ಹಲವಡೆ ಬಿಜೆಪಿ ವಿಜಯೋತ್ಸವ
ಗೆಲವಿಗೆ ಬೈಕ್ ರ್ಯಾಲಿ
ಚಿಂತಾಮಣಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನರೇಂದ್ರಮೋದಿ ಅಲೆಯಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತ ಪಡೆದಿರುವುದರಿಂದ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿ ವಿಜಯೋತ್ಸವ ಆಚರಿಸಿದರು. ನಗರದ ಬಿಜೆಪಿ ತಾಲೂಕು ಘಟಕದ ವತಿಯಿಂದ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಕಮಲದ ಧ್ವಜಗಳೊಂದಿಗೆ ವಿಜಯ ಘೋಷ ಕೂಗುತ್ತಾ ಪಟಾಕಿ ಸಿಡಿಸಿ ಜನರಿಗೆ ಸಿಹಿ ಹಂಚಿ ಸಂಭ್ರಮಪಟ್ಟರು. ಈ ಸಂದರ್ಭದಲ್ಲಿ ಸತ್ಯನಾರಾಯಣ ಮಹೇಶ್, ವೆಂಕಟರವಣ, ನಗರಸಭಾ ಸದಸ್ಯ ಸುಜಾತಮ್ಮಶಿವಣ್ಣ, ಮಾಡಿಕೆರೆ ಅರುಣ್,ಕುರುಟಹಳ್ಳಿ ಮಂಜುನಾಥ್, ಸೂರ್ಯಪ್ರಕಾಶ್, ರಾಜಾರೆಡ್ಡಿ, ಗಾಜುಲ ಶಿವ, ಮಹೇಶ್ ಇದ್ದರು.
ಮಾಲೂರಲ್ಲಿ ಖುಷಿ
ಮಾಲೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡುತ್ತಿದ್ದಂತೆ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟ್ಟಣದ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ,ಸಿಹಿ ಹಂಚಿದ ಬಿಜೆಪಿ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸಿದರು.
ಗ್ರಾಮ ದೇವತೆ ಮಾರಿಕಾಂಬ ದೇವಾಲಯದಲ್ಲಿ ವಿಶೇಷ ಪೊಜೆ ಸಲ್ಲಿಸಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ತಾಲೂಕು ಅಧ್ಯಕ್ಷ ಸೂ.ವೆಂಕಟೇಶ್, 'ಕಳೆದ ಮೂರು ದಶಕಗಳಿಂದ ಯಾವ ರಾಜಕೀಯ ಪಕ್ಷ ಸಾಧಿಸದ ರೀತಿಯಲ್ಲಿ ಬಿಜೆಪಿ ಈ ಬಾರಿ ದಾಖಲೆಯ ಫಲಿತಾಂಶ ಪಡೆದಿದೆ. ಕಾಂಗ್ರೆಸ್ ಮುಕ್ತ ದೇಶ ಮಾಡಲು ಬಹುತೇಕ ಯಶಸ್ವಿಯಾಗಿರುವ ಭಾವಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ದೇಶದಲ್ಲಿ ಕೇವಲ ಅಭಿವೃದ್ಧಿ ಮಾತ್ರ ಕಾಣಲಿದೆ' ಎಂದು ಹೇಳಿದರು. ಜಿಪಂ ಸದಸ್ಯ ರಾಮಸ್ವಾಮಿರೆಡ್ಡಿ, ತಾಪಂ ಅಧ್ಯಕ್ಷೆ ಆಶಾ ರಾಜಪ್ಪ, ಗೋಪಾಲ್ಗೌಡ, ಆನಂದ್, ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ಸಿ.ಪಿ.ನಾಗರಾಜು, ರಾಮಮೂರ್ತಿ, ವೆಂಕಟೇಶ್, ಸಾಬೂಸಾಬ್, ಭಾಗ್ಯಮ್ಮ ಮುನಿರಾಜು, ನಂಜುಂಡಪ್ಪ, ಷಣ್ಮುಖಪ್ಪ, ಅಪ್ಪಿರಾಜು, ಶೇಷಗಿರಿ, ರಾಜಾರಾಂ, ವೆಂಕಟೇಶ್ ಗೌಡ, ತಿ.ನಾರಾಯಣಸ್ವಾಮಿ, ಸಿ.ಎಂ.ಸಿ.ಮುನಿರಾಜು, ವೆಂಕಟಚಲಪತಿ, ಬಾಲೂ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

