ಕೋಲಾರ

ಸಾಲ ಬಾಧೆಯಿಂದ ವಕೀಲ ಆತ್ಮಹತ್ಯೆ

Published On :

ಕೋಲಾರ: ಸಾಲ ಬಾಧೆಯಿಂದ ಮನನೊಂದು ವಕೀಲರೊಬ್ಬರು ನಗರದ ಸಮೀಪದ ತೇರಹಳ್ಳಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಹಳೆಯ ಮಂಟಪದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ವಕೀಲ ಕೆ.ಎಸ್. ಮಂಜುನಾಥ್(35)ಎಂದು ಗುರುತಿಸಲಾಗಿದೆ.  ಮೂಲತಃ ಚಿಂತಾಮಣಿ ತಾಲೂಕಿನ ಕಂದನಹಳ್ಳಿಯವರಾದ ಮಂಜುನಾಥ್ ವಕೀಲರಾಗಿದ್ದು ಕೋಲಾರದ ಕಾರಂಜಿಕಟ್ಟೆಯ 4ನೇ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಐಪಿಎಲ್ ಕ್ರಿಕೆಟ್‌ಗೆ ಬಾಜಿ ಕಟ್ಟುವ ಹವ್ಯಾಸ ಹೊಂದಿದ್ದ ಮಂಜುನಾಥ್, ಸುಮಾರು 80 ಲಕ್ಷ ರು. ಕಳೆದುಕೊಂಡು ಸಾಲಗಾರರಾಗಿದ್ದರು. ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಇವರನ್ನು ಕುಟುಂಬದವರು ರಕ್ಷಿಸಿದ್ದರು.  ಮೂರು ದಿನಗಳ ಹಿಂದೆ ಮನೆ ಬಿಟ್ಟ ಮಂಜುನಾಥ್ ಕೋಲಾರದ ತೇರಹಳ್ಳಿ ಬೆಟ್ಟದ ರಸ್ತೆಯಲ್ಲಿನ ಹಳೆ ಮಂಟಪದಲ್ಲಿ ವಿಷ ಸೇವಿಸಿದ್ದಾರೆ. ಸಾಯುವ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಒಂದು ವೇಳೆ ತಾನು ಬದುಕುಳಿದಲ್ಲಿ ಜನತೆ ಹಾಗೂ ಮಾಧ್ಯಮದವರು ಆರ್ಥಿಕ ಸಹಾಯ ಮಾಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಮೃತನಿಗೆ ಪತ್ನಿ ಹಾಗೂ 15 ದಿನಗಳ ಮಗು ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.