ಕೋಲಾರ

ವಿದ್ಯಾರ್ಥಿಗೆ ವಿದ್ಯೆ, ಕ್ರೀಡೆಗಳೇ ಸಾಂಸ್ಕೃತಿಕ ಸಂಪತ್ತು

Published On :

ಉದಯಪುರ (ಚನ್ನರಾಯಪಟ್ಟಣ ತಾ.):  ವ್ಯಾಸಂಗದ ಹಂತದಲ್ಲಿ ವಿದ್ಯಾರ್ಥಿಗೆ ವಿದ್ಯೆ, ಕ್ರೀಡೆ, ಸಾಂಸ್ಕೃತಿಕ ಸಂಪತ್ತು ಇದ್ದಂತೆ ಎಂದು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ದೇವರಾಜೇಗೌಡ ಹೇಳಿದರು.
ಉದಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ,  ವಿದ್ಯಾರ್ಥಿ ತನ್ನ ವೃತ್ತಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ವಿದ್ಯಾ ನೀಡುವ ಸ್ಥಳ ಮತ್ತು ಗುರುವಿನ ಬಗ್ಗೆ ಪೂಜ್ಯ ಭಾವನೆ ಹಾಗೂ ಧ್ಯಾನದ ಮನಸ್ಸಿರಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ನಂಜುಂಡಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹೂವಿಗೆ  ಪರಿಮಳ, ಹಣ್ಣಿಗೆ ರುಚಿ ಪ್ರಕೃತಿದತ್ತವಾಗಿ ಬಂದಂತೆ ವಿದ್ಯಾರ್ಥಿಗೆ ಗುರುವಿನ ಮೂಲಕ ಜ್ಞಾನ ಬರುತ್ತದೆ. ತಂದೆ ತಾಯಿ ಜನ್ಮ ಕೊಡುತ್ತಾರೆ. ಆನಂತರ ಈ ನಾಡಿಗೆ ಏನು ಕೊಡಬೇಕೆಂಬುದನ್ನು ನಾವೇ ನಿರ್ಧರಿಸಿ, ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.
ಅಭಿಮಾನದಿಂದಿರಬೇಕು: ಏಕಲವ್ಯ  ಮತ್ತು ಅರ್ಜುನನಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಗುರುವೊಬ್ಬನೇ. ಏಕಲವ್ಯ ಜೀವದ ಉಳಿವಿಗಾಗಿ ತನ್ನ  ವಿದ್ಯೆ ಬಳಸಿಕೊಂಡರೆ, ಅರ್ಜುನ ಜೀವದ ಅಳಿವಿಗಾಗಿ ಬಳಸುತ್ತಾನೆ. ನಾವು ಉತ್ತಮವಾದುದುನ್ನು ಆಯ್ಕೆ ಮಾಡಿಕೊಂಡು ಕೆಟ್ಟದ್ದನ್ನು ಕೈಬಿಡಬೇಕೆಂದರು. ಜಗತ್ತಿಗೆ ಬೆಳಕು ನೀಡುವ ಸೂರ್ಯನ ಬಗ್ಗೆ ಎಲ್ಲರೂ ಅಭಿಮಾನದಿಂದಿರಬೇಕು ಎಂದರು.
ಗಂಗಾಧರಯ್ಯ ಮಾತನಾಡಿ, ಜಾಗತಿಕ ಮಟ್ಟದ ಬದಲಾವಣೆಗೆ  ವಿದ್ಯಾರ್ಥಿ ಬದಲಾಗಬೇಕು, ಸ್ಪರ್ಧಾತ್ಮಕ ಪರೀಕ್ಷೆಗೆ ಸದಾ ಸಿದ್ಧರಾಗಿರಬೇಕು. ವಿದ್ಯಾರ್ಥಿಗಳು ಪ್ರತಿಭಾಶೀಲರಾಗಿ ಗುರುತಿಸಿಕೊಳ್ಳಬೇಕು. ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉಮೇಶ್ ನಿರೂಪಿಸಿದರು, ಮಿಲನ ಪ್ರಾರ್ಥಿಸಿದರು, ಮಣಕಂಠ ಸ್ವಾಗತಿಸಿದರು. ಹರೀಶ್ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ವೆಂಕಟೇಶ ಗೌಡ, ಪ್ರೊ. ಹುನುಮಂತಯ್ಯ,  ಗಂಗಾಧರಯ್ಯ, ಪ್ರಕಾಶ್, ವೆಂಕಟೇಶ್, ಶಿಲ್ಪಾ, ರೂಪಾ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುಟ್ಟರಾಜು ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.