ಕೋಲಾರ

ಎಂ.ಜಿ.ಮಾರುಕಟ್ಟೆ ಸ್ಥಿತಿ ಆ ದೇವರಿಗೇ ಪ್ರೀತಿ!

Published On :

ಕೆಜಿಎಫ್: ನಗರದ ಎಂ.ಜಿ.ಮಾರುಕಟ್ಟೆಯಲ್ಲಿ ಫುಟ್‌ಪಾಥ್‌ನಲ್ಲಿ ತರಕಾರಿ, ಹಣ್ಣು ಹಂಪಲು, ಸೇರಿದಂತೆ ಇತರೆ ವ್ಯಾಪಾರದ ಅಂಗಡಿಗಳನ್ನು ಹಾಕಿರುವುದರಿಂದ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ಸ್ಥಳವಿಲ್ಲದೆ ಪರದಾಡುವಂತಾಗಿದೆ.
ದ್ವಿಚಕ್ರ ವಾಹನಗಳು ಮತ್ತು ಲಗೇಜ್ ಆಟೋಗಳು, ಇತರೆ ವಾಹನಗಳನ್ನು ಎಲ್ಲೆಂದರಲ್ಲಿ ಗಂಟೆಗಟ್ಟಲೆ ನಿಲ್ಲಿಸುವುದರಿಂದ ಸಂಚಾರ ತೊಂದರೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಸಾರ್ವಜನಿಕರು ಓಡಾಡುವ ರಸ್ಥೆಗಳಲ್ಲೇ ಅಂಗಡಿಗಳಿವೆ. ಇದರಿಂದ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಇನ್ನೊಂದೆಡೆ ಬೀಡಾಡಿ ದನಗಳು, ನಾಯಿಗಳು ಓಡಾಟದಿಂದ ಮಹಿಳೆಯರು ಮತ್ತು ಮಕ್ಕಳು ಮಾರುಕಟ್ಟೆಗೆ ಬರಲು ಭಯಭೀತರಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ವ್ಯಾಪಾರಸ್ಥರ ಮತ್ತು ಗ್ರಾಹಕರ ಆರೋಪ. ಮಾರುಕಟ್ಟೆಯೊಳಗೆ ಪ್ರವೇಶಿಸುವ ವಾಹನಗಳಿಗೆ ನಗರಸಭೆ ಗುತ್ತಿಗೆಯನ್ನು ನೀಡಿ 2 ರಿಂದ 20ವರೆಗೂ ವಸೂಲಿ ಮಾಡಲಾಗುತ್ತಿತ್ತು. ಇದೀಗ ಇನ್ನು ಟೆಂಡರ್ ಕರೆಯದ ಕಾರಣ ಯಾವುದೇ ಅಡೆತಡೆಗಳಿಲ್ಲದೆ ಲಾರಿಗಳು, ಟೆಂಪೋಗಳು, ಲಗೇಜ್ ಆಟೋಗಳು, ಪ್ರಾಣಿಕರ ಆಟೋಗಳು, ದ್ವಿಚಕ್ರ ವಾಹನಗಳು ಮಾರುಕಟ್ಟೆಯೊಳಗೆ ನುಗ್ಗುತ್ತಿವೆ.
ಇನ್ನೂ ಮೀನು, ಕೋಳಿ, ಕುರಿ, ದನ ಮಾಂಸದ ಮಾರುಕಟ್ಟೆಯ ವ್ಯವಸ್ಥೆಯಂತೂ ಹೇಳತೀರದು. ಎಲ್ಲೆಂದರಲ್ಲಿ ಕಸದ ರಾಶಿ ಮತ್ತು ಮಾಂಸಗಳ ತ್ಯಾಜ್ಯ ತುಂಬಿರುತ್ತದೆ. ಇಂಥ ವಾತಾವರಣದಲ್ಲಿರುವ ಹೊಟೇಲ್‌ಗಳು, ಟೀ ಅಂಗಡಿಗಳು ಮತ್ತು ಇತರೆ ತಿಂಡಿ ತಿನಸು ಅಂಗಡಿಗಳಲ್ಲಿ ಸ್ವಚ್ಛತೆ ಇರುವುದಿಲ್ಲ. ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಸ ವಿಲೇವಾರಿ ಮಾಡಿ, ಚಂರಂಡಿಯನ್ನು ಸ್ವಚ್ಛಗೊಳಿಸಿ, ಡಿಡಿಟಿ ಪೌಡರ್ ಸಿಂಪಡಿಸುವ ಕೆಲಸವನ್ನು ಸಹ ಮಾಡುತ್ತಿಲ್ಲ ಎಂಬುದು ವ್ಯಾಪಾರಸ್ಥರ ಆರೋಪ.
 ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಂ.ಜಿ.ಮಾರುಕಟ್ಟೆಯತ್ತ ಗಮನ ಹರಿಸಿ ಸಾರ್ವಜನಿಕರು, ಗ್ರಾಹಕರು, ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ಅಂಗವಿಕಲರು ಮಾರುಕಟ್ಟೆಯಲ್ಲಿ ದಿನನಿತ್ಯ ಪಡುತ್ತಿರುವ ಕಿರಿಕಿರಿಯ ಬಗ್ಗೆ ಸೂಕ್ತಕ್ರಮವನ್ನು ಜರುಗಿಸಬೇಕಾಗದ ಅಗತ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.