ಕೋಲಾರ

ಉದರ ನಿಮಿತ್ತಂ ಬಹುಕೃತ ವೇಷಂ

Published On :

ಕೋಲಾರ: ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮನುಷ್ಯ ಏನೆಲ್ಲಾ ಕಷ್ಟಪಡಬೇಕಾಗುತ್ತದೆ ಎಂಬುದಕ್ಕೆ ಶ್ರೀರಾಮನ ವೇಷಧಾರಿ ವೀರಣ್ಣ ಹಾಗೂ ಹನುಮಂತನ ಪಾತ್ರದ ಶ್ಯಾಮಣ್ಣನೇ ಸಾಕ್ಷಿ.
ತಾತ-ಮುತ್ತಾತರ ಕಾಲದಿಂದ ಪಾರಂಪರಾಗತವಾಗಿ ನಡೆಸಿಕೊಂಡು ಬರುತ್ತಿರುವ ಬೀದಿ ನಾಟಕವನ್ನು ವೀರಣ್ಣ ಮತ್ತು ಶ್ಯಾಮಣ್ಣ ಬದುಕಿಗಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮೂಲತ- ಆಂಧ್ರ ಪ್ರದೇಶದವರಾದ ವೀರಣ್ಣ ಮತ್ತು ಶ್ಯಾಮಣ್ಣ ಕೋಲಾರದಲ್ಲಿ ಗುರುವಾರ ವೇಷಧಾರಿಗಳಾಗಿ ಕಾಣಿಸಿಕೊಂಡಿದ್ದು ಜಿಲ್ಲಾಧಿಕಾರಿಗಳ ಕಚೇರಿಯ ಬಳಿ.
ರಣಬಿಸಿಲು ಲೆಕ್ಕಿಸದೆ ಈ ಇಬ್ಬರು ಮೈತುಂಬ ಬಣ್ಣ, ಶ್ರೀರಾಮ, ಆಂಜನೇಯರನ್ನು ಹೋಲುವ ಬಟ್ಟೆಗಳನ್ನು ಧರಿಸಿ ಹಾಡುಗಳನ್ನು ಹಾಡುತ್ತಾ, ಕುಣಿಯುತ್ತಾ ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡಿದರು. ನಾವು ಮೂಲತ- ಆಂಧ್ರದವರಾದರೂ ಪ್ರಸ್ತುತ ಬಳ್ಳಾರಿಯಲ್ಲಿದ್ದೇವೆ. ಪ್ರತಿ ವರ್ಷ ಕೋಲಾರಕ್ಕೆ ಬಂದು ಜನರಿಂದ ಸಹಾಯ ಪಡೆಯುತ್ತೇವೆ, ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಪ್ರಭಾಕರ್ ಅವರು ಅಲೆಮಾರಿಗಳಾದ ನಮಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು, ಬಣ್ಣದ ಬದುಕು ಕಷ್ಟವಾಗಿದೆ, ನಮಗೆ ಬೇರೆ ಯಾವುದೇ ದಾರಿ ಇಲ್ಲ,ಸರ್ಕಾರ ಏನಾದರೂ ಅನುಕೂಲ ಮಾಡಿಕೊಡಬೇಕೆಂದು ಕೋರಿದರು. ನಮಗೆ ಬಳ್ಳಾರಿಯಲ್ಲಿ ಇರುವ ಮನೆ ಇಲ್ಲ, ಉದ್ಯೋಗವಿಲ್ಲ, ರೇಷನ್ ಕಾರ್ಡು ಇಲ್ಲ, ಕೋಲಾರದ ಜಿಲ್ಲಾಧಿಕಾರಿಗಳು ಸರ್ಕಾರದಿಂದ ಸಿಗುವ ಸೌಲಭ್ಯ ಕಲ್ಪಿಸುವ ಭರವಸೆಯಿಂದ ಬಂದಿರುವುದಾಗಿ ಹೇಳಿಕೊಂಡರು.
ಒಳ್ಳಾರಿಯಲ್ಲಿ ಸರ್ಕಾರಿ ಸೌಲಭ್ಯಕ್ಕೆ ಪ್ರಯತ್ನಿಸಲಿಲ್ಲವೇ ಎಂಬ ಪ್ರಶ್ನೆಗೆ ವೀರಣ್ಣ, ಪ್ರಯತ್ನಿಸಿ ಪ್ರಯೋಜನವಾಗಲಿಲ್ಲ, ಅದಕ್ಕಾಗಿಯೇ ಇಲ್ಲಿಗೆ ಬಂದಿದ್ದೇವೆ, ಇಲ್ಲೂ ಅನುಕೂಲವಾಗದಿದ್ದರೆ ರಾಜ್ಯ ಸುತ್ತುವುದನ್ನು ಮುಂದುವರೆಸುತ್ತೇವೆ, ಜನ ಕೊಟ್ಟ ಹಣದಲ್ಲಿ ಇರುವಷ್ಟು ದಿನ ಕಾಲ ಕಳೆಯುತ್ತೇವೆಂದರು.
ಆಂಧ್ರ ಪ್ರದೇಶದಲ್ಲಿ ನಮಗೆ ಗುರುತಿನ ಚೀಟಿ ನೀಡಿದ್ದಾರೆ, ಬೀದಿ ನಾಟಕ ಕಲಾವಿದರು ಎಂದು ನಮ್ಮನ್ನು ಪರಿಗಣಿಸಿದ್ದಾರೆ, ಅದೇ ರೀತಿ ಕರ್ನಾಟಕದಲ್ಲೂ ನಮಗೆ ಸಂಬಂಧಪಟ್ಟವರು ಗುರುತಿನ ಚೀಟಿ ಹಾಗೂ ಬದುಕಿಗೆ ಬೇಕಾದ ಸಹಾಯ ಮಾಡುವರೆಂಬ ವಿಶ್ವಾಸವಿದೆ,ಇದಕ್ಕಾಗಿಯೇ ಜಿಲ್ಲಾಧಿಕಾರಿಗಳನ್ನು ಭೇಟಿ ಆಗಲು ವೇಷಧಾರಿಗಳಾಗಿಯೇ ಬಂದಿದ್ದೇವೆಂದು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.