ಕೋಲಾರ

ಸಮಾನತೆ, ಶಿಕ್ಷಣ ದಾಸೋಹಕ್ಕೆ ವೀರಶೈವ ಸಮಾಜದ ಕೊಡುಗೆ ಸ್ಮರಣೀಯ: ಶ್ರೀಗಳು

Published On :

ಗೌರಿಬಿದನೂರು: ಕಾಯಕವೇ ಕೈಲಾಸ ಎಂಬ ನಂಬಿಕೆಯಿಂದ ಬದುಕುತ್ತಿರುವ ವೀರಶೈವ ಸಮಾಜದವರು ರಾಜ್ಯದಲ್ಲಿ ಶಿಕ್ಷಣ, ಕೃಷಿ, ಮತ್ತು ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದು ಶ್ಲಾಘನೀಯ ಎಂದು ಅಟವಿ ಜಂಗಮ ಸುಕ್ಷೇತ್ರ ಅಧ್ಯಕ್ಷರು ಚಿಕ್ಕತೊಟ್ಲು ಕೆರೆತುಮಕೂರು, ಅಟವಿ ಶಿವಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗಜ್ಯೋತಿ ಬಸವೇಶ್ವರರ ಮತ್ತು ವೈರಾಗ್ಯ ನಿಧಿ ಅಕ್ಕ ಮಹಾದೇವಿಯವರ ಜಯಂತಿ ಸಮಾರಂಭದಲ್ಲಿ ಮಾತನಾಡುತ್ತ ವೀರ ಶೈವ ಸಮಾಜದವರು ಎಲ್ಲಾ ಧರ್ಮಗಳು, ಎಲ್ಲಾ ಜಾತಿ ವರ್ಗಗಳಲ್ಲಿ ಸಮಾನತೆ ಕಾಣುವ ಸಹೃದಯಿಗಳು ಅದರಲ್ಲೂ ಎಲ್ಲಾ ವೀರಶೈವ ಮಠಗಳಲ್ಲಿ ಎಲ್ಲಾ ಜಾತಿ ವರ್ಗಗಳಿಗೆ ಶಿಕ್ಷಣ ಹಾಗೂ ಅನ್ನ ದಾಸೋಹ ನೀಡುತ್ತಿರುವುದು ಸಂತಸದ ವಿಷಯ ಸಾಧನೆಯಿಂದ ದೇಹ ಮತ್ತು ಆತ್ಮವನ್ನು ಗೆಲ್ಲಬಹುದು ಎಂಬ ಸಾರಂಶವನ್ನು ಲೋಕಕ್ಕೆ ತೋರಿಸಿಕೊಟ್ಟ ಸಮಾಜ ನಮ್ಮದು ಸರ್ವಜೀವನ ಶಾಂತಿಯಿಂದ ಸಮಾಜವನ್ನು ಸುಧಾರಣೆ ಮಾಡಬಹುದು ಎಂದು ಬಸವಣ್ಣನವರು ಸಾರಿದ ಸಂತ ನಮ್ಮ ಸಮಾಜದವರೇ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ಮುಖ್ಯ ಅತಿಥಿ ಸಾಹಿತಿ ಪ್ರೊ.ಜಿ. ಎಸ್. ಸಿದ್ದಲಿಂಗಯ್ಯ ಮಾತನಾಡುತ್ತ 12ನೇ ಶತಮಾನ ಕೈಲಾಸವನ್ನು ಭೂ ಲೋಕದಲ್ಲಿ ತೋರಿಸಿಕೊಟ್ಟ ಮಹಾನ್ ಸಂತರು. ಜನಿಸಿ ಇಂದಿಗೂ ಅವರುಗಳು ರಚಿಸುವ ವಚನಗಳು ನಮಗೆ ಆದರ್ಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಸೇವಾ ಸಮಿತಿ ಎಲ್ ಮಹದೇವಯ್ಯ, ಕಿರಿತೆರೆ ನಟ ಅರಬಗಟ್ಟಿ  ಬಸವರಾಜು, ಜಿ. ಪರಮಶಿವಯ್ಯ, ಸಮುದಾಯದ ಮುಖಂಡರಾದ ಜಿ. ನಂಜಪ್ಪ, ಶಿಕ್ಷಕ ಶಿವಪ್ರಸಾದ್, ಮಲ್ಲೇಶಯ್ಯ, ನಟರಾಜು, ನಂಜುಂಡಪ್ಪ ಭಾಗವಹಿಸಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.