ಕೋಲಾರ

ವಿದೇಶಕ್ಕೆ ಹೋಗಲು ಸಾಲ: ದಂಪತಿ ವಿಷ ಸೇವಿಸಿ ಆತ್ಮಹತ್ಯೆ

Published On :

ಕೆಜಿಎಫ್: ಸಾಲ ಬಾಧೆ ತಾಳಲಾರದೆ ದಂಪತಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಮೆಲ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಕೊಟೆ ಗ್ರಾಮದಲ್ಲಿ ನಡೆದಿದೆ.
ಚಿನ್ನಕೊಟೆ ಗ್ರಾಮದ ನಿವಾಸಿ ತುಳಸಿರಾಮ್(45) ಹಾಗೂ ಮಂಜುಳಾ(38) ಆತ್ಮಹತ್ಯೆ ಮಾಡಿಕೊಂಡವರು. ಈ ದಂಪತಿಗೆ ಒಬ್ಬ ಛಮಗ, ಮಗಳಿದ್ದಾರೆ. ಕಳೆದ ಮಂಗಳವಾರ ಸಂಜೆ ಮಕ್ಕಳಿಬ್ಬರನ್ನು ಕೆಜಿಎಫ್‌ನ ಬೌರಿಲಾಲ್‌ಪೇಟೆಯಲ್ಲಿರುವ ತಮ್ಮ ತಂಗಿಯ ಮನೆಗೆ ಕಳುಹಿಸಿದ್ದಾರೆ. ಬುಧವಾರ ಬೆಳಗ್ಗೆ 10 ಗಂಟೆಯಾದರೂ ತಂದೆ ತಾಯಿಯಿಂದ ಇನ್ನೂ ಫೋನ್ ಕರೆ ಬಂದಿಲ್ಲ ಎಂದು ಮಕ್ಕಳಿಬ್ಬರೂ ತಂದೆಯ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಅತ್ತ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮನೆಯ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಆಗ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಮನೆ ಮಾಲೀಕರು ವಿಷಯವನ್ನು ಬೆಮೆಲ್‌ನಗರ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಎ.ಕೆ.ವಿವೇಕಾನಂದ, ಸಿಪಿಐ ಪವನ್‌ಕುಮಾರ್, ಪಿಎಸ್‌ಐ ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿ, ತನಿಖೆ ನಡೆಸುತ್ತಿದ್ದಾರೆ.

ಕಾರಣವೇನು?
ತುಳಸಿರಾಮ್ ಹೊರ ದೇಶದಲ್ಲಿ ಕೆಲಸ ಮಾಡಿಕೊಂಡಿದ್ದು ಮೂರು ವರ್ಷಗಳ ಹಿಂದೆಯಷ್ಟೆ ಮನೆಗೆ ಹಿಂತಿರುಗಿದ್ದರು. ಆದರೆ, ಇಲ್ಲಿ ಅವರಿಗೆ ಸರಿಯಾದ ಕೆಲಸ ಸಿಗದೆ ಬೆಮೆಲ್ ಕಾರ್ಖಾನೆಯಲ್ಲಿ ಕೆಲ ಕಾಲ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದರು. ಪತ್ನಿ ಮಂಜುಳಾ ಮನೆಯಲ್ಲೇ ಬಟ್ಟೆಗಳನ್ನು ಹೊಲಿದುಕೊಂಡು ಬರುವ ಹಣದಲ್ಲಿ ಸಂಸಾರ ನಡೆಸಿಕೊಂಡಿದ್ದರು. ತುಳಸಿರಾಮ್ ಪುನಾ ಹೊರದೇಶಕ್ಕೆ ಹೋಗಲು ಅಲ್ಲಲ್ಲಿ ಲಕ್ಷಾಂತರ ಸಾಲವನ್ನು ಮಾಡಿಕೊಂಡಿದ್ದರು. ಈ ಸಾಲ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.