ಕೋಲಾರ

ನಗರಸಭೆ ಆಸ್ತಿ ಉಳಿಸಲು ಪ್ರಯತ್ನ: ಮುಬಾರಕ್ ಭರವಸೆ

Published On :

ಕೋಲಾರ: ನಗರದ ಜನತೆಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಹಾಗೂ ನಗರಸಭೆಯ ಆಸ್ತಿಯನ್ನು ಸಂರಕ್ಷಣೆ ಮಾಡಲು ಪ್ರಯತ್ನಿಸುವುದಾಗಿ ನಗರಸಭೆ ನೂತನ ಅಧ್ಯಕ್ಷ ಬಿ.ಎಂ. ಮುಬಾರಕ್ ಭರವಸೆ ನೀಡಿದರು.
ಕೋಲಾರ ನಗರಸಭೆಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನಂತರ ಮೊಟ್ಟ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಇದಕ್ಕೆ ಪರಿಹಾರ ರೂಪಿಸಲು ಎಲ್ಲಾ ಸದಸ್ಯರ ಸಹಕಾರ ಪಡೆಯುವೆ ಎಂದು ತಿಳಿಸಿದರು, ನಗರದಲ್ಲಿನ ಕಲ್ಯಾಣಿಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತೇನೆ. ನಗರಸಭೆಯ ಎಲ್ಲಾ ಸದಸ್ಯರನ್ನು ಒಂದೇ ಕುಟುಂಬದ ಸದಸ್ಯರೆಂತೆ ಪರಿಗಣಿಸಿ ಯಾವುದೇ ವಾರ್ಡಿಗೂ ಅನ್ಯಾಯ ಹಾಗೂ ತಾರತಮ್ಯವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡುವೆ, ಅಧಿಕಾರಿಗಳ ಸಹಕಾರ ಅಗತ್ಯವೆಂದರು.
ಈ ಸಂದರ್ಭದಲ್ಲಿ ಅಧ್ಯಕ್ಷರ ಅವಧಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದು ಪಕ್ಷದ ಆಂತರಿಕ ವಿಷಯವಾಗಿದ್ದು ಮುಖಂಡರು ನಮಗೆ ಏನು ಹೇಳಿದ್ದಾರೋ ಅದನ್ನು ಪಾಲಿಸುತ್ತೇನೆ. ಮುಖಂಡರು ಸೂಚಿಸಿದ ದಿನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲೂ ತಾನು ಬದ್ಧನೆಂದು ಸ್ಪಷ್ಟಪಡಿಸಿದರು.
ತಾನು ಅಧ್ಯಕ್ಷನಾಗಲು ಸಿಪಿಐಎಂ ನ ಗಾಂಧಿನಗರ ನಾರಾಯಣಸ್ವಾಮಿ, ಬಿಜೆಪಿಯ ಮುನೇಶ್, ಪಕ್ಷೇತರ ಸದಸ್ಯರಾದ ಕಾಶಿ ವಿಶ್ವನಾಥ್, ಸುಲ್ತಾನಾ ಮುಕ್ತಿಯಾರ್, ಶಾಂತಮ್ಮ, ಮತ್ತು ಶಂಷೀರ್, ಜೆಡಿಎಸ್ ಎಲ್ಲ ಸದಸ್ಯರು ಹಾಗೂ ಪಕ್ಷದ ನಾಯಕರು ಸಹಕಾರ ನೀಡಿದ್ದಾರೆ. ಇವರ ನಂಬಿಕೆಗೆ ಧಕ್ಕೆ ಬರದಂತೆ ಕರ್ತವ್ಯ ನಿರ್ವಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.