ಭಕ್ತವತ್ಸಲಂ, ರಾಜೇಂದ್ರನ್ ಬಂಗ್ಲೆ ವಾಪಸ್ಗೆ ಮಾಜಿ ಶಾಸಕ ಆಗ್ರಹ
ಕ.ಪ್ರ.ವಾರ್ತೆ ಕೆಜಿಎಫ್ ಮೇ 11
ಚಿನ್ನದ ಗಣಿ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಎಂ.ಭಕ್ತವತ್ಸಲಂ ಹಾಗೂ ಎಸ್.ರಾಜೇಂದ್ರನ್ ಅವರಿಗೆ ನೀಡಿರುವ ಬಂಗಲೆಯನ್ನು ವಾಪಸ್ ಪಡೆದು, ಕಾರ್ಮಿಕರಿಗೆ ನೀಡಬೇಕು ಎಂದು ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ ಆಗ್ರಹಿಸಿದ್ದಾರೆ.
ನಗರದ ಕಿಂಗ್ಜಾರ್ಜ್ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಭಕ್ತವತ್ಸಲಂ ಹಾಗೂ ಎಸ್.ರಾಜೇಂದ್ರನ್ ಅವರಿಗೆ ಬಿಜಿಎಂಎಲ್ ಆಡಳಿತ ವರ್ಗ ಬಂಗಲೆಯನ್ನು ನೀಡಿತ್ತು. ಆದರೆ ಅವರು ಮಾಜಿ ಶಾಸಕರಾದ ಮೇಲೂ ಬಂಗ್ಲೆಗಳನ್ನು ಆಡಳಿತ ಮಂಡಳಿಗೆ ವಾಪಸ್ ನೀಡಿಲ್ಲ. ಕೂಡಲೇ ಆಡಳಿತ ಮಂಡಳಿ, ಅವರಿಗೆ ನೋಟಿಸ್ ನೀಡಿ, ಬಂಗ್ಲೆ ವಾಪಸ್ ಪಡೆಯಬೇಕು. ಇಲ್ಲದಿಂದ ಕೆಜಿಎಫ್ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ನೀರಿನ ಸಮಸ್ಯೆ ಬಗೆಹರಿಸಿ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಶಾಸಕಿ ವೈ.ರಾಮಕ್ಕ ಅವರ ಅಧ್ಯಕ್ಷತೆಯಲ್ಲಿ 32 ಕೊಳವೆ ಬಾವಿಗಳನ್ನು 1.25 ಕೋಟಿ ವೆಚ್ಚದಲ್ಲಿ ಕೊರೆಯಲು ತೀರ್ಮಾನಿಸಲಾಗಿದೆ. ಅದಕ್ಕೆ ಜಿಲ್ಲಾಧಿಕಾರಿಗಳು ಅನುಮೋದನೆ ಮಾಡಿದ್ದಾರೆ. ಆದರೆ ನಗರಸಭೆ ಅಧ್ಯಕ್ಷ ಎಂ.ಭಕ್ತವತ್ಸಲಂ ನಗರದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗುತ್ತಿಲ್ಲ. ರಾಜಕೀಯ ಮಾಡುತ್ತಿದ್ದಾರೆ. ಆಯುಕ್ತರು ಅವರ ಕೈಬೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಸುರೇಶ್ನಾರಾಯಣ, ಕಾರ್ಯದರ್ಶಿ ಬಾಟಾ ಗೋಪಾಲ್, ಮುಖಂಡರಾದ ನೈನಾ ರವಿ, ಮುನಿಸ್ವಾಮಿರೆಡ್ಡಿ, ಮೇಘನಾಥ್, ಬಿಜಿಎಂಎಲ್ ಕಾರ್ಮಿಕ ಒಕ್ಕೂಟ ಸಂಘದ ಅಧ್ಯಕ್ಷ ಯಶವಂತ್ರಾಜ್, ಗುಣಶೇಖರ್ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

