ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ
ಕೋಲಾರ: ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ ಮಾ.12 ರಿಂದ ಪ್ರಾರಂಭವಾಗಲಿದ್ದು ಒಟ್ಟು 23 ಪರೀಕ್ಷಾ ಕೇಂದ್ರಗಳಲ್ಲಿ 16380 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಶಿಸ್ತು ಹಾಗೂ ಕ್ರಮಬದ್ಧ ಪರೀಕ್ಷಾ ಪ್ರಕ್ರಿಯೆಗಳಿಗೆ ಜಿಲ್ಲಾಡಳಿತ ಸಕಲ ಸಿದ್ಧತೆಗಳ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಜಿ. ದೊರೆಸ್ವಾಮಿ ತಿಳಿಸಿದ್ದಾರೆ. ಹೊಸ ವಿದ್ಯಾರ್ಥಿಗಳು 12342, ಪುನರಾವರ್ತಿತ ವಿದ್ಯಾರ್ಥಿಗಳು 3178, ಖಾಸಗಿ ವಿದ್ಯಾರ್ಥಿಗಳು 860 ಪರೀಕ್ಷೆ ಬರೆಯಲಿದ್ದು ಇದರಲ್ಲಿ 8431 ಬಾಲಕರು, 7946 ಬಾಲಕಿಯರು ಇದ್ದು, ಕಲಾವಿಭಾಗದಲ್ಲಿ 5495, ವಾಣಿಜ್ಯ ವಿಭಾಗದಲ್ಲಿ 6502, ವಿಜ್ಞಾನ ವಿಭಾಗದಲ್ಲಿ 4383 ವಿಷಯದ ವಿದ್ಯಾರ್ಥಿಗಳಿದ್ದಾರೆ.
ಪರೀಕ್ಷಾ ಕೇಂದ್ರಗಳ ವಿವರ: ಕೋಲಾರ ತಾಲೂಕು 7 , ಬಂಗಾರಪೇಟೆ 2, ಕೆ.ಜಿ.ಎಫ್ 4, ಮುಳಬಾಗಿಲು 4, ಶ್ರೀನಿವಾಸಪುರ 3, ಮಾಲೂರು 3 ಆಗಿದ್ದು ಇದರಲ್ಲಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದರೆ, ಕೆ.ಜಿ.ಎಫ್‌ನ ಉರಿಗಾಂ ಪದವಿ ಪೂರ್ವ ಕಾಲೇಜು, ಶ್ರೀನಿವಾಸಪುರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಂಗಾರಪೇಟೆ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಾಗಿವೆ.
ಒಟ್ಟು ಪರೀಕ್ಷಾ ಕೇಂದ್ರಗಳು: ಜಿಲ್ಲೆಯಲ್ಲಿ ಒಟ್ಟು 23 ಪರೀಕ್ಷಾ ಕೇಂದ್ರಗಳಿದ್ದು ಅವುಗಳಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪರೀಕ್ಷಾ ಕೇಂದ್ರಗಳ ಸಂಖ್ಯೆ 16, ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಪರೀಕ್ಷಾ ಕೇಂದ್ರಗಳ ಸಂಖ್ಯೆ 3, ಖಾಸಗಿ ಪದವಿ ಪೂರ್ವ ಕಾಲೇಜುಗಳ ಪರೀಕ್ಷಾ ಕೇಂದ್ರಗಳ ಸಂಖ್ಯೆ 4ಆಗಿದೆ. ಕೋಲಾರ ತಾಲೂಕಿನ 7, ಶ್ರೀನಿವಾಸಪುರ 3, ಮುಳಬಾಗಿಲು 4, ಬಂಗಾರಪೇಟೆ 2, ಕೆ.ಜಿ.ಎಫ್ 4,ಮಾಲೂರು 3. ಆಗಿದ್ದು ಕೋಲಾರ ತಾಲೂಕಿನ 5293, ಶ್ರೀನಿವಾಸಪುರ 1285, ಮುಳಬಾಗಿಲು 2981, ಬಂಗಾರಪೇಟೆ 2366, ಕೆ.ಜಿ.ಎಫ್ 1953 ಹಾಗೂ ಮಾಲೂರು ತಾಲೂಕಿನಲ್ಲಿ 2208 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಮಾರ್ಗಸೂಚಿ: ಜಾಗೃತ ದಳದವರು ಯಾವುದೇ ರೀತಿಯ ಗೊಂದಲಗಳನ್ನು ಸೃಷ್ಟಿಸದೇ ವಿದ್ಯಾರ್ಥಿಗೆ ತೊಂದರೆಯಾಗದಂತೆ ಕರ್ತವ್ಯ ರ್ವಹಿಸುವುದು, ಪರೀಕ್ಷಾ ಕೇಂದ್ರಗಳ 200ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡುವುದು, ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡುವುದು. ವಿದಾರ್ಥಿಗಳಾಗಲಿ, ಕೊಠಡಿ ಮೇಲ್ವಿಚಾರಕರಾಗಲಿ ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು ಪ್ರತಿ ವಿದ್ಯಾರ್ಥಿಯು ತಪ್ಪದೇ ಕಾಲೇಜಿನವರು ನೀಡಿರುವ ಗುರುತಿನ ಪತ್ರವನ್ನು ಪರೀಕ್ಷಾ ಕೇಂದ್ರದಲ್ಲಿ ಹಾಜರು ಪಡಿಸಬೇಕು, ಅಡಿಷನಲ್ ಶೀಟ್‌ಗಳನ್ನು ಪರೀಕ್ಷೆಯ ಕೊನೆ ಕ್ಷಣದವರೆಗೂ ನೀಡುವುದು. ಯಾವುದೇ ಪರೀಕ್ಷಾರ್ಥಿಯನ್ನು ನೆಲದ ಮೇಲೆ ಕೂರಿಸದೇ ಪ್ರತಿಯೊಬ್ಬರಿಗೆ ಆಸನ ವ್ಯವಸ್ಥೆ ಮಾಡುವುದು ಹಾಗೂ ಪರೀಕ್ಷಾ ಕೇಂದ್ರದ ಒಳಗೆ ಫೋಟೋಗ್ರಾಫರ್ ಅಥವಾ ವಿಡೀಯೋಗ್ರಾಫರ್‌ಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

