ಕೊಲೆ ಆರೋಪಿ ಹಿಡಿಯಲು ಹೋದಾಗ ಸಿಕ್ಕಿದ್ದು ಅಕ್ರಮ ಕಡಲೆಬೀಜ ಮೂಟೆಗಳು!
ಚಿಂತಾಮಣಿ: ಅಕ್ರಮವಾಗಿ ಕಡಲೆಕಾಯಿ ಬೀಜ ತುಂಬಿದ ಸರಕು ಸಾಗಾಣಿಕೆಯ ಲಾರಿಯನ್ನು ಗಸ್ತುನಲ್ಲಿದ್ದ ಪೋಲೀಸರು ಮಾಲು ಸಮೇತ ವಶಪಡಿಸಿಕೊಂಡು, ವಾಣಿಜ್ಯ ತೆರಿಗೆ ಅಧಿಕಾರಿಗಳ ವಶಕ್ಕೆ ನೀಡಿರುವ ಘಟನೆ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ಕರಿಯಪ್ಪಲ್ಲಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಕೊಲೆ ಪ್ರಕರಣದ ಆರೋಪಿಗಳನ್ನು ಹಿಡಿಯಲು ಅಪರಾಧ ವಿಭಾಗದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಸವರಾಜು ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ನಗರದ ಹೊರವಲಯದ ಮುರುಗಮಲ್ಲ ಮಾರ್ಗವಾಗಿ ದೊಡ್ಡ ಗಂಜೂರು ಗ್ರಾಮದ ಕಡೆಗೆ ಹೊರಟಿದ್ದರು. ಆಗ ಎದುರಿನಿಂದ ಬಂದ ಸರಕು ಸಾಗಣೆ ಮಿನಿ ಲಾರಿ ಚಾಲಕ, ಪೊಲೀಸರನ್ನು ಕಂಡು, ಗಾಬರಿಯಿಂದ ಲಾರಿಯನ್ನು ವೇಗವಾಗಿ ಚಲಾಯಿಸಿದ್ದಾನೆ. ಇದರಿಂದ ಸಂಶಯಗೊಂಡ ಪೊಲೀಸರು ವಾಹನ ಬೆನ್ನುಹತ್ತಿದ್ದಾರೆ. ಆಗ, ಅಕ್ರಮವಾಗಿ ಕಡಲೆಬೀಜ ಕೊಂಡೊಯ್ಯುತ್ತಿದ್ದದ್ದು ಬೆಳಕಿಗೆ ಬಂದಿದೆ.
160 ಮೂಟೆ ಕಡಲೆಬೀಜ: ಆಂಧ್ರಪ್ರದೇಶದ ಕೊತ್ತಕೋಟೆ ತಾಲೂಕಿನಿಂದ ಅಕ್ರಮವಾಗಿ ತೆರಿಗೆ ರಹಿತ ಸುಮಾರು 4 ಲಕ್ಷ ಮೌಲ್ಯದ 160 ಮೂಟೆ ಕಡಲೆಕಾಯಿ ಬೀಜವನ್ನು ತರಲಾಗುತ್ತಿತ್ತು. ಇದು ನಗರದ ಎಸ್ವಿಟಿ ಸೀನಪ್ಪ ಎಂಬವರಿಗೆ ಸೇರಿದೆ. ಪೊಲೀಸರು ಮಿನಿ ಲಾರಿಯನ್ನು ಹಿಡಿದಾಗ ಗುಂಪೊಂದು ಪೊಲೀಸರಿಗೆ ಧಮ್ಕಿ ಹಾಕಿದೆ. ಪೊಲೀಸರಿಗೆ ಈ ಮಾಲನ್ನು ಹಿಡಿಯುವ ಅಧಿಕಾರವಿಲ್ಲವೆಂದು ಪೊಲೀಸರ ಜೊತೆ ವಾಗ್ದಾವದಕ್ಕಿಳಿದಿದ್ದಾರೆ. ಆಗ, ಪೊಲೀಸ್ ಅಧಿಕಾರಿ ಬಸವರಾಜು ಅವರು ದೂರವಾಣಿ ಮುಖಾಂತರ ಜಿಲ್ಲಾಧಿಕಾರಿ ಡಾ. ದಿವ್ಯಾ ಗೋಪಿನಾಥ್ ಅವರಿಗೆ ವಿಷಯವನ್ನು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ವಾಣಿಜ್ಯ ತೆರಿಗೆ ಇಲಾಖೆಯ ಜಾಗೃತದಳ ಅಧಿಕಾರಿ ದಿನೇಶ್ ಹಾಗೂ ಸಿಟಿಒ ಚಂದ್ರಶೇಖರ್ ಮೂರ್ತಿ ಸ್ಥಳಾಕ್ಕಾಗಿಮಿಸಿ ಅಕ್ರಮ ಕಡಲೆಬೀಜ ಮೂಟೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

