'ನೀರಿನ ಹಾಹಾಕಾರ ನೀಗಿದ ಹರಿಕಾರ'
ಮಾಲೂರು: ಆಧುನೀಕರಣದ ಭರಾಟೆಯಲ್ಲಿ ರಾಜ್ಯ ಕಾಂಕ್ರೀಟ್ ನಾಡಾಗಲಿರುವುದರಿಂದ ನೀರಿನ ಹಾಹಾಕಾರ ಪ್ರಾರಂಭವಾಗಲಿದೆ ಎಂಬ ದೂರದೃಷ್ಟಿವುಳ್ಳ ನೀರಾವರಿ ತಜ್ಞ ಡಾ. ಪರಮಶಿವಯ್ಯ ಹುಟ್ಟು ಹೋರಾಟಗಾರರಾಗಿದ್ದರು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ರಾಜು ಹೇಳಿದರು.
ಅವರು ಸ್ಥಳೀಯ ಕರವೇ ಡಾ. ಪರಮಶಿವಯ್ಯ ರವರ ಗೌರವಾರ್ಥ ಪಟ್ಟಣದ ಕೃಷಿಕ ಸಮಾಜದಲ್ಲಿ ಬುಧವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತ ಸರ್ಕಾರಿ ಅಭಿಯಂತರಾಗಿ ನಿವೃತ್ತ ಹೊಂದಿದ್ದ ಡಾ. ಪರಮಶಿವಯ್ಯ ನಿವೃತ್ತಿ ನಂತರವೂ ಕಳದೆ ನಾಲ್ಕು ದಶಕಗಳಿಂದ ಕಾಂಕ್ರೀಟ್ ನಗರಗಳಾಗಿರುತ್ತಿರುವ ನಮ್ಮ ಇಡೀ ರಾಜ್ಯಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಮಗ್ರ ನೀರಾವರಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ಛಲ ಬಿಡದ ತಿವಿಕ್ರಮ ನಂತೆ ಹೋರಾಟ ಮಾಡುತ್ತಿದ್ದರು.
ಅದರಲ್ಲೂ ಬರಡು ಭೂಮಿಯಾಗುತ್ತಿರುವ ಬಯಲು ಸೀಮೆಗಾಗಿ ರೂಪಿಸಿದ್ದ ಶಾಶ್ವತ ನೀರಾವರಿ ಯೋಜನೆ ಸರ್ಕಾರಗಳ ಇಚ್ಚಾಶಕ್ತಿ ಕೊರತೆಯಿಂದ ಅನುಷ್ಠಾನವಾಗಲಿಲ್ಲ. ನಾಲ್ಕು ದಶಕಗಳ ಅವರ ಪ್ರಯತ್ನಕ್ಕೆ ಸರ್ಕಾರಗಳು ಬೆಲೆ ನೀಡುದಿರುವುದು ಬೇಸರ ಸಂಗತಿಯಾಗಿದೆ ಎಂದರು.
ತಾಲೂಕು ಕಾರ್ಯಾಧ್ಯಕ್ಷ ಬ. ಶ್ರೀನಿವಾಸ್ ಮಾತನಾಡಿ ಡಾ. ಪರಮಶಿವಯ್ಯ ತಾವೂ ಸರ್ಕಾರದ ಸೇವೆಯಲ್ಲಿರಬೇಕಾದರೆ ದಕ್ಷಿಣ ಕನ್ನಡದಲ್ಲಿ ಹೆಚ್ಚು ಕರ್ತವ್ಯ ಸಲ್ಲಿಸಿದ್ದು, ಅಲ್ಲಿದ್ದಾಗಲೇ ಪಶ್ಚಿಮಘಟ್ಟದ ಮಳೆ ನೀರಿ ವ್ಯರ್ಥವಾಗಿ ಸಮುದ್ರಗೆ ಸೇರುತ್ತಿರುವುದನ್ನು ಗಮನಿಸಿ ನೀರಿನ ಸಮಸ್ಯೆ ಎದುರಿಸುತ್ತಿರುವ ಬಯಲು ಸೀಮೆಗೆ ಇಲ್ಲಿಂದ ಹೇಗೆ ನೀರು ಹರಿಸಬಹುದು ಎಂಬ ನಕ್ಷೆ ಸಹ ತಯಾರಿಸಿದ್ದರು. ಆದರೆ ನಮ್ಮ ದುರದೃಷ್ಟ ನಮ್ಮನ್ನಳಿದ ಯಾವ ಸರ್ಕಾರವು ಅವರ ಸಮಗ್ರ ವರದಿಯಂತೆ ಯೋಜನೆ ರೂಪಿಸಲು ಸಾಧ್ಯವಾಗಿಲ್ಲ.ಅವರು ಇಳಿ ವಯಸ್ಸಿನಲ್ಲಿ ತೋರಿಸುತ್ತಿದ್ದ ಹೋರಾಟದ ಕಿಚ್ಚು ಎಕೆ ಸರ್ಕಾರಗಳಿಗೆ ಅರ್ಥವಾಗಿಲ್ಲ ಎಂದರು. ಪುರಸಭೆ ಸದಸ್ಯ ಮುರಳೀಧರ್, ಜಿಲ್ಲಾ ಮಹಿಳಾ ಕಾರ್ಯದರ್ಶಿ ಅನಂತಲಕ್ಷ್ಮಿ,ತಾಲೂಕು ಅಧ್ಯಕ್ಷ ಲತಾಬಾಯಿ ಮಾಡಿಕ್,ನವೀನ್, ಚೆನ್ನಕೃಷ್ಣ, ಆಟೋ ಮಂಜು, ಅಮೀರ್, ರಾಮಾಂಜಿ, ಶ್ಯಾಮ್, ಟೇಕಲ್ ಮಂಜು, ಚಲಪತಿ,ನಾರಾಯಣಿ, ರವಿ ಕುಮಾರ್, ಲವ-ಕುಶ, ವಿನಯ್, ವೆಂಕಟೇಶ್, ನಾರಾಯಣಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

