ಕೋಲಾರ

ಸಾರ್ವಜನಿಕ ಶೌಚಾಲಯ ಸರ್ವನಾಶ!

Published On :

ಕನ್ನಡಪ್ರಭ ವಾರ್ತೆ, ಗುಡಿಬಂಡೆ, ಮೇ 25
ಸರ್ಕಾರ ಬಡಜನರಿಗೆ ಉಪಯುಕ್ತವಾಗುವ ಉದ್ದೇಶದಿಂದ ಸ್ಥಳೀಯ ಪಪಂ ವತಿಯಿಂದ ಪಟ್ಟಣದಲ್ಲಿ ಸುಮಾರು 18 ಲಕ್ಷ ವೆಚ್ಚದಲ್ಲಿ 3 ವಾರ್ಡ್‌ಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದೆ. ಆದರೆ, ಜನರು ಮಾತ್ರ ಈ ಶೌಚಾಲಯಗಳನ್ನು ಬಳಸದೇ ಸರ್ಕಾರ ಉದ್ದೇಶವನ್ನೇ ಅಣಕಿಸುತ್ತಿರುವ ಹಾಗಿದೆ.
ಮುಖ್ಯಮಂತ್ರಿಗಳ ನಗರಾಭಿವೃದ್ಧಿ ಯೋಜನೆಯಡಿ 2009-2010 ನೇ ಸಾಲಿನಲ್ಲಿ ಪಟ್ಟಣದ 1ನೇ ವಾರ್ಡಿನ ಇಂದಿರಾನಗರದಲ್ಲಿ 5 ಲಕ್ಷ, 6ನೇ ವಾರ್ಡಿನ ನಾಯಕರ ಕಾಲೋನಿಯಲ್ಲಿ 5 ಲಕ್ಷ ಮತ್ತು 10ನೇ ವಾರ್ಡಿನ ಬಾಪೂಜಿನಗರದಲ್ಲಿ 8 ಲಕ್ಷ ವೆಚ್ಚದಲ್ಲಿ ಒಟ್ಟು 6 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಶೌಚಾಲಯಗಳ ಉದ್ಘಾಟನೆಯಾದ ದಿನದಿಂದ ಇಂದಿನವರೆಗೂ ಸಮರ್ಪಕವಾಗಿ ಬಳಕೆಯಾದ ಉದಾಹರಣೆಗಳೇ ಇಲ್ಲ.
ನಿರ್ವಹಣೆ ಕೊರತೆ: 10ನೇ ವಾರ್ಡ್‌ನಲ್ಲಿರುವ ಶೌಚಾಲಯದಲ್ಲಿ ಅಳವಡಿಸಿದ್ದ ನೀರಿನ ಪ್ಲಾಸ್ತಿಕ್ ಟ್ಯಾಂಕ್, ಪೈಪ್, ಮುಂತಾದ ವಸ್ತುಗಳು ಕಳ್ಳರ ಪಾಲಾಗಿವೆ. ಈ ಬಗ್ಗೆ ನಗರಸಭೆ ಸದಸ್ಯ ಅಪ್ಸರ್ ಪ್ರತಿಕ್ರಿಯಿಸಿದ್ದು, ನನ್ನ ವಾರ್ಡ್‌ನಲ್ಲಿ ಬಡ ಜನರೇ ಹೆಚ್ಚು. ಅವರು ಇವುಗಳನ್ನು ಬಳಸಿಕೊಳ್ಳಳು ಮುಂದೆ ಬರುತ್ತಿಲ್ಲ ಎಂದಿದ್ದಾರೆ.
ಜನರು ಏನು ಅಂತಾರೆ?: ಸರ್ಕಾರವೇನೋ ನಮ್ಮ ಅನುಕೂಲಕ್ಕೆ ಶೌಚಾಲಯ ನಿರ್ಮಿಸಿದೆ. ಆದರೆ ಕೆಲವರು ಶೌಚಾಲಯಗಳನ್ನು ಸೂಕ್ತ ರೀತಿ ಬಳಸಿಕೊಳ್ಳಲು ಮುಂದಾಗುವುದಿಲ್ಲ. ಶೌಚಾಲಯಗಳನ್ನು ಬಳಸುವವರು ಅಲ್ಲಿಯ ಸ್ವಚ್ಛತೆ ಬಗ್ಗೆ ಗಮನಹರಿಸುವುದಿಲ್ಲ. ಹಾಗಾಗಿ, ಶೌಚಾಲಯ ಅಕ್ಕಪಕ್ಕದಲ್ಲಿರುವ ನಮಗೆ ರೋಗಗಳು ಹರಡುವ ಭೀತಿ ಇದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.