ಕೋಲಾರ

ಅನುಮತಿ ಇಲ್ಲದ ಪಿಯು ಕಾಲೇಜಿಗೆ ಮಕ್ಕಳ ಸೇರಿಸಬೇಡಿ: ಪೋಷಕರಿಗೆ ಪಿಯು ಡಿಡಿ ಮನವಿ

Published On :

ಕೋಲಾರ: ಸರ್ಕಾರದ ಅನುಮತಿಯಿಲ್ಲದೇ ತಲೆಯೆತ್ತಿರುವ ಪದವಿ ಪೂರ್ವ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಬೇಡಿಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಜಿ. ದೊರೆಸ್ವಾಮಿ ಪೋಷಕರಿಗೆ ಮನವಿ ಮಾಡಿದ್ದಾರೆ.
ಪದವಿ ಪೂರ್ವ ಕಾಲೇಜು ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಕೆಲವು ಆಡಳಿತ ಮಂಡಳಿಗಳು ಮಾನ್ಯತೆ ಅಥವಾ ಅನುಮತಿ ಸಿಗದಿದ್ದರೂ ಕಾಲೇಜುಗಳ ನಾಮಫಲಕ ಹಾಕಿ ದಾಖಲಾತಿಗೆ ಯತ್ನಿಸುತ್ತಿವೆ ಎಂಬ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಎಕ್ಸ್‌ಲೆಂಟ್ ಪದವಿ ಪೂರ್ವ ಕಾಲೇಜು, ಮಿಲತ್‌ವೆಮೆನ್ಸ್ ಪಿಯು ಕಾಲೇಜು, ಗ್ರೀನ್ ವ್ಯಾಲಿ ಪಿಯು ಕಾಲೇಜು, ಕೆಂಬೋಡಿಯ ಜನತಾ ಪದವಿ ಪೂರ್ವಕಾಲೇಜು, ಸೆಂಟ್‌ಆನ್ಸ್ ಪದವಿ ಪೂರ್ವಕಾಲೇಜು, ಚನ್ನೇಗೌಡ ಮಹೇಶ ಪದವಿ ಪೂರ್ವಕಾಲೇಜು, ರವಿ ಪದವಿ ಪೂರ್ವ ಕಾಲೇಜುಗಳಿಗೆ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಗೆಯೇ ಕೆಜಿಎಫ್‌ನ ವಿನಾಯಕ ಪದವಿ ಪೂರ್ವ ಕಾಲೇಜು, ಬಂಗಾರಪೇಟೆಯ ಜಯಶೀಲಮ್ಮ ಸೆಂಟ್ರಲ್ ಪದವಿ ಕಾಲೇಜು, ಅಮರಾವತಿ ಸ್ವತಂತ್ರ ಪದವಿಪೂರ್ವ ಕಾಲೇಜು, ಮುಳಬಾಗಿಲಿನ ಸೆಂಟ್‌ಆನ್ಸ್ ಪದವಿ ಪೂರ್ವ ಕಾಲೇಜು, ಶ್ರೀನಿವಾಸಪುರದ ಮಿಷನ್ ಇಂಡಿಯಾ ಪದವಿ ಪೂರ್ವ ಕಾಲೇಜು, ಶತಶೃಂಗ ಪಪೂ ಕಾಲೇಜು, ಕುಮಾರ ಸಂಭವ  ಪಪೂ ಕಾಲೇಜು ಹಾಗೂ ಮಾಲೂರು ತಾಲೂಕು ಗುಡ್ನಹಳ್ಳಿಯ ಬಾಪೂಜಿ ಪದವಿ ಪೂರ್ವ ಕಾಲೇಜುಗಳಿಗೆ ಸರ್ಕಾರ ಇನ್ನು ಅನುಮತಿ ನೀಡಿಲ್ಲ ಎಂದು ಉಪನಿರ್ದೇಶಕರು ತಿಳಿಸಿದ್ದಾರೆ. ಸರ್ಕಾರದಿಂದ ಅನುಮತಿ ಪಡೆಯದ ಈ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಬಾರದು ಎಂದು ಅವರು ಪೋಷಕರಲ್ಲಿ ಮನವಿ ಮಾಡಿದ್ದಾರೆ. ಇಲಾಖೆಯ ಅನುಮತಿ ಇಲ್ಲದೇ ಕಾಲೇಜನ್ನು ಬೇರೆಡೆಗೆ ವರ್ಗಾಯಿಸಿರುವ ಜೀನಿಯಸ್ ಕಾಲೇಜಿಗೆ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ 1 ಲಕ್ಷ ರು. ದಂಡ ವಿಧಿಸಿದೆ ಎಂದು ಎಂ.ಜಿ. ದೊರೆಸ್ವಾಮಿ ತಿಳಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.