ಬಂಗಾರಪೇಟೆ ಪುರಸಭೆ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷರಾಗಿ ಸಿ. ರಮೇಶ್
ಬಂಗಾರಪೇಟೆ: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಎಲ್ಲರ ನಿರೀಕ್ಷೆಯಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ನ ಬಿ.ಎಂ. ಗಂಗಮ್ಮ ರಂಗರಾಮಯ್ಯ ಮತ್ತು ಸಿ. ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ನಡೆದ ಪುರಸಭೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುವಷ್ಟು ಸ್ಪಷ್ಟ ಬಹುಮತಗಳಿಸಿತ್ತು. ಅಧ್ಯಕ್ಷ ಗಾದಿಗೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮೀಸಲಿದ್ದು, ಹತ್ತು ವರ್ಷಗಳ ಬಳಿಕ ಪುರಸಭೆಯಲ್ಲಿ ಮಹಿಳೆಯರ ಕಾರುಬಾರಿಗೆ ಅವಕಾಶ ದೊರಕಿದ್ದು ಅಧ್ಯಕ್ಷಗಿರಿ ದಕ್ಕಿಸಿಕೊಳ್ಳಲು ಮಹಿಳಾ ಸದಸ್ಯರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದ ಗಂಗಮ್ಮರಂಗರಾಮಯ್ಯ, ಭಾಗ್ಯಮ್ಮ ಮತ್ತು ಜಬೀನ್ತಾಜ್ ನಡುವೆ ಪೈಪೋಟಿ ಇತ್ತಾದರೂ ಬಹುತೇಕ ಸದಸ್ಯರು ಹಾಗೂ ಕಾಂಗ್ರೆಸ್ ಹೈಕಮಾಂಡ್ ಗಂಗಮ್ಮ ಪರವಾಗಿತ್ತು.
ಮೂವರ ಆಕಾಂಕ್ಷಿಗಳನ್ನು ಒಗ್ಗೂಡಿಸಿ ಒಮ್ಮತ ಮೂಡಿಸಲು ಕಳೆದ ಎರಡು ದಿನಗಳಿಂದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹರಸಾಹಸ ಮಾಡಿದರು. ಕೊನೆಗೆ ಸದಸ್ಯರು ಹೈಕಮಾಂಡ್ ನಿರ್ಮಾಣಕ್ಕೆ ನಾವೆಲ್ಲರೂ ಬದ್ದರಾಗಿರುವುದಾಗಿ ಹೇಳಿದ ನಂತರ ನೂತನ ಅಧ್ಯಕ್ಷ ಆಯ್ಕೆಗೆ ಸುಲಭವಾಯಿತು.
ವಿವಿಧ ವಾರ್ಡುಗಳಿಂದ ಪಕ್ಷೇತರರಾಗಿ ಮೂರು ಬಾರಿ ಚುನಾಯಿತರಾಗಿ ಕಳೆದ ಬಾರಿ ಕಾಂಗ್ರೆಸ್ಸಿಂದ ಸ್ಪರ್ಧಿಸಿದ್ದ ನಾಲ್ಕನೇ ಬಾರಿ ಪುರಸಭೆ ಪ್ರವೇಶ ಮಾಡಿದ ಹಿರಿಯ ಸದಸ್ಯೆ ಎಂಬ ಹೆಗ್ಗಳಿಕೆ ಹೊಂದಿರುವ ಗಂಗಮ್ಮರನ್ನು ಹಾಗೂ ಎರಡನೇ ಬಾರಿ ಆಯ್ಕೆಯಾಗಿರುವ ಸಿ.ರಮೇಶ್ರ್ನ್ನು ಹೈಕಮಾಂಡ್ ಸೂಚಿಸಿತು. ಅದರಂತೆ ಇವರಿಬ್ಬರೆ ನಾಮಪತ್ರ ಸಲ್ಲಿಸಿದರಿಂದ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು.ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಉಷಾ ವಹಿಸಿದ್ದರು.
ಸರ್ವಾಂಗೀಣ ಅಭಿವೃದ್ಧಿಗೆ ಒತ್ತು; ಗಂಗಮ್ಮ ಭರವಸೆ
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಗಂಗಮ್ಮ ತಮ್ಮನ್ನು ಆಯ್ಕೆ ಮಾಡಿದ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಪಟ್ಟಣವನ್ನು ಸರ್ವಾಂಗಿಣ ಅಭಿವೃದ್ಧಿಗೆ ಒತ್ತು ಕೊಡಲಾಗುವುದು ಮತ್ತು ಈಗಾಗಲೇ ಪಟ್ಟಣದಲ್ಲಿ ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅಭಾವ ತಾಂಡವಾಡುತ್ತಿದ್ದು ಅದನ್ನು ಹತೋಟಿಗೆ ತರಲು ಮೊದಲ ಆಧ್ಯತೆ ಕೊಡುವುದಾಗಿ ಭರವಸೆ ನೀಡಿದರು. ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಮತ್ತು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಪುರ ಜನರು ನಿಮ್ಮನ್ನು ಏನನ್ನೂ ಕೇಳುವುದಿಲ್ಲ ನರೊಂದು ಬಿಟ್ಟರೆ ಸಮಯವನ್ನು ವ್ಯರ್ಥ ಮಾಡದೆ ಸಮಸ್ಯೆಗಳನ್ನು ನೀಗಿಸುವತ್ತ ಗಮನಹರಿಸಿ ಜನರ ರುಣವನ್ನು ತೀರಿಸುವತ್ತ ಕೆಲಸ ಮಾಡಿ ಜನ ಮಣ್ಣನೆ ಪಡೆಯಿರಿ ಎಂದು ತಿಳಿ ಹೇಳಿದರು.ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ಕುಮಾರ್, ಬ್ಲಾಕ್ ಅಧ್ಯಕ್ಷರಾದ ಪಾರ್ಥಸಾರಥಿ, ಮಂಜುನಾಥ್, ಮಾಜಿ ಅಧ್ಯಕ್ಷರಾದ ಕೆ. ಚಂದ್ರಾರೆಡ್ಡಿ, ಶಂಷುದ್ದಿನ್ಬಾಬು,ರಂಗರಾಮಯ್ಯ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

