ಗುಂಪುಗಾರಿಕೆಯೇ ಮುನಿಯಪ್ಪ ಮಾಡಿದ ಅಭಿವೃದ್ಧಿ: ಸುಧಾಕರ್ ಕಿಡಿ
ಚಿಂತಾಮಣಿ: ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಕುತಂತ್ರ ರಾಜಕಾರಣಕ್ಕೆ ಕೋಲಾರ ಲೋಕಸಭಾ ಕ್ಷೇತ್ರ ಅಭಿವೃದ್ಧಿ ಕಾಣದೆ ಪ್ರತಿ ತಾಲೂಕಿನಲ್ಲೂ ಗುಂಪುಗಾರಿಕೆ ಮಾಡಿರುವುದೇ ಅವರ ಅಭಿವೃದ್ಧಿಯೆಂದು ಮಾಜಿ ಶಾಸಕ ಡಾ. ಎಂ.ಸಿ. ಸುಧಾಕರ್ ಕಿಡಿಕಾರಿದರು.
ಅವರು ನಗರದಲ್ಲಿ 45ನೇ ಹುಟ್ಟುಹಬ್ಬವನ್ನು ಬ್ಲೂಬಾಯ್ಸ್ ತಂಡದ ವತಿಯಿಂದ ಸರಳವಾಗಿ ಆಚರಿಸಿಕೊಂಡ ನಂತರ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
1991 ರಿಂದ ನಮ್ಮ ಕುಟುಂಬದ ಮೇಲೆ ರಾಜಕೀಯ ದ್ವೇಷ ಸಾಧಿಸುತ್ತಾ ರಾಜಕೀಯವಾಗಿ ನಮ್ಮನ್ನು ಮುಗಿಸಲು ಜಾತಿ ಎಂಬ ವಿಷ ಬೀಜ ಬಿತ್ತಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಗುಂಪುಗಾರಿಕೆ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುವ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪನಿಗೆ ರಾಜಕೀಯ ಕಲಿಸುತ್ತೇನೆಂದು ಮಾಜಿ ಶಾಸಕ ಸುಧಾಕರ್ ಕೇಂದ್ರ ಸಚಿವರ ವಿರುದ್ಧ ಗುಡುಗಿದರು. ಕಳೆದ ಹಲವು ದಿನಗಳ ಹಿಂದೆ ನಡೆದ ಮುರುಗಮಲ್ಲ ಗ್ರಾಮದಲ್ಲಿ ಸಾಮೂಹಿಕ ವಿವಾಹಗಳು ವಾಲ್ಮೀಕಿ ಸೇವಾ ಸಮಿತಿಯಿಂದ ನಡೆದಿರುವುದು ಸರಿಯಷ್ಟೆ. ಆದರೆ ಬಲಿಜ ಸಮಾಜಕ್ಕೆ ಸೇರಿದ ಬೆಂಗಳೂರು ಉದ್ಯಮಿ ಒಬ್ಬರನ್ನು ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಆಸೆ ಆಮಿಷ ತೋರಿಸಿ ಚಿಂತಾಮಣಿ ಕ್ಷೇತ್ರದಲ್ಲಿ ರಾಜಕೀಯ ಮಾಡಲು ಪ್ರೇರೇಪಿಸಿದ್ದಾರೆಂದು ಹೇಳಿದರು. ನಾನು ಉನ್ನತ ವಿದ್ಯಾಭ್ಯಾಸ ಮಾಡಿ ದಂತ ವೈದ್ಯನಾಗಿದ್ದೇನೆ. ರಾಜಕೀಯ ಅನುಭವ ನಮ್ಮ ತಾತನ ಕಾಲದಿಂದಲೂ ಕಲಿತಿದ್ದೇನೆ. ಆದರೆ ಮಧ್ಯದಲ್ಲಿ ಬಂದಿರುವ ಕೇಂದ್ರ ಸಚಿವರ ಬಳಿ ಈಗಿರುವ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅವರಲ್ಲಿ ಕಲಿಯುತ್ತಿರುವುದು ಅಲ್ಪ-ಸ್ವಲ್ಪ ರಾಜಕೀಯ ಅನುಭವವಾಗಿದೆಯೆಂದು ತನ್ನ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದರು.
ಮುಂದಿನ ದಿನಗಳಲ್ಲಿ ಸ್ಥಳೀಯ ಶಾಸಕ ಜೆ.ಕೆ. ಕೃಷ್ಣಾರೆಡ್ಡಿಗೂ ರಾಜಕೀಯದಲ್ಲಿ ನನಗಾದ ಪರಿಸ್ಥಿತಿಯೇ ಅವರಿಗೂ ಅನ್ವಯಿಸುತ್ತದೆ ಎಂದು ಮಾಜಿ ಶಾಸಕ ಎಂ.ಸಿ. ಸುಧಾಕರ್ ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ಬ್ಲೂಬಾಯ್ಸ್ ತಂಡದ ವತಿಯಿಂದ ಮಾಜಿ ಶಾಸಕ ಡಾ. ಎಂ.ಸಿ. ಸುಧಾಕರ್ ನಿವಾಸದಲ್ಲಿ 45ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಮುಖಂಡರಾದ ಕೋನಪ್ಪಲ್ಲಿ ವೆಂಕಟಶಿವಾರೆಡ್ಡಿ, ಮುನಿಸ್ವಾಮಿ,ವೆಂಕಟರವಣಸ್ವಾಮಿ,ಇಲಿಯಾಸ್ಪಾಷ,ಎ.ಎನ್.ನಾಗರಾಜ್, ವೆಂಕಟರವಣಪ್ಪ, ಶಿವಯ್ಯ, ಸ್ವಶ್ತಿಕ್ ಶಂಕರರೆಡ್ಡಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

