ನನ್ನ ಗೆಲವು ಖಚಿತ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ವಿಶ್ವಾಸ
ಚಿಕ್ಕಬಳ್ಳಾಪುರ: ದೇಶದಾದ್ಯಂತ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಲೆ ಬೀಸುತ್ತಿರುವುದರಿಂದ ಕ್ಷೇತ್ರದಲ್ಲಿ ನನಗೆ ಗೆಲುವು ಖಚಿತ ಎಂದು ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಎಸ್ಎಲ್ವಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ಮತ್ತು ಎಚ್.ಡಿ. ಕುಮಾರಸ್ವಾಮಿ ಬೇರೆ ಕಡೆಯಿಂದ ಬಂದು ಇಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ.
ಆದರೆ, ತಾವು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸೇರಿದವರು. ಅವರು ಸೋತರೆ ಕ್ಷೇತ್ರವನ್ನು ಬಿಡುತ್ತಾರೆ. ಇದರಿಂದ ಸ್ಥಳೀಯರಿಗೆ ಮತದಾರರು ಆದ್ಯತೆ ನೀಡಲಿದ್ದಾರೆ ಎಂದು ವಿಮರ್ಶಿಸಿದರು.
ಸಮಾವೇಶದಲ್ಲಿ ಶಾಸಕರಾದ ಎಸ್.ಆರ್. ವಿಶ್ವನಾಥ್, ಜೆ. ನರಸಿಂಹಸ್ವಾಮಿ, ಜಿಲ್ಲಾಧ್ಯಕ್ಷ ರವಿನಾರಾಯಣರೆಡ್ಡಿ, ನಾರಾಯಣಸ್ವಾಮಿ, ಚಂದ್ರಣ್ಣ, ನಾಗರಾಜ್, ಹನುಮೇಗೌಡ ಇದ್ದರು.
ಆಸ್ತಿ: 22.21 ಕೋಟಿ
ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಒಟ್ಟು ರು. 1.56 ಕೋಟಿ ಮತ್ತು ಅವರ ಪತ್ನಿ ಉಮಾಗೌಡ ರು. 4.36 ಕೋಟಿ ಮೌಲ್ಯದ ಚರಾಸ್ತಿ, ಕ್ರಮವಾಗಿ ರು. 22.21 ಕೋಟಿ ಮತ್ತು ರು. 12 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. 2013-14 ರಲ್ಲಿ ಪತಿ ರು. 19.90 ಲಕ್ಷ ಮತ್ತು ಪತ್ನಿ ರು. 13.52 ಲಕ್ಷ ಆದಾಯವನ್ನು ತೋರಿಸಿಕೊಂಡಿದ್ದಾರೆ.
ಇಬ್ಬರು ಕೈಯಲ್ಲಿ ತಲಾ ರು. 5 ಲಕ್ಷ ಇಟ್ಟುಕೊಂಡಿದ್ದಾರಂತೆ. ಬಚ್ಚೇಗೌಡ ಎಸ್ಬಿಎಂ ಬ್ಯಾಂಕಿನಲ್ಲಿ ರು. 4.54 ಲಕ್ಷ, ಎಸ್ಬಿಐನಲ್ಲಿ ರು. 4.68 ಲಕ್ಷ, ವಿಜಯ ಬ್ಯಾಂಕಿನಲ್ಲಿ ರು. 1.25 ಲಕ್ಷ, ಅಪೆಕ್ಸ್ ಬ್ಯಾಂಕಿನಲ್ಲಿ ರು. 3.84 ಲಕ್ಷ, ಚುನಾವಣಾ ವೆಚ್ಚಕ್ಕಾಗಿ ಚಿಕ್ಕಬಳ್ಳಾಪುರ ಎಸ್ಬಿಎಂ ಬ್ಯಾಂಕಿನಲ್ಲಿ ರು. 70 ಲಕ್ಷ ಇಟ್ಟಿದ್ದಾರೆ. ಎಲ್ಐಸಿಯಲ್ಲಿ ರು. 1 ಲಕ್ಷ, ಮ್ಯಾಕ್ಸ್ ನ್ಯೂಯಾರ್ಕ್ಲೈಫ್ ಇನ್ಶೂರೆನ್ಸ್ ಕಂಪನಿಯಲ್ಲಿ ರು. 47 ಸಾವಿರ, ಎಂಬಿಸಿ ಪ್ರಾಪರ್ಟಿ ಡೆವಲಪರ್ಸ್ಗೆ ರು. 65 ಲಕ್ಷ ನೀಡಿದ್ದು, ರು. 1,56,57,987 ಮೌಲ್ಯದ ಚರಾಸ್ತಿ ಮತ್ತು 64.45 ಎಕರೆ ಕೃಷಿ ಭೂಮಿ ಮತ್ತು ಬೆಂಗಳೂರಿನ ಬಿನ್ನಮಂಗಲದಲ್ಲಿ 3 ಸಾವಿರ ಚದರ ಅಡಿಯ ಕೃಷಿಯೇತರ ಭೂಮಿ ಹೊಂದಿದ್ದಾರೆ. ಪ್ರೆಸ್ಟೀಜ್ ಕಂಪನಿಯಿಂದ ರು. 8 ಕೋಟಿ ಮುಂಗಡ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

