ಕೋಲಾರ ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಎಂ.ಗೋಪಾಲಕ್ಕೆ ಅವಿರೋಧ ಆಯ್ಕೆ
ಕೋಲಾರ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯ ನೂತನ ಅಧ್ಯಕ್ಷರಾಗಿ ಜೆಡಿಎಸ್ನ ಎಂ. ಗೋಪಾಲಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎರಡನೇ ಅವಧಿಗೆ ಆಯ್ಕೆಯಾಗಿದ್ದ ಕುರ್ಕಿ ಕೆ.ಆರ್. ರಾಜೇಶ್ವರಿ ಹರೀಶ್ ಅವರು ನೀಡಿದ ರಾಜೀನಾಮೆಯಿಂದಾಗಿ ಉಳಿದಿದ್ದ 8 ತಿಂಗಳ ಅವಧಿಗೆ, ನಡೆದ ಚುನಾವಣೆಯಲ್ಲಿ ಕ್ಯಾಲನೂರು ಕ್ಷೇತ್ರದ ಎಂ.ಗೋಪಾಲಪ್ಪ ಅವರ ಅವಿರೋಧ ಆಯ್ಕೆಯಾದರು. ಈ ಆಯ್ಕೆಗೆ ಸದಸ್ಯರು ಸರ್ವ ಸಮ್ಮತ ಸಹಕಾರ ನೀಡಿದ್ದು ವಿಶೇಷವಾಗಿತ್ತು. ತಹಸೀಲ್ದಾರ್ ಶಂಕರಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ. ಗೋಪಾಲಪ್ಪ ಅವರನ್ನು ಹೊರತುಪಡಿಸಿ ಬೇರೆ ಯಾವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು. ಗೋಪಾಲಪ್ಪ ಅವರು ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರದಲ್ಲಿ ಮಾಜಿ ಅಧ್ಯಕ್ಷೆ ರಾಜೇಶ್ವರಿ ಅವರು ಸೂಚಕರಾಗಿ ಸಹಿ ಹಾಕಿದ್ದರು, ಚುನಾವಣಾ ಸಹಾಯಕರಾಗಿ ಎ.ಪಿ.ಎಂ.ಸಿ ಕಾರ್ಯದರ್ಶಿ ನಾರಾಯಣ ರಾಜು ಕಾರ್ಯನಿರ್ವಹಿಸಿದರು.
ಪ್ರಭಾರಿ ಅಧ್ಯಕ್ಷರಾಗಿದ್ದ ಉಪಾಧ್ಯಕ್ಷ ವಡಗೂರು ವಿ. ರಾಮು ಅವರಿಂದ ಅಧಿಕಾರ ಹಸ್ತಾಂತರ ಪಡೆದ ಎಂ. ಗೋಪಾಲಪ್ಪ ಅವರು ಮಾತನಾಡಿ, 'ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ' ಎಂದರು.
ಎಪಿಎಂಸಿ ಸದಸ್ಯರಾದ ಕಾಂಗ್ರೆಸ್ನ ಹೊಳಲಿ ಪ್ರಕಾಶ್, ಟಿ.ವಿ. ಕೃಷ್ಣಪ್ಪ, ನಾಮಿನಿ ಸದಸ್ಯರಾದ ಸುಗಟೂರು ರವಿ, ಹರಳಕುಂಟೆ ವೆಂಕಟೇಶ್, ಅಲ್ಲಾ ಬಕಾಶ್, ವರ್ತೂರು ಬಣದ ಎನ್. ರಾಜಣ್ಣ, ಜೆಡಿಎಸ್ ಸದಸ್ಯರಾದ ಬಣಕನಹಳ್ಳಿ ನಟರಾಜ್, ಚಂದ್ರೇಗೌಡ, ಎಂ. ಈರಪ್ಪ, ಲಕ್ಷ್ಮಣ ಗೌಡ, ಗದ್ದೆ ಕಣ್ಣೂರು ನಾರಾಯಣಸ್ವಾಮಿ, ಕೆ. ರಮೇಶ, ಕೆ. ರಾಮಚಂದ್ರಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

