಕುಮಾರಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.