'ಸೌಂದರ್ಯ ವ್ಯಕ್ತಿತ್ವದ ಪ್ರತೀಕ'
ತುಮಕೂರು: ಹೆಣ್ಣು ಮತ್ತು ಸೌಂದರ್ಯ ಒಂದೇ ಮುಖದ ಎರಡು ನಾಣ್ಯಗಳು, ಅಲಂಕಾರ, ಆಭರಣಗಳು ಅವರ ಹಕ್ಕು. ಅವರು ಸುಂದರವಾಗಿ ಕಾಣಲು ಅವರು ತಮ್ಮ ಸಮಯದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಇಂದಿನ ಕಾಲದಲ್ಲಿ ಅವಶ್ಯಕವಾಗಿದೆ.
ಜೊತೆಗೆ ಸೌಂದರ್ಯ ಕೇವಲ ನಮ್ಮ ಬಾಹ್ಯ ಸೌಂದರ್ಯವನ್ನು ಅಭಿವ್ಯಕ್ತಿಸುವುದು ಮಾತ್ರವಲ್ಲದೆ ಅದು ನಮ್ಮ ವ್ಯಕ್ತಿತ್ವನ್ನು ಪ್ರತಿಬಿಂಬಿಸುತ್ತದೆ ಉಪನ್ಯಾಸಕಿ ಲೀಲಾ ಲೇಪಾಕ್ಷಿ ಅಭಿಪ್ರಾಯಪಟ್ಟರು. ಅವರು ಸಮರ್ಥ್ ಪೌಂಡೇಷನ್ ನಗರದ ರವೀಂದ್ರ ಕಲಾನಿಕೇತನದಲ್ಲಿ ಆಯೋಜಿಸಿದ್ದ ಬ್ಯೂಟೀಷಿಯನ್ ತರಬೇತಿಯ ಮುಕ್ತಾಯ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಹಾಗೂ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮನೆ ಜೊತೆಗೆ ಹೊರಗಡೆಯೂ ಕಾರ್ಯನಿರ್ವಹಿಸುತ್ತಿರುವ ಹೆಣ್ಣು ಮಕ್ಕಳು ಸೌಂದರ್ಯದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಅವಶ್ಯಕ ಎಂದು ಸೌಂದರ್ಯಕ್ಕೆ ಮತ್ತು ಅರೋಗ್ಯಕ್ಕೆ ಸಂಭಂದಿಸಿದಂತೆ ಮಹಿಳೆಯರಿಗೆ ಕೆಲವು ಕಿವಿ ಮಾತನ್ನು ಹೇಳಿದರು.
ಬೇಸಿಗೆ ಶಿಬಿರ ಸಹಾಯಕ: ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ ಕುಮುದಮ್ಮ ಮಾತನಾಡಿ, ಮಕ್ಕಳು ಕೇವಲ ಓದು ಬಹರಕ್ಕೆ ಸೀಮಿತವಾಗದೆ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ತೊಡಗಿಕೊಳ್ಳಬೇಕು.
ಆ ನಿಟ್ಟಿನಲ್ಲಿ ಇಂತಹ ಬೇಸಿಗೆ ಶಿಬಿರಗಳು ಸಹಾಯಕವಾಗುತ್ತವೆ. ಮಕ್ಕಳ ಪ್ರತಿಭೆಯನ್ನು ಹೊರತೆಗೆಯುವಲ್ಲಿ ಸಮರ್ಥ್ ಫೌಂಡೇಷನ್ ಉತ್ತಮ ವೇದಿಕೆಯನ್ನು ಒದಗಿಸಿದೆ. ಫೌಂಡೇಷನ್ನಿನ ಇಂತಹ ಯಾವುದೇ ಕಾರ್ಯಕ್ರಮಕ್ಕೆ ನಮ್ಮ ಇಲಾಖೆಯಿಂದ ನಮ್ಮ ಸಹಕಾರವನ್ನು ಮುಂದಿನ ದಿನಗಳಲ್ಲಿ ಒದಗಿಸಲು ಪ್ರಯತ್ನಿಸಲಾಗುವುದು ಎಂದರು. ಸಮರ್ಥ್ ಫೌಂಡೇಷನ್ನಿನ ವ್ಯವಸ್ಥಾಪಕ ನಿರ್ದೇಶಕಿ ರಾಣಿ ಚಂದ್ರಶೇಖರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ನಮ್ಮ ಸಂಸ್ಥೆಯು ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಸಂಬಂಧಿಸಿದಂತೆ ಅನೇಕ ತರಬೇತಿಗಳನ್ನು ಆಯೋಜನೆ ಮಾಡುತ್ತಿದ್ದು ಆ ಹಿನ್ನೆಲೆಯಲ್ಲಿ ಜನಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಬ್ಯೂಟೀಷಿಯನ್ ತರಬೇತಿಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಗಿದೆ. ಇನ್ನೂ ಅನೇಕ ತರಬೇತಿಗಳು ನಡೆಯುತ್ತಿವೆ ಎಂದು ತಮ್ಮ ಸಂಸ್ಥೆ ಧ್ಯೇಯೋದ್ದೇಶಗಳನ್ನು ವಿವರಿಸಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

