ಕೋಲಾರ: ಅಚ್ಚುಕಟ್ಟಾಗಿ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆ
ಕ.ಪ್ರ. ವಾರ್ತೆ, ಕೋಲಾರ, ಮೇ 7
ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 20 ನಾಗರೀಕ ಪೊಲೀಸ್ ಕಾನ್ಸಟೇಬಲ್ ಮತ್ತು 5 ಮಹಿಳಾ ಕಾನ್ಸಟೇಬಲ್ ಸೇರಿದಂತೆ ಒಟ್ಟು 25ಹುದ್ದೆಗಳ ನೇಮಕಾತಿ ಸಲುವಾಗಿ ನಡೆದ ಪರೀಕ್ಷೆಗೆ ಒಟ್ಟು 1111 ಅರ್ಜಿಗಳು ಬಂದಿದ್ದು ನೇಮಕಾತಿ ಪ್ರಕ್ರಿಯೆ ಬುಧವಾರ ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಚ್ಚುಕಟ್ಟಾಗಿ ನಡೆಯಿತು.
ಮೇ 7 ರಂದು ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು, ಸುಮಾರು 550 ಮಂದಿಗೆ ದೈಹಿಕ ಪರೀಕ್ಷೆಗೆ ಹಾಜರಾಗುವಂತೆ ಕರೆ ನೀಡಲಾಗಿ ಇದರಲ್ಲಿ 356 ಅಭ್ಯರ್ಥಿಗಳು ಹಾಜರಾಗಿದ್ದರು.
ಮೊದಲ ಹಂತದಲ್ಲಿ ಪ್ರವೇಶ ಪತ್ರ ಸೇರಿದಂತೆ ಇತರೆ ವಿದ್ಯಾರ್ಹತೆ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮಸಂಖ್ಯೆವಾರು ಎದೆಯ ಸಂಖ್ಯೆಯನ್ನು ನೀಡಿ 1600ಮೀಟರ್ ದೂರದ ಓಟವನ್ನು 6.60 ನಿಮಿಷದಲ್ಲಿ ಕ್ರಮಿಸಲು ಗುರಿ ನಿಗದಿ ಮಾಡಲಾಗಿತ್ತು.
ಇದಾದ ನಂತರ ಗುಂಡು ಎಸೆತದೊಂದಿಗೆ ಉದ್ದ ಜಿಗಿತ ಇಲ್ಲವೆ ಎತ್ತರ ಜಿಗಿತದಲ್ಲಿ ಯಾವುದಾದರೂ ಒಂದರಲ್ಲಿ ಅಭ್ಯರ್ಥಿ ಆಯ್ಕೆಯಂತೆ ಸದರಿ ಪರೀಕ್ಷೆ ಎದುರಿಸಬೇಕಾಗಿತ್ತು.
ತದನಂತರ ಎತ್ತರ ಹಾಗೂ ಎದೆ ಸುತ್ತಳತೆಯ ಪರೀಕ್ಷೆ ನಡೆಸಲಾಗಿ ಒಂದೊಂದು ಹಂತದಲ್ಲೂ ಬಹುಮಂದಿ ಅರ್ಹರು ಆಯ್ಕೆಯಾದರೆ ಕೆಲ ಮಂದಿ ಸಾಮರ್ಥ್ಯ ಕೊರತೆಯ ಪರಿಣಾಮ ಪರೀಕ್ಷೆಯಲ್ಲಿ ವಿಫಲತೆ ಹೊಂದುವಂತಾಯಿತು.
ಈ ಎಲ್ಲಾ ಹಂತದ ಪರೀಕ್ಷೆಗಳಲ್ಲಿ ವಿಡಿಯೋ ಚಿತ್ರೀಕರಣ ಹಾಗೂ ಛಾಯಾಗ್ರಹಣ ಮಾಡಲಾಯಿತು ಮತ್ತು ಎತ್ತರ ಮತ್ತು ತೂಕದ ಪರೀಕ್ಷೆ ಎಲೆಕ್ಟ್ರಾನಿಕ್ ಕಂಪ್ಯೂಟರೀಕರಣದ ಮೂಲಕ ನೆರವೇರಿಸಲಾಯಿತು.
ಎಸ್ಪಿ ಅಜಯ್ ಹಿಲೋರಿ, ಹೆಚ್ಚುವರಿ ರಕ್ಷಣಾಧಿಕಾರಿ ಐ.ಎಂ. ಜಮೀಲ್, ಡಿ.ವೈ.ಎಸ್.ಪಿ ಅಶೋಕ್ಕುಮಾರ್ ನೇತೃತ್ವದಲ್ಲಿ ಇತರೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕಾತಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಮೇ 8 ರಂದು ಉಳಿದ ಅಭ್ಯರ್ಥಿಗಳು ಸೇರಿದಂತೆ ಮಹಿಳಾ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಯುವ ಮೂಲಕ ಆಯ್ಕೆ ಪ್ರಕ್ರಿಯೆ ಅಂತ್ಯಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

