ಜಗತ್ತಲ್ಲಿ ಹೆಣ್ಣೇ ಶ್ರೇಷ್ಠ, ಹೆಣ್ಣಿಲ್ಲದ ಮನೆ ನರಕಕ್ಕೆ ಸಮಾನ
ಬಂಗಾರಪೇಟೆ: ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆಯೇ ವಿನಃ ಕೆಟ್ಟ ತಾಯಂದಿರು ಇರುವುದಿಲ್ಲ. ಪ್ರಕೃತಿ ಎನ್ನುವುದು ತಾಯಿ, ಇದರೊಂದಿಗೆ ಪುರುಷ ಸಮತೋಲನ ಕಾಪಾಡಿಕೊಂಡು ಬಂದರೆ ಮಾತ್ರ ಎಲ್ಲವೂ ಸುಂದರ ಇಲ್ಲದಿದ್ದರೇ ಪ್ರಳಯವಾಗುತ್ತದೆ ಎಂದು ಜೆ.ಎಂ.ಎಫ್.ಸಿ ನ್ಯಾಯಾಧೀಶ ಬಸವರಾಜು ಹೇಳಿದರು.
ಅವರು ಮಂಗಳವಾರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ಮಹಿಳಾ ವಕೀಲರು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಈ ಜಗತ್ತಿನಲ್ಲಿ ಹೆಣ್ಣೆ ಶ್ರೇಷ್ಠ, ಹೆಣ್ಣಿಲ್ಲದ ಮನೆ ನರಕಕ್ಕೆ ಸಮಾನ. ಹೆಣ್ಣು ಮನೆಗೆ ದೇವತೆಯಿದ್ದಂತೆ ಅದು ಎಲ್ಲರ ಮನಸ್ಸಲ್ಲೂ ಬಂದರೇ ಆ ಮನೆ ಸ್ವರ್ಗ ಸಮಾನವಾಗುತ್ತದೆ ಎಂದರು.
ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರಲು ಸರಕಾರ ಅನೇಕ ಕಾನೂನು ಮತ್ತು ಯೋಜನೆಗಳನ್ನು ರೂಪಿಸಿದೆ. ಆದರೆ ಮಹಿಳೆ ಯಾವತ್ತೂ ನಾನು ಅಬಲೆಯಲ್ಲ ಸಬಲೆ ಎಂದು ಆತ್ಮವಿಶ್ವಾಸ ಮನಸ್ಸಿನಲ್ಲಿ ತುಂಬಿಕೊಂಡು ಬಂದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರೆಯುವುದಕ್ಕೆ ಸಹಕಾರವಾಗುತ್ತದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ. ಅದು ತಾಯಿಯಾಗಿರಬಹುದು, ಇಲ್ಲವೇ ಪತ್ನಿ, ಸಹೋದರಿ ಯಾರಾದರೂ ಅದು ಹೆಣ್ಣೇ ಆಗಿರುವುದರಿಂದ ಬದುಕಿನಲ್ಲಿ ಸಾಧಿಸಲು ಸಂಪೂರ್ಣ ಸಹಕಾರ ಕೊಟ್ಟಿರುತ್ತಾರೆ. ಮನುಷ್ಯರ ನಡುವೆ ಪ್ರೀತಿ ಎಂಬ ವಿಷಯದಲ್ಲಿ ಸೋಲು ಗೆಲುವು ಬಂದೇ ಬರುತ್ತದೆ. ದಾಂಪತ್ಯದಲ್ಲಿ ಒಳ್ಳೆಯದಾಗುತ್ತದೆ ಎಂದರೇ ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಸೋತಾಗಲೇ ಸಂಸಾರ ಸುಗುಮವಾಗಿ ನಡೆಯಲು ಸಾಧ್ಯ ಎಂದರು.
ಸಿ.ಡಿ.ಪಿ.ಓ ಸಿ.ವಿ. ರಾಮನ್ ಮಾತನಾಡಿ ಮಹಿಳೆಯರಿಗೆ ಪ್ರತಿಯೊಂದರಲ್ಲೂ ಸಮಾನವಾದ ಹಕ್ಕುಗಳನ್ನು ನೀಡಿದೆ. ಯಾವುದೇ ಕೌಟುಂಬಿಕ ದೌರ್ಜನ್ಯಗಳನ್ನು ಎದುರಿಸಲು ಕಾನೂನು ರೀತಿಯ ನೆರವುಗಳನ್ನು ಮಕ್ಕಳ ಮತ್ತು ಕುಟುಂಭ ಕಲ್ಯಾಣ ಇಲಾಖೆ ಮಾಡುತ್ತಿದೆ ಎಂದರು.
ಹಿರಿಯ ವಕೀಲರಾದ ವಿ.ಬಿ. ಪ್ರಸಾದ್, ಮಹಬೂಬ್ ವಿ,ಎಂ.ಎನ್. ನಂಜುಂಡಪ್ಪ, ಎಲ್.ಎನ್. ರಾಮನಾಥ್ ಮಾತನಾಡಿದರು.
ಸರಕಾರಿ ವಕೀಲ ಬಾರುಕುಲ್ಲಾ ಹುಸೇನ್ ವಕೀಲರಾದ ಗಾಯಿತ್ರಿ, ಗೀತಾಶೆಟ್ಟಿ, ದಾಕ್ಷಾಯಿಣಿ, ನಂದಿನಿ, ಸರೋಜ, ಚೆನ್ನಮ್ಮ, ಮಂಜುಳಪಟೇಲ್ ಮುಖಂಡರಾದ ಪ್ರೇಮ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

