ಕೋಲಾರ

ಬೆಗ್ಲಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ರದ್ದು

Published On :

ಕೋಲಾರ: ತಾಲೂಕಿನ ಬೆಗ್ಲಿ ಗ್ರಾಪಂ ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆ ಮಾಡಿದ್ದ ಅವಿಶ್ವಾಸ ರದ್ದಾಗಿದೆ. ಸದಸ್ಯರು ಅವಿಶ್ವಾಸ ಮಂಡನೆ ಮಾಡಿದ್ದರಿಂದ ಶನಿವಾರ ಸಭೆ ಕರೆಯಲಾಗಿತ್ತು. ಆದರೆ, ಸಭೆಗೆ ಯಾವುದೇ ಸದಸ್ಯರು ಹಾಜರಾಗದ ಕಾರಣ, ಅವಿಶ್ವಾಸ ನಿರ್ಣಯ ರದ್ದುಗೊಳಿಸಿ ಹಾಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಮುಂದುವರೆಸುವಂತೆ ಉಪ ವಿಭಾಗಾಧಿಕಾರಿ ಸಿ.ಎನ್. ಮಂಜುನಾಥ್ ಅದೇಶಿಸಿದ್ದಾರೆ.
ಬೆಗ್ಲಿ ಗ್ರಾಪಂ ಜೆಡಿಎಸ್ ಹಿಡಿತದಲ್ಲಿದ್ದು, ಅಧ್ಯಕ್ಷರಾದ ಅನುಸೂಯಮ್ಮ ಮತ್ತು ಉಪಾಧ್ಯಕ್ಷರಾದ ರತ್ನಮ್ಮನವರ ವಿರುದ್ಧ ಅವಿಶ್ವಾಸ ಮಂಡನೆಗೆಂದು ಕೆಲವು ಸದಸ್ಯರು ಒತ್ತಾಯಿಸಿದ್ದರು. ಬೆಗ್ಲಿ ಗ್ರಾಪಂ ಸದಸ್ಯರಾದ ಸೀನಪ್ಪ, ಅನುಸೂಯಮ್ಮ, ಪದ್ಮಮ್ಮ, ಆಂಜನಮ್ಮ, ಗೋವಿಂದಪ್ಪ, ರತ್ನಮ್ಮ, ರತ್ನಮ್ಮ, ಮುನಿಶಾಮಪ್ಪ, ಅಂಬರೀಷ್, ಮುನಿಯಪ್ಪ, ಚನ್ನಮ್ಮ, ದಾಸಪ್ಪ, ಲಕ್ಷ್ಮೀದೇವಮ್ಮ, ಶ್ರೀನಿವಾಸಪ್ಪ, ರತ್ನಮ್ಮ, ರಾಜಣ್ಣ, ಗಂಗರಾಜು ಸೇರಿದಂತೆ 16 ಸದಸ್ಯರ ಬಲ ಹೊಂದಿದ್ದು, ಅವಿಶ್ವಾಸ ನಿರ್ಣಯಕ್ಕೆ 11 ಮಂದಿ ಅವಶ್ಯಕತೆ ಇತ್ತು. ಆಡಳಿತ ಜೆಡಿಎಸ್ ಹಿಡಿತದಲ್ಲಿದೆ. ವಿರೋಧಿ ಬಣದವರು ಇಂದು ಅವಿಶ್ವಾಸ ಮಂಡಿಸದೇ ಮುಖಭಂಗವಾದಂತಿದೆ.
ಅವಿಶ್ವಾಸ ಮಂಡನೆ ವಿಫಲವಾಗಿರುವುದಕ್ಕೆ ಜೆಡಿಎಸ್ ಕಸಬಾ ಅಧ್ಯಕ್ಷ ರಾಮಕೃಷ್ಣೇಗೌಡ, ಮೂರಾಂಡಹಳ್ಳಿ ಗೋಪಾಲ್, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಕರ್ನಾಟಕ ರೈತ ಹಕ್ಕುಗಳ ಹೋರಾಟ ಸಮಿತಿಯ ಚಂದ್ರಮೌಳಿ, ಸಂತಸ ವ್ಯಕ್ತಪಡಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.